ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಅಂತ್ಯದೊಳಗೆ ಕೊರೊನಾ ಔಷಧ ನಮ್ಮ ಕೈಸೇರಲಿದೆ: ಟ್ರಂಪ್ ವಿಶ್ವಾಸ

|
Google Oneindia Kannada News

ವಾಷಿಂಗ್ಟನ್, ಮೇ 4: ಕೊರೊನಾಗೆ ಔಷಧ ಕಂಡು ಹಿಡಿಯಲಾಗುತ್ತಿದ್ದು 2020ರ ಅಂತ್ಯದೊಳಗೆ ನಮ್ಮ ಕೈಸೇರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Recommended Video

ಮನೆಯಲ್ಲೇ ಸುಲಭಬಾಗಿ ಸ್ಯಾನಿಟೈಸರ್ ತಯಾರಿಸಬಹುದು.ನೀವೂ ಟ್ರೈ ಮಾಡಿ | Sanitizer | Oneindia Kannada

ಡಿಸೆಂಬರ್ ಅಂತ್ಯದೊಳಗೆ ಕೊರೊನಾ ವೈರಸ್‌ಗೆ ಔಷಧ ಕಂಡು ಹಿಡಿಯುವ ಬಗ್ಗೆ ನಮಗೆ ನಂಬಿಕೆ ಇದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ ಎಂದರು. ಫಾಕ್ಸ್ ನ್ಯೂಸ್'ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ವರ್ಷಾಂತ್ಯದೊಳಗೆ ಕೊರೋನಾ ನಿರ್ಮೂಲನಾ ಲಸಿಕೆ ನಮ್ಮ ಕೈ ಸೇರಲಿದೆ. ಈ ಬಗ್ಗೆ ನನಗೆ ವಿಶ್ವಾಸವಿದೆ.

ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?

ಇನ್ನೊಂದೆಡೆ ಕೊರೊನಾ ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ Remdesivir (ರೆಮ್ದೆಸಿವಿರ್) ಪರಿಣಾಮಕಾರಿ ಎಂಬ ಅಂಶ ಅಮೆರಿಕದಲ್ಲಿ ನಡೆದ ಪ್ರಯೋಗದಿಂದ ತಿಳಿದುಬಂದಿತ್ತು.

ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ ರೆಮ್ದೆಸಿವಿರ್ ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ''ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ರೆಮ್ದೆಸಿವಿರ್ ಪ್ರಭಾವ 'ಕ್ಲಿಯರ್-ಕಟ್' ಆಗಿದೆ'' ಎಂದು ಅಮೇರಿಕಾದ ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಕೂಡ ಹೇಳಿದ್ದರು.

ಲಸಿಕೆ ಕಂಡು ಹಿಡಿಯುವ ಪ್ರಯತ್ನ

ಲಸಿಕೆ ಕಂಡು ಹಿಡಿಯುವ ಪ್ರಯತ್ನ

ಅಮೆರಿಕಾದಲ್ಲಿ ಸಂಶೋಧಕರು ಈಗಾಗಲೇ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಒಂದೇ ವೇಳೆ ಬೇರೆ ದೇಶದ ಸಂಶೋಧಕರು ಔಷಧಿ ಕಂಡುಹಿಡಿದರೆ, ನಮಗೂ ಸಂತೋಶವಾಗಲಿದ್ದು, ಅವರಿಗೆ ನನ್ನ ಟೋಪಿ ತೆಗೆದು ಧನ್ಯವಾದಗಳನ್ನ ತಿಳಿಸುತ್ತೇನೆ. ಇಂತಹ ಸಂದರ್ಭದಲ್ಲಿ ಲಸಿಕೆ ಕಂಡು ಹಿಡಿಯುವುದೊಂದೇ ನಮ್ಮ ಧ್ಯೇಯ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಕೊರೊನಾಗೆ ಬಲಿಯಾದವರೆಷ್ಟು?

ಅಮೆರಿಕದಲ್ಲಿ ಕೊರೊನಾಗೆ ಬಲಿಯಾದವರೆಷ್ಟು?

ಕೊರೊನಾ ವೈರಸ್ ಮಟ್ಟಹಾಕಲು ಅಮೆರಿಕಾ ಕಂಗಾಲಾಗಿದ್ದು, ಈವರೆಗೂ 68,000 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 11,71,350 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಕೊರೊನಾಗೆ ಮದ್ದು ಕಂಡುಹಿಡಿಯಿತೇ ಬ್ರಿಟನ್, ಮನುಷ್ಯನ ಮೇಲೆ ಪ್ರಯೋಗ!ಕೊರೊನಾಗೆ ಮದ್ದು ಕಂಡುಹಿಡಿಯಿತೇ ಬ್ರಿಟನ್, ಮನುಷ್ಯನ ಮೇಲೆ ಪ್ರಯೋಗ!

ಲಸಿಕೆ ಕಂಡು ಹಿಡಿಯಲು ಒಂದೂವರೆ ವರ್ಷ ಬೇಕು

ಲಸಿಕೆ ಕಂಡು ಹಿಡಿಯಲು ಒಂದೂವರೆ ವರ್ಷ ಬೇಕು

ಸಾಕಷ್ಟು ಸಂಸೋಧಕರು, ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಕನಿಷ್ಠ 18 ತಿಂಗಳುಗಳ ಸಮಯಾವಕಾಶ ಬೇಕೇ ಬೇಕು ಎಂದು ಹೇಳಿದ್ದರು. ಇನ್ನೂ ಕೆಲವರು ಸಾಕಷ್ಟು ವರ್ಷಗಳೇ ಹಿಡಿಯಲಿದೆ ಎಂದಿದ್ದರು. ಇದೀಗ ಡೊನಾಲ್ಡ್ ಟ್ರಂಪ್ ಮಾತು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಯುಕೆಯಲ್ಲಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸಂಶೋಧನೆ

ಯುಕೆಯಲ್ಲಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸಂಶೋಧನೆ

ಯುಕೆಯಲ್ಲಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕೊರೊನಾ ಲಸಿಕೆ ಕುರಿತು ಸಂಶೋಧನೆ ನಡೆಸುತ್ತಿದೆ. ಇದು ಒಂದೊ್ಎ ಫೈನಲ್ ಆದಲ್ಲಿ 2020ರ ಒಳಗೆ ಮಾರ್ಕೆಟ್‌ಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

English summary
In a major announcement, US President Donald Trump on Sunday (May 3) said that he was confident the vaccine for coronavirus vaccine will become available by the end of 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X