ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಮೇ 4: ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ 1 ಲಕ್ಷ ಮಂದಿ ಬಲಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಂದಾಜಿಗಿಂತ ಕೊರೊನಾದಿಂದ ಮೃತ ಪಡುತ್ತಿರುವವರ ಸಂಖ್ಯೆಯನ್ನು ನೋಡಿ ನಾವು ಅಂದುಕೊಂಡಂತಿಲ್ಲ,ಸುಮಾರು ಲಕ್ಷ ಮಂದಿ ಸಾಯುವ ಸಾಧ್ಯತೆ ಇದೆ ಎಂದಿದ್ದಾರೆ.
ಫಾಕ್ಸ್ ನ್ಯೂಯ್ಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಚೀನಾದಲ್ಲಿಯೇ ಹುಟ್ಟಿಕೊಂಡಿದೆ, ಎಂದು ಮತ್ತೆ ಚೀನಾದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅಮೆರಿಕದಲ್ಲಿ 11 ಲಕ್ಷ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಈಗಾಗಲೇ 67 ಸಾವಿರ ಮಂದಿ ಮೃತಪಟ್ಟಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದ್ದು, ಉದ್ಯಮ ನಿಂತೇ ಹೋಗಿದೆ.

ಈಗಿರುವ ಸ್ಥಿತಿಯನ್ನು ನೋಡಿದರೆ ನಾವು 1 ಲಕ್ಷ ಮಂದಿಯನ್ನು ಕಳೆದುಕೊಳ್ಳುತ್ತೇವೆ. ಅದು ಬೇಸರದ ಸಂಗತಿ. ಕಳೆದ ವಾರವಷ್ಟೇ 60-70 ಸಾವಿರ ಮಂದಿ ಮೃತಪಡುವ ಸಾಧ್ಯತೆ ಇದೆ ಎಂದು ಹೇಳಿದ್ದರು ಇದೀಗ 1 ಲಕ್ಷ ಮಂದಿ ಕೊರೊನಾಗೆ ಬಲಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
2020 ಕಳೆಯುವುದರ ಒಳಗಾಗಿ ಲಸಿಕೆಯನ್ನು ಕಂಡು ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಾಕಷ್ಟು ತಜ್ಞರು 18 ತಿಂಗಳೊಳಗೆ ಔಷಧ ಕಂಡು ಹಿಡಿಯುವುದು ಕಷ್ಟ ಎಂದಿದ್ದರು.ಆಟಮ್ ಕಾಲದಲ್ಲಿ ಮಕ್ಕಳು ಮತ್ತೆ ಶಾಲಾ, ಕಾಲೇಜುಗಳಿಗೆ ತೆರಳಬಹುದು ಎಂದು ಅಂದಾಜಿಸಿದ್ದಾರೆ.












Click it and Unblock the Notifications