ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತ ಪಡೆದ ಬೈಡನ್

ವಾಷಿಂಗ್ಟನ್, ನವೆಂಬರ್ 26: ಅಮೆರಿಕದ ಇದುವರೆಗಿನ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿಯೇ 2020ರಲ್ಲಿ ಅತ್ಯಧಿಕ ಮತಗಳು ಚಲಾವಣೆಯಾಗಿವೆ. ಮತಚಲಾವಣೆಯ ಪ್ರಮಾಣ ಶತಮಾನಕ್ಕೂ ಹೆಚ್ಚಿನ ಸಮಯದಲ್ಲಿಯೇ ಅಧಿಕ.

ಚಲಾವಣೆಯಾದ ಮತಗಳಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ 8 ಕೋಟಿ ಮತಗಳನ್ನು ಪಡೆದಿದ್ದಾರೆ. ಮತಪತ್ರಗಳ ಎಣಿಕೆ ಇನ್ನೂ ಮುಂದುವರಿದಿದೆ. ಇದು ಅಮೆರಿಕದ ಚುನಾವಣೆಯ ಇತಿಹಾಸದಲ್ಲಿಯೇ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಪಡೆದ ಅತಿ ಹೆಚ್ಚಿನ ಮತಗಳಾಗಿವೆ. ಬೈಡನ್ ಅವರಿಗಿಂತ ಡೊನಾಲ್ಡ್ ಟ್ರಂಪ್ ಸಾಕಷ್ಟು ಹಿಂದಿದ್ದಾರೆ. ಆದರೆ ಅವರು ಅತಿ ಹೆಚ್ಚು ಮತಗಳನ್ನು ಪಡೆದ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಎರಡನೆಯ ಸ್ಥಾನ ಪಡೆದಿದ್ದಾರೆ. ಸುಮಾರು 7.4 ಕೋಟಿ ಅಮೆರಿಕನ್ನರು ಅವರಿಗೆ ಮತ ಚಲಾಯಿಸಿದ್ದಾರೆ.

2008ರಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 69.5 ಮಿಲಿಯನ್ ಮತಗಳನ್ನು ಪಡೆದಿದ್ದು ಈ ವರೆಗಿನ ದಾಖಲೆಯಾಗಿತ್ತು. ಈಗ ಅವರದೇ ಪಕ್ಷದ ಬೈಡನ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.

 President Elect Joe Biden Earned 80 Million Votes A Record In US Elections History

2020ರ ಚುನಾವಣೆಯಲ್ಲಿ 156 ಮಿಲಿಯನ್‌ಗೂ ಅಧಿಕ ಅಮೆರಿಕನ್ನರು ಮತ ಚಲಾಯಿಸಿದ್ದಾರೆ. ಇನ್ನಷ್ಟು ಫಲಿತಾಂಶಗಳು ಹೊರಬರಬೇಕಿರುವುದರಿಂದ ಮುಂದಿನ ದಿನಗಳಲ್ಲಿ ಮತಗಳ ಸಂಖ್ಯೆ ಏರಿಕೆಯಾಗಲಿದೆ. ಅಂತಿಮ ಮತಗಳು ಅಂದಾಜು 158 ಮಿಲಿಯನ್‌ಗೆ ತಲುಪುವ ಸಾಧ್ಯತೆ ಇದೆ. 2016ರ ಚುನಾವಣೆಯಲ್ಲಿ 137 ಮಿಲಿಯನ್ ಮತಗಳು ಚಲಾವಣೆಯಾಗಿದ್ದವು.

ಅರ್ಹ ಮತದಾರರಲ್ಲಿ ಶೇ 66.5 ಮಂದಿ ಮತ ಚಲಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ. 1900ರ ಇಸವಿಯಿಂದ ಇದು ಅತ್ಯಧಿಕ ಪ್ರಮಾಣವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಎಲೆಕ್ಷನ್ಸ್ ಪ್ರಾಜೆಕ್ಟ್ಸ್ ತಿಳಿಸಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿರುವ ಅಮೆರಿಕದಲ್ಲಿ, ಈ ಬಾರಿ ಜನರು ಮತದಾನ ಮಾಡಲು ಹೊರಬರಲು ಹಿಂದೇಟು ಹಾಕಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಮತದಾನ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+