ಕೊರೊನಾವೈರಸ್ ಚಿಕಿತ್ಸೆ ಕುರಿತಂತೆ ಮಹತ್ವದ ಘೋಷಣೆ

ವಾಷಿಂಗ್ಟನ್, ಆ. 24: ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಪ್ರಚಾರದ ನಡುವೆ ಅಮೆರಿಕ ಅಧ್ಯಕ್ಷ ಮತ್ತೊಮ್ಮೆ ಕೊರೊನಾವೈರಸ್ ಚಿಕಿತ್ಸೆ ಕುರಿತಂತೆ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಕಾನ್ವಲೆಸೆಂಟ್ ಪ್ಲಾಸ್ಮಾ ಚಿಕಿತ್ಸೆ ನೀಡಬಹುದು ಇದಕ್ಕೆ ಎಫ್ ಡಿಐ ಅನುಮತಿ ನೀಡಿದೆ ಎಂದಿದ್ದಾರೆ.

Recommended Video

      Sindhya ತೊರೆದ ನಂತರ ಕಾಂಗ್ರೆಸ್ ಪುನರುಜ್ಜೀವನಗೊಂಡಿದೆ-Digvijay singh!?! | Oneindia Kannada

      ಇದಕ್ಕೂ ಮುನ್ನ ಭಾರತದಲ್ಲಿ ಹೆಚ್ಚು ತಯಾರಾಗುವ ಹ್ರೈಡ್ರೋಕ್ಲೋರೋಕ್ವಿನ್(ಎಚ್ ಸಿಕ್ಯೂ) ಪರ ಪ್ರಚಾರ ನಡೆಸಿದ್ದ ಟ್ರಂಪ್, ಖುದ್ದು ಒಂದು ಕೋರ್ಸ್ ಮಾತ್ರೆ ನುಂಗಿ ಇದು ಕೊರೊನಾ ವಿರುದ್ಧ ಹೋರಾಡಲು ಸೂಕ್ತವಾಗಿ ಮಾತ್ರೆ ಎಂದಿದ್ದಾರೆ. ಆದರೆ, ಅಮೆರಿಕದ ವಿಜ್ಞಾನಿಗಳು, ಸಂಶೋಧಕರು ಕೊವಿಡ್ 19 ಚಿಕಿತ್ಸೆಗೆ ಎಚ್ ಸಿಕ್ಯೂ ಬಳಕೆ ವಿರೋಧಿಸಿದ್ದರು.

      "ಯುಎಸ್ ಆಹಾರ ಮತ್ತು ಔಷಧ ಮಂಡಳಿ(ಎಫ್ ಡಿಎ) ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ನೀಡಿದೆ. ಚೀನಾ ವೈರಸ್ ವಿರುದ್ಧ ಹೋರಾಡಲು ಹೊಸ ವಿಧಾನದ ಬಗ್ಗೆ ಐತಿಹಾಸಿಕ ಘೋಷಣೆ ಮಾಡಲು ಸಂತಸವಾಗುತ್ತಿದೆ" ಎಂದು ಟ್ರಂಪ್ ಹೇಳಿದ್ದಾರೆ.

      Trump announces plasma treatment authorised for COVID-19

      ಅಮೆರಿಕದಲ್ಲಿಯೂ ಲಸಿಕೆ ಸಂಶೋಧನೆ ಉತ್ತಮವಾಗಿಯೇ ನಡೆದಿದೆ. ಶೀಘ್ರದಲ್ಲೇ ಲಸಿಕೆಯು ಅಂತಿಮ ಹಂತವನ್ನು ತಲುಪಲಿದೆ. ಈ ಬಗ್ಗೆ ಘೋಷಣೆ ಹೊರಡಿಸುತ್ತೇವೆ ಎಂದು ರಿಪಬ್ಲಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಹೇಳಿದರು.

      ಕೊವಿಡ್ 19 ಚಿಕಿತ್ಸಾ ವಿಧಾನ ಪತ್ತೆಗಾಗಿ 48 ಮಿಲಿಯನ್ ಡಾಲರ್ ಮೊತ್ತವನ್ನು ಟ್ರಂಪ್ ಸರ್ಕಾರ ನೀಡಿದೆ. ಅಮೆರಿಕದಲ್ಲಿ ಚೇತರಿಕೆ ಪ್ರಮಾಣ ಏರಿಕೆಯಾಗುತ್ತಿದ್ದು, ಮರಣ ಪ್ರಮಾಣ ಶೇ 35ರಷ್ಟು ತಗ್ಗಿದೆ ಎಂಬ ಮಾಹಿತಿಯಿದೆ. ಪ್ಲಾಸ್ಮಾ ಚಿಕಿತ್ಸೆಗೆ ಈಗಾಗಲೇ ಸಾವಿರಾರು ಮಂದಿ ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್ ಕಚೇರಿ ವಕ್ತಾರರು ಹೇಳಿದ್ದಾರೆ.

      ಎಫ್ ಡಿಎ ಅನುಮತಿಗೂ ಮುನ್ನ ಮಯೋ ಕ್ಲಿನಿಕ್ ಸಂಶೋಧನಾ ಸಂಸ್ಥೆ 64,000 ಮಂದಿಗೆ ಪ್ಲಾಸ್ಮಾ ನೀಡಿ, ಫ್ಲೂ ಹಾಗೂ ಮೀಸಲ್ಸ್ ಲಸಿಕೆ ವಿಧಾನ ಬಳಸಿ ಚಿಕಿತ್ಸೆ ನೀಡಿತ್ತು. ಆದರೆ, ಈ ಬಗ್ಗೆ ಅಧಿಕೃತ ಮಾನ್ಯತೆ, ಘೋಷಣೆ ಆಗಿರಲಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+