ಛತ್ರಿ ಮುಚ್ಚಲು ಹೆಣಗಿದ ಟ್ರಂಪ್, ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲು

ವಾಷಿಂಗ್ಟನ್, ಅಕ್ಟೋಬರ್ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಮಾಡಿದರೂ ಆಡಿಕೊಂಡು ನಗುವವರಿಗೇನು ಕಡಿಮೆ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ಹಾಸ್ಯದ ಹೊನಲಿನಲ್ಲಿ ಟ್ರಂಪ್ ಕೈಲಿದ್ದ ಛತ್ರಿ ಮುಳುಗಿದೆ. ಅಷ್ಟು ದೊಡ್ಡ ದೇಶದ ಅಧ್ಯಕ್ಷರಾಗಿರುವ ಟ್ರಂಪ್ ಅವರು ಟ್ರಾಲ್ ಆಗುವಂತೆ ಮಾಡಿದ್ದು ಒಂದು ಸಣ್ಣ ವಿಡಿಯೋ ತುಣುಕು.

ಏರ್ ಫೋರ್ಸ್ ಒನ್ ವಿಮಾನ ಏರಿದ ಟ್ರಂಪ್ ಅವರ ಪ್ರತಿ ಹೆಜ್ಜೆಗೂ ಟ್ರಾಲ್ ಮಾಡಲಾಗಿದೆ. ವಿಮಾನ ಏರಿ ಒಳ ಹೊಕ್ಕುವ ಮೊದಲು ಕೈಲಿದ್ದ ಛತ್ರಿ ಮುಚ್ಚಿ, ಮಡಿಚಲು ಆಗದೆ ಹಾಗೆ ಒಳ ಹೋಗುವ ದೃಶ್ಯ ಈಗ ಚರ್ಚಾಸ್ಪದವಾಗಿದೆ.

ಟ್ರಂಪ್ ಅವರು ಎಲ್ಲವನ್ನು ಈ ಛತ್ರಿಯಂತೆ ಟ್ರೀಟ್ ಮಾಡುತ್ತಾರೆ. 2 ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಯೋಚಿಸಬೇಕಾದರೆ, ಅದನ್ನು ಅಲ್ಲೇ ಡ್ರಾಪ್ ಮಾಡಿಬಿಡುತ್ತಾರೆ ಎಂದು ಒಬ್ಬ ಟ್ವಿಟ್ಟಗರು ಬರೆದುಕೊಂಡಿದ್ದಾರೆ.

ಇಲಿನಾಯ್ ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಹೊರಟ್ಟಿದ್ದ ಟ್ರಂಪ್ ಅವರು ಪ್ರತಿಕೂಲ ಹವಾಮಾನದಿಂದ ರಕ್ಷಿಸಿಕೊಳ್ಳಲು ಛತ್ರಿಯನ್ನು ಬಳಸಿಕೊಂಡಿದ್ದರು. ಮೇರಿಲ್ಯಾಂಡ್ ನ ಜಾಂಟ್ ಬೇಸ್ ಆಂಡ್ರ್ಯೂಸ್ ನಲ್ಲಿ ಏರ್ ಕ್ರಾಫ್ಟ್ ಏರಿದ ಟ್ರಂಪ್ ಅವರು ಛತ್ರಿ ಮುಚ್ಚದೆ ಹಾಗೆ ಹಾಕಿ ಹೋಗಿದ್ದು ಈಗ ದೊಡ್ಡ ಸುದ್ದಿ.

ಛತ್ರಿ ಮುಚ್ಚಲು ಹೆಣಗಾಡಿದ್ದಷ್ಟೇ ಅಲ್ಲ

ಛತ್ರಿ ಮುಚ್ಚಲು ಹೆಣಗಾಡಿದ್ದಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೂಗೆ ಟಾಯ್ಲೆಟ್ ಪೇಪರ್ ಮೆತ್ತಿಕೊಂಡಿದೆ ನೋಡಿ, ಎಂಥಾ ಪ್ರಮಾದ ಎಂದು ವಿಡಿಯೋ ಹಾಕಲಾಗಿದೆ.

ಒಂದು ಬಟನ್ ಇರುತ್ತದೆ ಎಂಬುದು ಗೊತ್ತಿಲ್ಲ

ಏರ್ ಕ್ರಾಫ್ಟ್ ಬಾಗಿಲಿನೊಳಗೆ ಛತ್ರಿ ಸಮೇತ ಹೋಗಲು ಟ್ರಂಪ್ ಯತ್ನಿಸಿದ್ದಾರೆ. ಆದರೆ, ಛತ್ರಿ ಮಡಿಚದೆ ತೆಗೆದುಕೊಂಡು ಹೋಗುವುದು ಕಷ್ಟ ಎಂದು ಗೊತ್ತಾಗಿದೆ. ಛತ್ರಿ ಮುಚ್ಚಲು ಯತ್ನಿಸಿ ವಿಫಲರಾಗಿ, ಅಲ್ಲೆ ಬಾಗಿಲ ಬಳಿ ಹಾಕಿ ಒಳಕ್ಕೆ ಹೋಗಿದ್ದಾರೆ. ಛತ್ರಿ ಕ್ಲೋಸ್ ಮಾಡಲು ಒಂದು ಬಟನ್ ಇರುತ್ತದೆ ಎಂಬುದು ಗೊತ್ತಿಲ್ಲ

ಹೌದು ಛತ್ರಿ ಏಕೆ ಮುಚ್ಚಲಿಲ್ಲ

ಡೊನಾಲ್ಡ್ ಟ್ರಂಪ್ ಅವರಿಗೆ ಛತ್ರಿ ಮುಚ್ಚುವಷ್ಟು ಟೈಮ್ ಇರಲಿಲ್ಲ. ಅದಕ್ಕೆ ಹಾಗೆ ಅದನ್ನು ಅಲ್ಲಿ ಎಸೆದು ಹೋಗಿದ್ದಾರೆ ಇದಕ್ಕೆ ಏನೇನೋ ಅರ್ಥ ಕಲ್ಪಿಸುವುದು ಬೇಡ.

ಅನಾಥವಾಗಿ ಬಿದ್ದ ಛತ್ರಿ

ಅಮೆರಿಕ ಅಧ್ಯಕ್ಷರನ್ನು ಗಾಳಿಯಿಂದ ರಕ್ಷಿಸಿದ ಛತ್ರಿ ಕೆಲ ಕ್ಷಣಗಳ ನಂತರ ಅನಾಥವಾಗಿ ಬಾಗಿಲ ಬಳಿ ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+