ಸೂಪರ್‌ ಫೆಟೇಶನ್: ಗರ್ಭಿಣಿಯಾಗಿದ್ದಾಗ ಗರ್ಭಿಣಿಯಾದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನನ

ವಾಷಿಂಗ್ಟನ್, ಜೂನ್ 2: ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದಾಗ ಮತ್ತೆ ಗರ್ಭಿಣಿಯಾಗಿ ಒಂದೇ ರೀತಿಯ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. 30 ವರ್ಷದ ಕಾರಾ ವಿನ್‌ಹೋಲ್ಡ್ ಎಂಬ ಮಹಿಳೆ ಟೆಕ್ಸಾಸ್‌ನವರು. ಇವರು ಗರ್ಭಿಣಿಯಾಗಿದ್ದಾಗ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಯಾರಾದರೂ ಈಗಾಗಲೇ ಗರ್ಭಿಣಿಯಾಗಿರುವಾಗಲೇ ಗರ್ಭಿಣಿಯಾದ ಈ ಅಪರೂಪದ ಘಟನೆಯನ್ನು 'ಸೂಪರ್‌ಫೆಟೇಶನ್' ಎಂದು ಕರೆಯಲಾಗುತ್ತದೆ.

ವರದಿಗಳ ಪ್ರಕಾರ ಇಂತಹ ಘಟನೆಗಳು ಸುಮಾರು 0.3% ವರದಿಯಾಗುತ್ತವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಎರಡನೇ ಮಗು ಗರ್ಭಾವಸ್ಥೆಯಲ್ಲಿ ಸಾಯುತ್ತದೆ. ಕಾರಾ ವಿನ್‌ಹೋಲ್ಡ್ ಈ ಹೆರಿಗೆಗೂ ಮುನ್ನ ಮೂರು ಗರ್ಭಪಾತಗಳನ್ನು ಅನುಭವಿಸಿದ್ದಾರೆ. ಆರಂಭದಲ್ಲಿ ತಮ್ಮ ಅಪರೂಪದ ಸ್ಥಿತಿಯಿಂದ ದಿಗ್ಭ್ರಮೆಗೊಂಡ ಅವರು ಹೆಚ್ಚು ಸ್ಪಷ್ಟತೆ ಪಡೆಯಲು ತಮ್ಮ ವೈದ್ಯರನ್ನು ಭೇಟಿ ಮಾಡಿದ್ದಾರೆ.

"ವೈದ್ಯರು ಹೇಳುವಂತೆ ನನಗೆ ಎರಡು ಬಾರಿ ಅಂಡೋತ್ಪತ್ತಿಯಾಗಿದೆ. ಎರಡು ಮೊಟ್ಟೆಗಳ ಬಿಡುಗಡೆಯಿಂದಾಗಿ ಫಲವತ್ತಾಗಿದೆ. ಇದರಿಂದಾಗಿ ಎರಡು ಬಾರಿ ಗರ್ಭಿಣಿಯಾಗಿದ್ದೇನೆ. ಅವು ವಿಭಿನ್ನ ಸಮಯಗಳಲ್ಲಿ ಅಂದರೆ ಸುಮಾರು ಒಂದು ವಾರದ ಅಂತರದಲ್ಲಿ ಫಲವತ್ತಾದವು. ನನ್ನ ಗರ್ಭಧಾರಣೆ ಪವಾಡ ಎಂದು ನಾನು ಶೇ.100ರಷ್ಟು ನಂಬುತ್ತೇನೆ" ಎಂದು ಕಾರಾ ಹೇಳುತ್ತಾರೆ.

 Superfetation : US Woman Becomes Pregnant While Already Pregnant, Gives Birth To Twins

ಕಾರಾ ಮತ್ತು ಆಕೆಯ ಪತಿ ಬ್ಲೇಕ್ 2018 ರಲ್ಲಿ ತಮ್ಮ ಮೊದಲ ಮಗು ವ್ಯಾಟ್ ಅನ್ನು ಸ್ವಾಗತಿಸಿದರು. ಆದರೆ ಅವರು ತಮ್ಮ ಕುಟುಂಬವನ್ನು ವಿಸ್ತರಿಸಲು ಯೋಜಿಸಿದಾಗ, ಕಾರಾ ಮೂರು ಗರ್ಭಪಾತಗಳನ್ನು ಅನುಭವಿಸಿದರು. ಮತ್ತೆ ಗರ್ಭಿಣಿಯಾಗಲು ಹೆದರುತ್ತಿದ್ದರೂ ನಂಬಿಕೆ ಕಳೆದುಕೊಳ್ಳಲಿಲ್ಲ. ಮಾರ್ಚ್ 2021 ರಲ್ಲಿ ಮತ್ತೆ ಗರ್ಭಿಣಿಯಾದಳು. ಆದರೆ ಕೇವಲ ಎರಡು ವಾರಗಳ ನಂತರ ಅವಳು ತನ್ನ ಏಳು ವಾರಗಳ ಸ್ಕ್ಯಾನ್‌ಗಾಗಿ ವೈದ್ಯರ ಬಳಿಗೆ ಹೋದಾಗ, ಅಲ್ಟ್ರಾಸೌಂಡ್ ಅವರು ಎರಡು ಮಕ್ಕಳನ್ನು ಹೊಂದಿರುವುದು ಕಂಡುಬಂದಿದೆ.

 Superfetation : US Woman Becomes Pregnant While Already Pregnant, Gives Birth To Twins

"ಈ ವೇಳೆ ನಾನು ಗಾಬರಿಯಾಗಿದ್ದೆ. ಗೊಂದಲಕ್ಕೊಳಗಾಗಿದ್ದೆ. ನನ್ನ ಪತಿ ಆಘಾತಕ್ಕೊಳಗಾಗಿದ್ದರು. ಮಗು ಜನಿಸಿದ ಬಳಿಕ ತುಂಬಾ ಸಂತೋಷವಾಯಿತು" ಎಂದು ಕಾರಾ ಹೇಳಿದ್ದಾರೆ. ವರದಿಗಳ ಪ್ರಕಾರ ಒಂದು ವಾರದ ಅಂತರದಲ್ಲಿ ಗರ್ಭಧರಿಸಿದ ಎರಡು ಅವಳಿ ಮಕ್ಕಳಿಗೆ ಕಾಲ್ಸನ್ ವಿನ್ಹೋಲ್ಡ್ ಮತ್ತು ಕೇಡೆನ್ ಎಂದು ಹೆಸರಿಡಲಾಗಿದೆ.

ಈ ಹಿಂದೆ ಇದೇ ತರಹದ ಪ್ರಕರಣ ನಡೆದಿದ್ದು 2020ರಲ್ಲಿ ರೆಬೆಕಾ ರಾಬರ್ಟ್ಸ್ ಎಂಬ ಮಹಿಳೆ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+