• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪಗ್ರಹ ನಾಶ ತಂತ್ರಜ್ಞಾನ: ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಅಮೆರಿಕ

|

ವಾಷಿಂಗ್ಟನ್, ಏಪ್ರಿಲ್ 12: ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ತನಗೆ ಇರುವ 'ಬೆದರಿಕೆ'ಗಳ ಬಗ್ಗೆ ಭಾರತ ಕಳವಳ ಹೊಂದಿದೆ ಎನ್ನುವ ಮೂಲಕ ಅಮೆರಿಕ, ಭಾರತದ ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರಜ್ಞಾನದ ಪ್ರಯೋಗವನ್ನು ಬೆಂಬಲಿಸಿದೆ.

ಭೂಮಿಯ ಕೆಳಕಕ್ಷೆಯಲ್ಲಿರುವ ತನ್ನ ಹಳೆಯ ಉಪಗ್ರಹವನ್ನು ಮಾರ್ಚ್ 27ರಂದು ಹೊಡೆದು ಉರುಳಿಸುವ ಮುಲಕ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು. ಈ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಎಸ್ಯಾಟ್ ಸಾಮರ್ಥ್ಯ ಹೊಂದಿದ ಜಗತ್ತಿನ ನಾಲ್ಕನೆಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದರೂ, ಉಪಗ್ರಹದ ನಾಶದಿಂದ ಉಂಟಾದ ಅವಶೇಷಗಳು ವಾತಾವರಣದಲ್ಲಿಯೇ ಉಳಿದುಕೊಳ್ಳುವುದರಿಂದ ಅಪಾಯ ಎದುರಾಗಲಿದೆ ಎಂದು ನಾಸಾ ಹೇಳಿತ್ತು. ಆದರೆ, ಅಮೆರಿಕ ಸರ್ಕಾರ ಭಾರತದ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿದೆ.

ಭಾರತದ ಹೆಮ್ಮೆಯ ಎಸ್ಯಾಟ್ ಪರೀಕ್ಷೆಯನ್ನು ಭಯಾನಕ ಎಂದ ಅಮೆರಿಕ

ಭಾರತವು ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ನಡೆಸುವ ಅಗತ್ಯವೇನಿತ್ತು ಎಂಬ ಸೆನೆಟರ್‌ಗಳ ಪ್ರಶ್ನೆಗೆ ಅಮೆರಿಕದ ಕಾರ್ಯತಂತ್ರ ಕಮಾಂಡ್‌ನ ಕಮಾಂಡರ್ ಜನರಲ್ ಜಾನ್ ಇ ಹೈಟನ್ ಪ್ರತಿಕ್ರಿಯೆ ನೀಡಿದ್ದಾರೆ.

ಬಾಹ್ಯಾಕಾಶದಿಂದ ರಕ್ಷಣೆಗಾಗಿ ಪರೀಕ್ಷೆ

ಬಾಹ್ಯಾಕಾಶದಿಂದ ರಕ್ಷಣೆಗಾಗಿ ಪರೀಕ್ಷೆ

'ಭಾರತದ ಎಸ್ಯಾಟ್‌ನ ಮೊದಲ ಪಾಠವು ಅವರು ಇದನ್ನು ಏಕೆ ಮಾಡಿದರು ಎಂಬ ಸರಳ ಪ್ರಶ್ನೆಯನ್ನು ಮುಂದಿಡುತ್ತದೆ. ಅದಕ್ಕೆ ಉತ್ತರ, ಬಾಹ್ಯಾಕಾಶದಿಂದ ಆ ದೇಶಕ್ಕೆ ಇರುವ ಬೆದರಿಕೆಯ ಕುರಿತಾದ ಕಳವಳ' ಎಂದು ಅಮೆರಿಕದ ಕಾರ್ಯತಂತ್ರ ಕಮಾಂಡ್‌ನ ಕಮಾಂಡರ್ ಜನರಲ್ ಜಾನ್ ಇ ಹೈಟನ್ ಹೇಳಿದ್ದಾರೆ.

'ಈ ಕಾರಣದಿಂದ ಅವರು ಬಾಹ್ಯಾಕಾಶದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಮರ್ಥ್ಯ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಭಾವಿಸಿದ್ದಾರೆ' ಎಂದು ಅವರು ಗುರುವಾರ ಸೆನೆಟ್ ಸಶಸ್ತ್ರ ಸಮಿತಿಗೆ ತಿಳಿಸಿದ್ದಾರೆ.

