ಶ್ವೇತಭವನ ಮುಂದೆ ಎಚ್-1ಬಿ ವೀಸಾ ಚೆಂಡು: ಭಾರತೀಯರಲ್ಲಿ ತಳಮಳ
ವಾಷಿಂಗ್ಟನ್, ಫೆಬ್ರವರಿ 22: ಎಚ್-1ಬಿ ವಿದೇಶಿ ಉದ್ಯೋಗ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ನೌಕರಿ ಮಾಡಲು ಅವಕಾಶ ನೀಡುವ ನಿಯಮದಲ್ಲಿ ಬದಲಾವಣೆ ತರುವ ಪ್ರಸ್ತಾವವನ್ನು ಶ್ವೇತಭವನ ಸ್ವೀಕರಿಸಿದೆ.
ಅಮೆರಿಕದ ಈ ನಿರ್ಧಾರದಿಂದ ಎಚ್-1ಬಿ ವೀಸಾ ಹೊಂದಿರುವ ಸುಮಾರು 90,000 ಮಂದಿಯ ಸಂಗಾತಿಗಳಿಗೆ ಸಂಕಷ್ಟ ಎದುರಾಗಲಿದ್ದು, ಇದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಈ ಪ್ರಸ್ತಾವವನ್ನು ಶ್ವೇತಭವನದ ಬಜೆಟ್ ನಿರ್ವಹಣಾ ಕಚೇರಿಗೆ ರವಾನಿಸಿದೆ.
ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಆಯ್ಕೆ ಶ್ವೇತಭವನದ ಮುಂದಿದೆ. ಈ ಪ್ರಸ್ತಾವವನ್ನು ಶ್ವೇತಭವನ ಪರಾಮರ್ಶೆಗೆ ಒಳಪಡಿಸಲಿದ್ದು, ವಿವಿಧ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿದೆ. ಇಡೀ ಪ್ರಕ್ರಿಯೆಗೆ ಕೆಲವು ವಾರಗಳಿಂದ ಹಲವು ತಿಂಗಳುಗಳು ಬೇಕಾಗಬಹುದು.

ಪರಾಮರ್ಶೆ ಮತ್ತು ಅಭಿಪ್ರಾಯ ಸಂಗ್ರಹಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ಈ ಪ್ರಸ್ತಾವಿತ ನಿಯಮವು ಅಂತಿಮಗೊಳ್ಳುವುದಿಲ್ಲ. ಈಗಿರುವ ಪ್ರಕ್ರಿಯೆಯ ಅನ್ವಯ ಒಮ್ಮೆ ಶ್ವೇತಭವನ ಅದಕ್ಕೆ ಅನುಮೋದನೆ ನೀಡಿದರೆ, 30 ದಿನಗಳ ಸಲಹಾ ಅವಧಿಯೊಂದಿಗೆ ಫೆಡರಲ್ ರಿಜಿಸ್ಟರ್ನಲ್ಲಿ ಪ್ರಕಟಿಸಲಾಗುತ್ತದೆ.
ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಸೇರಿದಂತೆ ಅಮೆರಿಕದ ಅನೇಕ ಸಂಸದರು ನೂತನ ವೀಸಾ ನೀತಿಯನ್ನು ವಿರೋಧಿಸಿದ್ದಾರೆ. ಅಲ್ಲದೆ, ಸಿಲಿಕಾನ್ ವ್ಯಾಲಿ ಕಂಪೆನಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿವೆ. ಇದು ಮಹಿಳಾ ವಿರೋಧಿ ಮಾತ್ರವಲ್ಲ, ಎಚ್1ಬಿ ವೀಸಾ ಹೊಂದಿರುವವರ ಪ್ರತಿಭಾವಂತ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡುವುದನ್ನು ತಡೆಯುತ್ತದೆ ಎಂದು ಹೇಳಿವೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications