ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಶನ್ ಶಕ್ತಿ ಯಶಸ್ಸಿಗೆ ಅಮೆರಿಕ ಹೇಳಿದ್ದೇನು? ಅದೇನು ವಾರ್ನಿಂಗಾ?!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 28: ಭಾರತವು ಉಪಗ್ರಹ ಪ್ರತಿರೋಧಕ ಅಸ್ತ್ರ ಎ-ಸ್ಯಾಟ್ ಅನ್ನು ಯಶಸ್ವೀಯಾಗಿ ಪರೀಕ್ಷಿಸಿದ್ದು, ಇಂಥದೊಂದು ಅಸ್ತ್ರವನ್ನು ಹೊಂದಿರುವ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾರತ ಈ ಸಾಧನೆಗೆ ಅಭಿನಂದಿಸಿರುವ ಅಮೆರಿಕ, ನಂತರ ನೀಡಿದ ಹೇಳಿಕೆಯನ್ನು ಎಚ್ಚರಿಕೆ ಎಂದೇ ಪರಿಗಣಿಸಬೇಕಾಗುತ್ತದೆ. "ನಾವೆಲ್ಲರೂ ಬಾಹ್ಯಾಕಾಶದಲ್ಲಿ ಬದುಕುತ್ತಿದ್ದೇವೆ, ಆದ್ದರಿಂದ ಅದನ್ನು ಅವ್ಯವಸ್ಥಿತಕೊಳಿಸೋದು ಬೇಡ. ನಾವು ವ್ಯವಹಾರ ಮಾಡಲು, ನಾವು ಸ್ವತಂತ್ರವಾಗಿ ಹಾರಾಡಲು ಬಾಹ್ಯಾಕಾಶ ಒಂದು ಜಾಗವಾಗಲಿ. ಆದರೆ ಉಪಗ್ರಹಗಳನ್ನು ಹೊಡೆದು, ಬಾಹ್ಯಾಕಾಶವನ್ನು ಕೊಳಕು ಮಾಡುವುದು ಬೇಡ" ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶನಹಾನ್ ಹೇಳಿದ್ದಾರೆ.

ಮಿಶನ್ ಶಕ್ತಿ ಬಗ್ಗೆ ಯುಪಿಎಗೆ ಇಚ್ಛಾಶಕ್ತಿ ಕೊರತೆ: ಇಸ್ರೋ ಮಾಜಿ ಅಧ್ಯಕ್ಷ ಆರೋಪಮಿಶನ್ ಶಕ್ತಿ ಬಗ್ಗೆ ಯುಪಿಎಗೆ ಇಚ್ಛಾಶಕ್ತಿ ಕೊರತೆ: ಇಸ್ರೋ ಮಾಜಿ ಅಧ್ಯಕ್ಷ ಆರೋಪ

ಅಮೆರಿಕವು ಭಾರತದ ಉಪಗ್ರಹ ಪ್ರತಿರೋಧಕ ಅಸ್ತ್ರದ ಪರೀಕ್ಷೆಯ ಕುರಿತು ಅಧ್ಯಯನ ಮಾಡುತ್ತಿದೆ. ನಂತರ ನಾವು ಈ ಕುರಿತು ಮಾತನಾಡುತ್ತೇವೆ ಎಂದು ಅವರು ಹೇಳಿದರು.

ಅಮೆರಿಕದ ಮಾತಿನ ಅರ್ಥವೇನು?

ಅಮೆರಿಕದ ಮಾತಿನ ಅರ್ಥವೇನು?

ಬಾಹ್ಯಾಕಾಶವನ್ನು ನೀವು ಅಸ್ಥಿರಗೊಳಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲಿ ಉಪಗ್ರಹಗಳ ತ್ಯಾಜ್ಯದ ಸಮಸ್ಯೆ ಉಂಟಾಗಬಾರದು. Anti-satellite ಟೆಸ್ಟ್ ಗಳಿಂದ ಅಂಥ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕ ಹೇಳಿದೆ.

ಭಾರತದ ಸಮಜಾಯಿಷಿ ಏನು?

ಭಾರತದ ಸಮಜಾಯಿಷಿ ಏನು?

ಉಪಗ್ರಹ ತ್ಯಾಜ್ಯವು ಸಮಸ್ಯೆ ಸೃಷ್ಟಿಸುವ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಭಾರತ ಎ ಸ್ಯಾಟ್ ಪರೀಕ್ಷೆಯ ನಂತರ ಇದಕ್ಕೆ ಸಮಜಾಯಿಷಿಯನ್ನೂ ನೀಡಿತ್ತು. "ನಾವು ಎ ಸ್ಯಾಟ್ ಪರೀಕ್ಷೆಯನ್ನು low-earth orbit ನಲ್ಲಿ ಮಾಡಿದ್ದರಿಂದ ಬಾಹ್ಯಾಕಾಶದಲ್ಲೇ ತ್ಯಾಜ್ಯಗಳು ಉಳಿದುಹೋಗುವ ಭಯವಿಲ್ಲ. ಅವು ನಾಶವಾಗಿ, ಇನ್ನೊಂದು ವಾರದೊಳಗೆ ಭೂಮಿಗೆ ಬೀಳುತ್ತವೆ" ಎಂದು ಭಾರತ ಹೇಳಿದೆ.

ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ

ಬಾಹ್ಯಾಕಾಶಕ್ಕೂ ನಿಯಮವಿರಲಿ

ಬಾಹ್ಯಾಕಾಶಕ್ಕೂ ನಿಯಮವಿರಲಿ

"ಬಾಹ್ಯಾಕಾಶದ ರಸ್ತೆಗಳಿಗೆ ಯಾವುದೇ ನಿಯಮಗಳಿಲ್ಲದಿರುವುದು ಮುಂದೊಮ್ಮೆ ಅಪಾಯ ತಂದೊಡ್ಡಬಹುದು. ನಾವು ಅದಕ್ಕೊಂದು ನಿಯಮ ತರಬೇಕಿದೆ. ಪ್ರತಿ ದೇಶವೂ ತಂತ್ರಜ್ಞಾನವನ್ನು ಹೇಗೆ ಬೆಳೆಸಿದೆ ಮತ್ತು ಅದನ್ನು ಹೇಗೆ ಪರೀಕ್ಷಿಸುತ್ತದೆ ಎಂಬುದನ್ನು ತಿಳಿಯುವುದು ಮಹತ್ವದ್ದು. ಯಾರೇ ಬಾಹ್ಯಾಕಾಶದಲ್ಲಿ ಪರೀಕ್ಷೆ ನಡೆಸಿದರೂ ಅದು ಮತ್ತೊಂದು ದೇಶದ ಆಸ್ತಿಗೆ(ಉಪಗ್ರಹಗಳಿಗೆ) ಹಾನಿಯಾಗಬಾರದು" ಎಂದು ಶನಾಹಾನ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ತೋರಿದ್ದು ಕಾಳಜಿಯಾ ಅಥವಾ ಎಚ್ಚರಿಕೆಯಾ?

ಅಮೆರಿಕ ತೋರಿದ್ದು ಕಾಳಜಿಯಾ ಅಥವಾ ಎಚ್ಚರಿಕೆಯಾ?

ಅಮೆರಿಕ, ರಷ್ಯಾ ಮತ್ತು ಚೀನಾವನ್ನು ಬಿಟ್ಟರೆ ಉಪಗ್ರಹ ಪ್ರತಿರೋಧಕ ಅಸ್ತ್ರವನ್ನು ಹೊಂದಿರುವ ದೇಶ ಭಾರತ! ಅಮೆರಿಕ ಭಾರತದ ಸಾಧನೆಯನ್ನು ಶ್ಲಾಘಿಸಿದ್ದಕ್ಕಿಂತ ಹೆಚ್ಚಾಗಿ ಬಾಹ್ಯಾಕಾಶವನ್ನು ಕೊಳಕುಮಾಡುವುದು ಬೇಡ ಎಂಬೆಲ್ಲ ಹೇಳಿಕೆ ನೀಡಿರುವುದನ್ನು ನೋಡಿದರೆ, ಅದು ಭಾರತಕ್ಕೆ ಎಚ್ಚರಿಕೆ ನೀಡಿದಂತಿದೆ. ಒಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರವಾಗಿ, ಉಪಗ್ರಹ ಪ್ರತಿರೋಧನ ಅಸ್ತ್ರವನ್ನು ಹೊಂದುವ ಮೂಲಕ ಅಮೆರಿಕದ ಸಾಲಿನಲ್ಲೇ ನಿಂತ ಭಾರತದ ಶಕ್ತಿ ಅಮೆರಿಕಕ್ಕೆ ಕೊಂಚ 'ಹೊಟ್ಟೆಉರಿ' ತಂದಿದ್ದರೆ ಅದು ಸಹಜವೇ ತಾನೇ?!

English summary
"We are studying India's anti-satellite weapon test. Do not make mess in space" this is the United states of America's reaction for India's Anti satellite weapons test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X