ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ ಜಾತಿ ಲೆಕ್ಕವಿಲ್ಲ!

ನ್ಯೂಯಾರ್ಕ್, ಜನವರಿ 26: ಯುನೈಟೆಡ್ ಸ್ಟೇಟ್ಸ್‌ನ ಉನ್ನತ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಜಾತಿಯನ್ನು ಸಂರಕ್ಷಿತ ವರ್ಗಕ್ಕೆ ಸೇರಿಸುವುದಾಗಿ ಘೋಷಿಸಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಇನ್ನುಮುಂದೆ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುವುದಕ್ಕೆ ಹಾಗೂ ಸಿಬ್ಬಂದಿಯು ಉದ್ಯೋಗ ಪಡೆದುಕೊಳ್ಳುವುದಕ್ಕೆ ಜಾತಿಯನ್ನು ಮುಖ್ಯವಾಗಿ ಪರಿಗಣಿಸುವಂತಿಲ್ಲ ಎಂಬ ನಿಯಮವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಜಾತಿ ಆಧಾರಿತ ತಾರತಮ್ಯ ನೀತಿ ವಿರುದ್ಧ ಹೋರಾಡುತ್ತಿರುವ ಗುಂಪುಗಳು ಈ ನಡೆಯನ್ನು ಸ್ವಾಗತಿಸಿವೆ.

ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ವ್ಯವಸ್ಥೆಯು 23 ಕ್ಯಾಂಪಸ್‌ಗಳನ್ನು ಮತ್ತು ಎಂಟು ಆಫ್-ಕ್ಯಾಂಪಸ್ ಕೇಂದ್ರಗಳನ್ನು ಹೊಂದಿದೆ. 485,550 ವಿದ್ಯಾರ್ಥಿಗಳನ್ನು 55,909 ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಹೊಂದಿರುವ ವಿಶ್ವವಿದ್ಯಾಲಯವು ಈ ಕುರಿತು ಘೋಷಿಸಿದೆ.

"ಇಡೀ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯು ನಮ್ಮ ಪ್ರತಿಭಾವಂತ ಮತ್ತು ವೈವಿಧ್ಯಮಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನು ಸ್ವಾಗತಿಸುವ ಮತ್ತು ಯಶಸ್ವಿಯಾಗಲು ಪ್ರೋತ್ಸಾಹಿಸುವ ವಾತಾವರಣ ಸೃಷ್ಟಿಸುವ ಮೂಲಕ ಅಂತರ್ಗತ ಶ್ರೇಷ್ಠತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಬಯಸುತ್ತದೆ," ಎಂದು ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯ ಚಾನ್ಸೆಲರ್ ಜೋಸೆಫ್ ಐ ಕ್ಯಾಸ್ಟ್ರೋ ಹೇಳಿದ್ದಾರೆ.

Top US university adds caste to its non-discrimination policy in the system

ವಿದ್ಯಾರ್ಥಿಗಳು ಉದ್ಯೋಗಿಗಳ ಶ್ರಮಕ್ಕೆ ಶ್ಲಾಘನೆ:

"ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಇತರ ಸಿಬ್ಬಂದಿಯ ಅವಿರತ ಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸುತ್ತೇನೆ. ಅವರ ಪ್ರಯತ್ನಗಳಿಂದ ನಮ್ಮ ನೀತಿಗಳು ದಿಟ್ಟ ಆಕಾಂಕ್ಷೆಗಳೊಂದಿಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಖಚಿತಪಡಿಸುತ್ತದೆ," ಎಂದು ಕ್ಯಾಸ್ಟ್ರೋ ಹೇಳಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯು ನಾಲ್ಕು ವರ್ಷಗಳ ಸುದೀರ್ಘ ಅವಧಿಯ ವ್ಯವಸ್ಥೆಯನ್ನು ಹೊಂದಿರುವ ಸಾರ್ವಜನಿಕ ವಿಶ್ವವಿದ್ಯಾಲಯವಾಗಿದೆ. ಈ ಹಿನ್ನೆಲೆ ಜಾತಿಯನ್ನು ಸಂರಕ್ಷಿತ ವರ್ಗಕ್ಕೆ ಸೇರಿಸುವುದರಿಂದ ಎಲ್ಲಾ 23 CSU ಕ್ಯಾಂಪಸ್‌ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ. ಸಮಾನತೆ ಸೃಷ್ಟಿಯಾಗಲಿದೆ ಎಂದು ಈಕ್ವಾಲಿಟಿ ಲ್ಯಾಬ್ ಹೇಳಿದೆ.

