ಚುನಾವಣೆಯಲ್ಲಿ ವಂಚನೆ ನಡೆದಿಲ್ಲ ಎಂದ ಟ್ರಂಪ್ ಆಪ್ತ ಅಟಾರ್ನಿ ಜನರಲ್

ವಾಷಿಂಗ್ಟನ್, ಡಿಸೆಂಬರ್ 2: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಬೆಂಬಲಿಗರು ಆರೋಪಿಸಿರುವಂತೆ ಚುನಾವಣೆಯ ಫಲಿತಾಂಶವನ್ನು ಬದಲಿಸುವ ಮಟ್ಟದ ಯಾವುದೇ ವ್ಯಾಪಕ ವಂಚನೆಗಳಿಗೆ ಪುರಾವೆ ನ್ಯಾಯಾಂಗ ಇಲಾಖೆಗೆ ಕಂಡುಬಂದಿಲ್ಲ ಎಂದು ಅಮೆರಿಕದ ಅಟಾರ್ನಿ ಜನರಲ್ ವಿಲಿಯಮ್ ಬಾರ್ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಮತಗಳನ್ನು ಕದಿಯಲಾಗಿದೆ, ಭಾರಿ ಪ್ರಮಾಣದಲ್ಲಿ ವಂಚನೆ ನಡೆದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಜತೆಗೆ ಜೋ ಬೈಡನ್ ಎದುರು ಸೋಲೊಪ್ಪಿಕೊಳ್ಳಲು ಅವರು ನಿರಾಕರಿಸುತ್ತಿದ್ದಾರೆ. ಅದರ ನಡುವೆಯೇ ಬಾರ್ ಅವರು ಈ ಹೇಳಿಕೆ ನೀಡಿದ್ದಾರೆ.

ತಮಗೆ ಬಂದ ದೂರುಗಳು ಮತ್ತು ನಿರ್ದಿಷ್ಟ ಮಾಹಿತಿಗಳ ಆಧಾರದಲ್ಲಿ ಅಮೆರಿಕ ಅಟಾರ್ನಿಗಳು ಮತ್ತು ಎಫ್‌ಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಚುನಾವಣೆಯ ಫಲಿತಾಂಶವನ್ನು ಬದಲಿಸುವಂತಹ ಯಾವುದೇ ಪ್ರಮುಖ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.

US Attorney General William Barr Says No Fraud Found That Could Change Election Outcome

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತಿ ಆಪ್ತ ಅಧಿಕಾರಿಗಳಲ್ಲಿ ಒಬ್ಬರೆನಿಸಿರುವ ಬಾರ್ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ. ಚುನಾವಣೆಗೂ ಮುನ್ನ ಬಾರ್ ಅವರು, ಅಮೆರಿಕನ್ನರು ಕೊರೊನಾ ವೈರಸ್ ಭೀತಿಯಿಂದ ಮತದಾನಕ್ಕೆ ತೆರಳಲು ಭಯಪಡುತ್ತಾರೆ. ಬದಲಾಗಿ ಮೇಲ್ ಮೂಲಕ ಮತಚಲಾವಣೆಯನ್ನು ಆಯ್ದುಕೊಳ್ಳುತ್ತಾರೆ. ಮೇಲ್ ಇನ್ ಮತಗಳು ದೊಡ್ಡ ವಂಚನೆಗೆ ಕಾರಣವಾಗಬಹುದು ಎಂದು ಹೇಳಿದ್ದರು.

ಕಳೆದ ತಿಂಗಳು ದೇಶದೆಲ್ಲೆಡೆ ಇರುವ ಅಟಾರ್ನಿಗಳಿಗೆ ಆದೇಶ ಹೊರಡಿಸಿದ್ದ ಬಾರ್ ಅವರು, ಮತದಾನದಲ್ಲಿ ಅಕ್ರಮಗಳು ನಡೆದಿದೆ ಎಂಬ ಆರೋಪಗಳಿಗೆ ಸೂಕ್ತ ಪುರಾವೆಗಳಿವೆಯೇ ಎಂದು ನೋಡುವಂತೆ ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+