ಎಸ್ಯಾಟ್ ಮಾಹಿತಿಯನ್ನು ಮೋದಿಯೇ ಪ್ರಕಟಿಸಿದ್ದೇಕೆ?: ನಿರ್ಮಲಾ ನೀಡಿದ ವಿವರಣೆ

ಬಾಹ್ಯಾಕಾಶ ನೀತಿ ಅಗತ್ಯ

ಬಾಹ್ಯಾಕಾಶ ನೀತಿ ಅಗತ್ಯ

ಉಪಗ್ರಹಗಳ ಅವಶೇಷಗಳಿಗೆ ಸಂಬಂಧಿಸಿದಂತೆ ನೀತಿ ನಿಯಮಾವಳಿಗಳ ಅಳವಡಿಕೆ ಮಾಡುವುದು ಅಗತ್ಯವಾಗಿದೆ. ಏಕೆಂದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಜವಾಬ್ದಾರಿಯುತ ಕಮಾಂಡರ್ ಆಗಿ ನಾನು ಇನ್ನಷ್ಟು ಅವಶೇಷಗಳನ್ನು ನೋಡಲು ಬಯಸುವುದಿಲ್ಲ ಎಂದು ಹೈಟನ್ ಹೇಳಿದ್ದಾರೆ.

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ

'ಭೂಮಿಯ ಕೆಳಕಕ್ಷೆಯಲ್ಲಿ ಭಾರತ ಏನನ್ನೋ ಹೊಂದಿತ್ತು. ಅದನ್ನು ಹೊಡೆದುರುಳಿಸಲು ಉಪಗ್ರಹ ನಿರೋಧಕ ಶಸ್ತ್ರವನ್ನು ಬಳಸಲಾಗಿದೆ. ಅದರ ಪರಿಣಾಮವಾಗಿ ಅಂದಾಜು 400 ತುಣುಕುಗಳಷ್ಟು ಅವಶೇಷಗಳುಂಟಾಗಿವೆ. ಅದರಲ್ಲಿ ಸಾಕಷ್ಟು ದೊಡ್ಡದಾಗಿರುವ 24 ಅವಶೇಷ ತುಣುಕುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತಂದೊಡ್ಡುವಷ್ಟು ಸಮರ್ಥವಾಗಿವೆ ಎಂದು ಸೆನೆಟರ್ ಟಿಮ್ ಕೈನ್ ಹೇಳಿದ್ದರು.

ಭಾರತ ಹೊಡೆದ ಉಪಗ್ರಹದ ಸುಮಾರು 60 ತುಣುಕುಗಳನ್ನು ಪತ್ತೆಹಚ್ಚಲಾಗಿದೆ. ಅವುಗಳಲ್ಲಿ 24 ಬೃಹತ್ ಗಾತ್ರದವು ಎಂದು ನಾಸಾ ಆಡಳಿತಾಧಿಕಾರಿ ಜಿಮ್ ಬ್ರೈಡ್‌ಸ್ಟೈನ್ ಕಳವಳ ವ್ಯಕ್ತಪಡಿಸಿದ್ದರು.

ಭಯಾನಕ ಎಂದಿದ್ದ ನಾಸಾ

ಭಯಾನಕ ಎಂದಿದ್ದ ನಾಸಾ

ಭಾರತವು ಉಪಗ್ರಹವನ್ನು ಹೊಡೆದುರುಳಿಸಿದ ಘಟನೆಯನ್ನು 'ಭಯಾನಕ' ಎಂದಿದ್ದ ನಾಸಾ, ಅದರಿಂದ ಈಗಾಗಲೇ ಅರವತ್ತಕ್ಕೂ ಹೆಚ್ಚು ತ್ಯಾಜ್ಯ ಭಾಗಗಳು ಕಾಣಿಸಿದ್ದು, ಎಸ್ಯಾಟ್ ಮೂಲಕ ಭಾರತ ಹೊಡೆದುರುಳಿಸಿದ ಉಪಗ್ರಹದ ಇನ್ನೂ ಸಾಕಷ್ಟು ಭಾಗಗಳು ಬಾಹ್ಯಾಕಾಶದಲ್ಲೇ ಉಳಿದುಕೊಂಡಿವೆ. ಅಲ್ಲದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಯ ಮೇಲ್ಗಡೆ ಅವು ಹಾರಾಡುತ್ತಿದ್ದಿದ್ದು, ಸಾಕಷ್ಟು ತಾಪತ್ರಯ ಸೃಷ್ಟಿಸುವ ಲಕ್ಷಣವಿದೆ. ಈ ತ್ಯಾಜ್ಯಗಳು ನಮ್ಮ ಉಪಗ್ರಹಗಳ ಮೇಲೇನಾದರೂ ಪರಿಣಾಮ ಬೀರಿದರೆ ನಾವು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US Strategic Command Commander General John E Hyten defended India's ASAT test as, they did that because they are concerned about threats to their nation from space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more