ವಿಮಾನದ ಟಾಯ್ಲೆಟ್ ನಲ್ಲಿ ಕ್ಯಾಮರಾ ಇಟ್ಟು, ಕಾಕ್ಪಿಟ್ ನಲ್ಲಿ ವಿಡಿಯೋ ನೋಡಿದ ಪೈಲಟ್!

ವಾಷಿಂಗ್ಟನ್, ಅಕ್ಟೋಬರ್ 28: ಸೌತ್ ವೆಸ್ಟ್ ಏರ್ ಲೈನ್ಸ್ ನ ಇಬ್ಬರು ಪೈಲಟ್ ಗಳು ತಾವು ಚಾಲನೆ ಮಾಡುತ್ತಿದ್ದ ವಿಮಾನದ ಟಾಯ್ಲೆಟ್ ನಲ್ಲಿ ಕ್ಯಾಮರಾ ಇರಿಸಿ, ಅದರಲ್ಲಿ ಚಿತ್ರೀಕರಣಗೊಂಡ ದೃಶ್ಯಗಳನ್ನು ಕಾಕ್ಪಿಟ್ ನಲ್ಲಿ ಕೂತು ನೋಡುತ್ತಿದ್ದ ಘಟನೆಯೊಂದು ಎರಡು ವರ್ಷಗಳ ಹಿಂದೆ ನಡೆದಿತ್ತು.

2017 ರಲ್ಲೇ ಈ ಘಟನೆ ನಡೆದಿದ್ದು, ಅದರ ಕುರಿತು ವಿಮಾನಯಾನ ಸಿಬ್ಬಂದಿಯೊಬ್ಬರು ದೂರು ನೀಡಿದ್ದರು. ಅದರ ವಿಚಾರಣೆ ಇನ್ನೂ ನಡೆಯುತ್ತಿದ್ದ ಇದೀಗ ಘಟನೆ ಬಹಿರಂಗಗೊಂದಿದೆ.

Pilot Hides Camera in Toilet, Streamed Video in Cockpit

2017 ರ ಫೆಬ್ರವರಿಯಲ್ಲಿ ಪಿಟ್ಸ್ ಬರ್ಗ್ ನಿಂದ ಫಿನಿಕ್ಸ್ ಗೆ ತೆರಳುತ್ತಿದ್ದ ವಿಮಾನದ ಟಾಯ್ಲೆಟ್ ನಲ್ಲಿ ಹಿಡನ್ ಕ್ಯಾಮರಾ ಇಡಲಾಗಿತ್ತು. ಅದರಲ್ಲಿ ಟಾಯ್ಲೆಟ್ ಗೆ ಹೋಗಿ ಬರುವವರ ದೃಶ್ಯಗಳು ಸೆರೆಯಾಗಿತ್ತು. ಆ ಕ್ಯಾಮರಾದಲ್ಲಿ ಚಿತ್ರೀಕರಣವಾಗುತ್ತಿದ್ದ ದೃಶ್ಯಗಳನ್ನು ಪೈಲಟ್ ಗಳಿಬ್ಬರು ಕಾಕ್ಪಿಟ್ ನಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಅಕಸ್ಮಾತ್ತಾಗಿ ಕಾಕ್ಪಿಟ್ಟಿಗೆ ರಿನೀ ಸ್ಟೇನೇಕರ್ ಎಂಬ ಗಗನಸಖಿಯೊಬ್ಬರು ಆಗಮಿಸಿದಾಗ ಅವರು ಈ ದೃಶ್ಯಗಳನ್ನು ನೋಡಿ ಆಘಾತಗೊಂಡಿದ್ದರು. ಕೂಡಲೇ ಈ ಬಗ್ಗೆ ಪ್ರಶ್ನಿಸಿದಾಗ ಪೈಲಟ್ ಗಳು ತಮಾಷೆಗೆಂದು ಮಾಡುತ್ತಿದ್ದೇವೆ. ಇವು ಹೈ ಸೆಕ್ಯುರಿಟಿ ಕ್ಯಾಮರಾಗಳು. ಇವು ಬೇರೆ ಯಾರಿಗೂ ಸಿಗುವುದಿಲ್ಲ, ಹೆದರಬೇಡಿ ಎಂದು ಆಕೆಯನ್ನು ಸುಮ್ಮನಿರಿಸಿದ್ದಾರೆ. ಆದರೆ ಆಕೆ ಪಟ್ಟು ಬಿಡದೆ ಈ ಪ್ರಕರಣವನ್ನು ಕೋರ್ಟಿಗೆ ಎಳೆದಿದ್ದಾರೆ.

"ಖಾಸಗಿ ವಿಮಾನವೊಂದರ ಕಾಕ್ಪಿಟ್ ನಿಮಗೆ ಆಟದ ಮೈದಾನವೇ" ಎಂದು ಅರ್ಜಿದಾರರ ಪರ ವಕೀಲರು ಆರೋಪಿ ಪೈಲಟ್ ಗಳನ್ನು ಪ್ರಶ್ನಿಸಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+