ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ರಿಂದ ಅಂತಿಮ ಗೌರವ: ಬುಷ್ ಮೃತದೇಹ ಕರೆತರಲು ಏರ್ ಫೋರ್ಸ್ ಒನ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 02: ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್ ಎಚ್ ಡಬ್ಲ್ಯೂ ಬುಷ್(94) ಅವರಿಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮದೇ ಆದ ರೀತಿಯಲ್ಲಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಬುಷ್ ಅವರ ಮೃತದೇಹವನ್ನು ಕರೆತರಲು ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನವನ್ನು ಕಳಿಸಿದ್ದಾರೆ.

ಬುಷ್ ಅವರ ದೇಹವನ್ನು ಟೆಕ್ಸಾಸ್ ನಿಂದ ವಾಷಿಂಗ್ಟನ್ ಗೆ ಕರೆ ತರಲು ವಿಮಾನವನ್ನು ಕಳಿಸಲು ಸೂಚಿಸಿದ್ದಾರೆ. ನ್ಯಾಷನಲ್ ಕ್ಯಾಥೆಡ್ರಲ್ ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮೆಲನಿಯಾ ಅವರು ಈ ಅಂತಿಮ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್ ಡಬ್ಲ್ಯು ಬುಷ್ ನಿಧನ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್ ಡಬ್ಲ್ಯು ಬುಷ್ ನಿಧನ

1989 ರಿಂದ 1993 ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಅವರು, ಕಳೆದ ಕೆಲವು ವರ್ಷಳಿಂದ ವ್ಹೀಲ್ ಚೇರ್ ನಲ್ಲೇ ಬದುಕು ಸವೆಸುತ್ತಿದ್ದರು. ಅವರು ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ಅಗಲಿಕೆಗೆ ವಿಶ್ವದ ಗಣ್ಯರು ಕಂಬನಿ ಮಿಡಿದಿದ್ದಾರೆ.

Trump Sending His Presidential Plane To Fly HW Bush Casket To Washington

1924ರ ಜೂನ್ 12ರಂದು ಮೆಸಾಚ್ಯುಸೆಟ್ಸ್ ನ ಮಿಲ್ಟನ್ ನಲ್ಲಿ ಜನಿಸಿದ ಬುಷ್ ಅವರು 1945ರಲ್ಲಿ ಬರ್ಬಾರಾ ಪಿಯರ್ಸ್ ಅವರನ್ನು ಮದುವೆಯಾದರು. ದಂಪತಿಗೆ 6 ಮಂದಿ ಮಕ್ಕಳು.

18ನೇ ವಯಸ್ಸಿನಲ್ಲಿ ನೌಕಾದಳ ಸೇರಿದ ಬುಷ್ ಅವರು ಯುದ್ಧ ವಿಮಾನ ಪೈಲಟ್ ಆಗಿ 58 ಸಮರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಹಾಗೂ ಸಿಐಎ ಮಾಜಿ ಮುಖ್ಯಸ್ಥರಾಗಿದ್ದರು. ನವೆಂಬರ್ 08, 1988ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಜನವರಿ 1993ರವರೆಗೂ ಅಧಿಕಾರದಲ್ಲಿದ್ದರು.

ಸೋವಿಯೆಟ್ ಯೂನಿಯನ್ ವಿದಳನ, ಜರ್ಮನ್ ಗೋಡೆ ಕುಸಿತ, ಏಕೀಕರಣ, ನ್ಯಾಟೋಗೆ ಸೇರ್ಪಡೆ, ಲ್ಯಾಟಿನ್ ಅಮೆರಿಕದವರೆಗೂ ಸರ್ವಾಧಿಕಾರಿಗಳಿದ್ದ ಸರ್ಕಾರಗಳು ಪತನಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಗಿದ್ದನ್ನು ತಮ್ಮ ಅವಧಿಯಲ್ಲಿ ಕಂಡವರು.

1990ರ ವೇಳೆ ಇರಾಕಿನ ಪಡೆಗಳು ಸರ್ವಾಧಿಕಾರಿ ಸದ್ದಾಂ ಹುಸೇನ್ ನೇತೃತ್ವದಲ್ಲಿ ನೆರೆಯ ಕುವೈತ್ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 32ಕ್ಕೂ ಅಧಿಕ ದೇಶಗಳ ಮೈತ್ರಿಕೂಟ ರಚನೆಗೆ ಕಾರಣರಾದ ಬುಷ್, ಸದ್ದಾಂ ಹುಟ್ಟಡಗಿಸಿ, ಕುವೈತ್ ರಕ್ಷಿಸಿದ್ದರು.

English summary
Donald Trump announced Saturday he would send his presidential aircraft to bring the casket of his late predecessor George H.W. Bush from Texas to Washington, where he will lie in state this week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X