ಸಮಾನತೆ ಸಂದೇಶ ಸಾರುವ ಉದ್ದೇಶ:

"ಎಲ್ಲರಿಗೂ ಜಾತಿ ಸಮಾನತೆಯ ಸುರಕ್ಷಿತತೆಯನ್ನು ಖಾತ್ರಿಪಡಿಸುವ ನೀತಿಯೊಂದಿಗೆ ಜಾತಿ-ದಮನಿತ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಅಧ್ಯಾಪಕರ ಹಕ್ಕುಗಳನ್ನು ಬೆಂಬಲಿಸುವ ಮೂಲಕ ಇತಿಹಾಸ ನಿರ್ಮಿಸಲು ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ವ್ಯವಸ್ಥೆಯನ್ನು ನಾವು ಪ್ರಶಂಸಿಸುತ್ತೇವೆ. ಈ ಐತಿಹಾಸಿಕ ಗೆಲುವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ CSU ವ್ಯವಸ್ಥೆಯೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ," ಎಂದು ಈಕ್ವಾಲಿಟಿ ಲ್ಯಾಬ್ ಹೇಳಿಕೆಯಲ್ಲಿ ತಿಳಿಸಿದೆ.

"ಜಾತಿ ರಕ್ಷಣೆ ಪಡೆಯುವಲ್ಲಿನ ಈ ವಿಜಯವು ಬಹಳ ಐತಿಹಾಸಿಕವಾಗಿದೆ. ಇದು ಅಂತಿಮ ಫಲಿತಾಂಶವಲ್ಲ, ಆದರೆ ಪ್ರಕ್ರಿಯೆ ಆಗಿದೆ." ಎಂದು ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿ ವಿದ್ಯಾರ್ಥಿ ಮತ್ತು ಪ್ರಮುಖ ಸಂಘಟಕ ಮನ್ಮಿತ್ ಸಿಂಗ್ ಹೇಳಿದ್ದಾರೆ.

ಜಾತಿ ತಾರತಮ್ಯ ತೊಡೆದುಹಾಕುವ ಪ್ರಯತ್ನ:

"ನಮ್ಮ ವಿದ್ಯಾರ್ಥಿಯೊಬ್ಬರು ಜಾತಿ ತಾರತಮ್ಯದ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರು. ಅದು ಒಂದು ದೂರಿನಿಂದ ನಡೆಯುತ್ತಿರುವ ಸಂಗತಿಯಲ್ಲ, ಕೆಲವು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರತಿದಿನ ಅದನ್ನು ಎದುರಿಸುತ್ತಿದ್ದಾರೆ. ನಾವು ಅಂಥವರ ಜೀವನದ ಅನುಭವಗಳನ್ನು ಗೌರವಿಸಲು ಮತ್ತು ಜಾತಿ ತಾರತಮ್ಯವನ್ನು ತೊಡೆದು ಹಾಕಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಐತಿಹಾಸಿಕ ಗೆಲುವು ಎಂದು ಬಣ್ಣನೆ:

ಇದು ಐತಿಹಾಸಿಕ ಗೆಲುವು ಎಂದು ಬಣ್ಣಿಸಿರುವ ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ತೆನ್ಮೋಳಿ ಸೌಂದರರಾಜನ್, ಅಮೆರಿಕನ್ನ ವಿದ್ಯಾರ್ಥಿಗಳ ನೇತೃತ್ವದ ಸರ್ವಧರ್ಮ ಮತ್ತು ಅಂತರ್ ಜಾತಿಯ ವಿರೋಧಿ ಕ್ರಮದಿಂದಾಗಿ ಪ್ರಯತ್ನ ಫಲಿಸಿದೆ. ಇಂದು 23 ಹೊಸ ಕ್ಯಾಂಪಸ್‌ಗಳನ್ನು ಹೊಂದಿರುವ ವಿಶ್ವವಿದ್ಯಾಲಯ ಜಾತಿಯತೆ ಸುಳಿಗೆ ಸಿಲುಕಿರುವವರನ್ನು ರಕ್ಷಿಸುವ ಮತ್ತು ನಾಗರಿಕ ಹಕ್ಕುಗಳನ್ನು ಒದಗಿಸುವ ಚಳವಳಿಗೆ ನಾಂದಿ ಹಾಡಲಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+