ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್
ವಾಷಿಂಗ್ಟನ್, ಏಪ್ರಿಲ್ 15: ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಸರ್ಕಾರ ನೀಡುತ್ತಿದ್ದ ಆರ್ಥಿಕ ನೆರವಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆಯೊಡ್ಡಿದ್ದಾರೆ.
ಕೊರೊನಾವು ಮನುಷ್ಯನಿಂದ ಮನುಷ್ಯನಿಗೆ ಹರಡುವಂತಹ ಕಾಯಿಲೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸುಳ್ಳು ಹೇಳಿತ್ತು. ಚೀನಾ ಪರ ಆರೋಗ್ಯ ಸಂಸ್ಥೆ ಮೃದು ಧೋರಣೆ ಅನುಸರಿಸುತ್ತಿದೆ ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ತಡೆಹಿಡಿಯಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಗೆ 400 ಮಿಲಿಯನ್ ಡಾಲರ್ ನೆರವು ನೀಡುತ್ತಿತ್ತು. 2018-19ರ ಬಜೆಟ್‌ನಲ್ಲಿ 6 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವು ನೀಡಿತ್ತು.
ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಅತಿ ಹೆಚ್ಚು ಆರ್ಥಿಕ ಸಹಾಯ ಮಾಡುತ್ತಿದೆ. ಆದರೆ ಚೀನಾ ಸ್ನೇಹಿಯಾಗಿರುವ ಡಬ್ಲ್ಯುಎಚ್‌ಒ ಮೃದು ಧೋರಣೆ ತಳೆದಿದೆ ಎಂದು ಟ್ರಂಪ್ ಕೆಲವು ದಿನಗಳ ಹಿಂದಷ್ಟೇ ಆರೋಪಿಸಿದ್ದರು.

ವಿಶ್ವ ಆರೋಗ್ಯ ಸಂಸ್ಥೆಗೆ ಅತಿ ದೊಡ್ಡ ಹಣಕಾಸಿನ ಮೂಲ ಅಮೆರಿಕವಾಗಿದೆ. ನಾವು ಡಬ್ಲ್ಯುಎಚ್‌ಒಗೆ ನೀಡಲಿರುವ ನೆರವನ್ನು ತಡೆ ಹಿಡಿಯಲಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.
ಈ ಹಿಂದೆ ಟ್ರಂಪ್ ಅವರ 'ಅಮೆರಿಕ ಮೊದಲು' ಧೋರಣೆಗೆ ವಿಶ್ವಸಂಸ್ಥೆ ಸೇರಿದಂತೆ ಅನೇಕ ಏಜೆನ್ಸಿಗಳು ಟೀಕೆ ಮಾಡಿತ್ತು.
ವಿಶ್ವ ಆರೋಗ್ಯ ಸಂಸ್ಥೆ ಪಕ್ಷಪಾತ ತೋರುತ್ತಿದ್ದು, ಚೀನಾ ವಿರುದ್ಧ ಮೃದು ಧೋರಣೆ ತಲೆದಿದೆ ಎಂದು ಟ್ರಂಪ್ ಆರೋಪ ಮಾಡಿದರು. ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಕೇಂದ್ರಿತವಾಗಿದೆ ಎಂದು ಆರೋಪ ಮಾಡಿದ್ದರು.
ಕೊರೊನಾ ವೈರಸ್ ಚೀನಾದಿಂದಲೇ ಆರಂಭವಾಗಿದೆ. ಇದರ ಹೊರತಾಗಿಯೂ ಆರಂಭದಲ್ಲಿ ತಪ್ಪು ಮಾಹಿತಿಯನ್ನು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಜೊತೆಗಿನ ಬಾರ್ಡರ್ ತೆರೆದುಕೊಳ್ಳುವಂತೆ ಸೂಚಿಸಿತ್ತು.ಅದೃಷ್ಟವಶಾತ್ ಡಬ್ಲ್ಯುಎಚ್‌ಒ ಸಲಹೆಯನ್ನು ನಾನು ನಿರಾಕರಿಸಿದ್ದೆ ಎಂದು ಟ್ರಂಪ್ ಹೇಳಿದ್ದರು.












Click it and Unblock the Notifications