ಕೊರೊನಾ ವೈರಸ್ ಸೋಂಕಿತ ಕೋಶಗಳ ಚಿತ್ರ ಬಿಡುಗಡೆ

ವಾಷಿಂಗ್ಟನ್, ಸೆಪ್ಟೆಂಬರ್ 14: ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಉಸಿರಾಟ ಭಾಗದ ಕೋಶಗಳ ಮೇಲೆ ನಾವೆಲ್ ಕೊರೊನಾ ವೈರಸ್ ಸೋಂಕು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಚಿತ್ರಗಳನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಶ್ವಾಸಕೋಶದ ಒಳಗೆ ವೈರಾಣು ಕಣಗಳು ಪ್ರತಿ ಕೋಶಗಳಲ್ಲಿ ಉತ್ಪಾದನೆಯಾದ ಮತ್ತು ಬಿಡುಗಡೆಯಾದ ಸಂಖ್ಯೆಗಳ ಚಿತ್ರಣವನ್ನು ನೀಡಿದ್ದಾರೆ.

ನಾರ್ತ್ ಕೆರೋಲಿನಾ ಮಕ್ಕಳ ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯದ ಕ್ಯಾಮಿಲೆ ಎಹ್ರೆ ಹಾಗೂ ಇತರೆ ಸಂಶೋಧಕರು ಸಾರ್ಸ್-ಕೋವ್-2 ಸೋಂಕು ಗಾಳಿಯ ಮೂಲಕ ಹೇಗೆ ತೀವ್ರಗೊಳ್ಳುತ್ತದೆ ಎಂಬುದನ್ನು ಚಿತ್ರಗಳ ಮೂಲಕ ಸುಲಭವಾಗಿ ಅರ್ಥವಾಗುವಂತೆ ವಿವರಿಸಲು ಈ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಅಧಿಕ ಸಾಮರ್ಥ್ಯದ ಮೈಕ್ರೋಸ್ಕೋಪಿಕ್ ಚಿತ್ರಗಳಲ್ಲಿ ಅಪಾರ ಪ್ರಮಾಣದ ವೈರಾಣು ಅಂಶಗಳು ಮಾನವನ ಉಸಿರಾಟದ ಅಂಗಗಳ ಮೇಲ್ಭಾಗದಲ್ಲಿ ಅಂಗಾಂಶಗಳಿಗೆ ಹಾಗೂ ಇತರೆ ಜನರಿಗೆ ಸೋಂಕು ಹರಡಿಸಲು ಹೇಗೆ ಸಿದ್ಧವಾಗಿವೆ ಎನ್ನುವುದು ಕಂಡುಬರುತ್ತದೆ.

Scientists Published The Images Of Coronavirus Infected Lung Cells

ಈ ಸಂಶೋಧನೆಗಾಗಿ ವಿಜ್ಞಾನಿಗಳು ನಾವೆಲ್ ಕೊರೊನಾ ವೈರಸ್ ಸಾರ್ಸ್-ಕೋವ್-2ಅನ್ನು ಮಾನವನ ಶ್ವಾಸಕೋಶದ ಕೃತಕ ಸೃಷ್ಟಿಯೊಳಗೆ ಅಳವಡಿಸಿದ್ದಾರೆ. 96 ಗಂಟೆಗಳ ಕಾಲ ಅತ್ಯಧಿಕ ಸಾಮರ್ಥ್ಯದ ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಬಳಸಿ ಅದನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಕಂಡುಬಂದ ದೃಶ್ಯಗಳನ್ನು ಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ಅದಕ್ಕೆ ಹೊಸದಾಗಿ ಬಣ್ಣ ನೀಡಿದ್ದಾರೆ. ಇದರಿಂದ ವೈರಸ್‌ನ ಚಟುವಟಿಕೆಗಳು ಸುಲಭವಾಗಿ ಕಾಣಿಸುವಂತೆ ಇದೆ. ಶ್ವಾಸಕೋಶದೊಳಗೆ ದೊಡ್ಡ ಪ್ರಮಾಣದಲ್ಲಿ ಮರುಸೃಷ್ಟಿಯಾಗುವ ವೈರಸ್‌ಗಳ ಗುಂಪು ಉಸಿರಾಟ ವ್ಯವಸ್ಥೆಯ ಪ್ರತಿ ಕೋಶದೊಳಗೂ ಬಿಡುಗಡೆಯಾಗುತ್ತವೆ. ಸೋಂಕಿತ ವ್ಯಕ್ತಿಯಿಂದ ಬಹು ಅಂಗಾಂಗಗಳಿಗೆ ಹಾಗೂ ಇತರರಿಗೆ ಹರಡಲು ಇದು ಮುಖ್ಯ ಮೂಲವಾಗುತ್ತದೆ. ಈ ಚಿತ್ರಗಳಲ್ಲಿ ಕಂಡುಬಂದಿರುವುದೇನೆಂದರೆ ಸೋಂಕಿತ ಜನರು ಸೋಂಕು ಹರಡಿಸದಂತೆ ಹಾಗೂ ಸಂಕು ತಗುಲದೆ ಇರುವವರು ಅದಕ್ಕೆ ಒಳಗಾಗುವ ಸಾಧ್ಯತೆಯನ್ನು ತಗ್ಗಿಸಲು ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂದು ಸಂಶೋಧಕರು ಹೇಳಿದ್ದಾರೆ.

Recommended Video

      European Guide Vision ಸಂಸ್ಥೆ Infosys ತೆಕ್ಕೆಗೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+