• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೈನೀಸ್ ವಿಮಾನಗಳಿಗೆ ಯುಎಸ್ ಅಧ್ಯಕ್ಷ ಟ್ರಂಪ್ ನಿರ್ಬಂಧ

|

ವಾಷಿಂಗ್ಟನ್, ಜೂನ್ 3: ಚೈನೀಸ್ ವಿಮಾನಗಳ ಸಂಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏರ್ ಚೀನಾ, ಚೀನಾ ಈಸ್ಟರ್ನ್ ಏರ್ಲೈನ್ಸ್ ಕಾರ್ಪ್, ಚೀನಾ ಸದರ್ನ್ ಏರ್ಲೈನ್ಸ್ ಕೋ ಮತ್ತು ಹೈನಾನ್ ಏರ್ಲೈನ್ಸ್ ಹೋಲ್ಡಿಂಗ್ ಕೋ ಸಂಚಾರವನ್ನು ಯುಎಸ್ ನಿರ್ಬಂಧ ಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.

ಚೀನಾದ ಬೀಜಿಂಗ್‌ಗೆ ಯುಎಸ್ ವಿಮಾನ ಸಂಚಾರ ಮಾಡಲು ಅನುಮತಿ ನೀಡುವಂತೆ ಅಮೆರಿಕ ಸಾರಿಗೆ ಇಲಾಖೆ ಬೇಡಿಕೆ ಇಟ್ಟಿತ್ತು. ಆದರೆ, ಅಮೆರಿಕಾ ವಿಮಾನ ಸಂಚಾರಕ್ಕೆ ಚೈನೀಸ್ ಸರ್ಕಾರ ನಿರಾಕರಣೆ ಮಾಡಿತ್ತು ಎನ್ನಲಾಗಿದೆ.

ಇದೀಗ, ಯುಎಸ್ ವಿಮಾನ ಸಂಚಾರಕ್ಕೆ ಚೀನಾ ಅಡ್ಡಿ ವ್ಯಕ್ತಪಡಿಸಿದ ಹಿನ್ನೆಲೆ ಅಮೆರಿಕ ಕೂಡ ಚೀನಾಗೆ ತಿರುಗೇಟು ನೀಡಲು ಮುಂದಾಗಿದೆ.

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

ಚೀನಾದ ವುಹಾನ್ ನಗರದಲ್ಲಿ ಕೊರೊನಾ ವೈರಸ್ ಪತ್ತೆಯಾದ ಬಳಿಕ ವಿಶ್ವಕ್ಕೆ ಸೋಂಕು ಹರಡಿದೆ. ಇದರಿಂದ ಯುನೈಟೆಡ್ ಏರ್ಲೈನ್ಸ್ ಮತ್ತು ಡೆಲ್ಟಾ ಏರ್ ಲೈನ್ಸ್ ಸಂಚಾರ ಸ್ಥಗಿತಗೊಂಡಿತ್ತು. ಸುದೀರ್ಘ ಲಾಕ್‌ಡೌನ್‌ ಬಳಿಕ ಮತ್ತೆ ಸಂಚಾರ ಆರಂಭಿಸಲು ಯುಎಸ್ ಸಿದ್ಧತೆ ಮಾಡಿಕೊಂಡಿತ್ತು.

ಅಂದ್ಹಾಗೆ ಈ ಸುದ್ದಿ ಬಗ್ಗೆ ವೈಟ್‌ಹೌಸ್‌ ಮತ್ತು ಸಾರಿಗೆ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ಸಹ ಈ ಕುರಿತು ಸ್ಪಷ್ಟನೆ ನೀಡಿಲ್ಲ.

English summary
Trump administration plans to block Chinese airlines, after China prevented US airlines from resuming service between the countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X