• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಸಾದಿಂದ ವಿಶೇಷ 'ವೈಟಲ್' ವೆಂಟಿಲೇಟರ್ ತಯಾರಿಕೆ: ಭಾರತೀಯ ಕಂಪನಿಗಳ ಸಾಥ್

|

ವಾಷಿಂಗ್ಟನ್, ಮೇ 30: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವೈಟಲ್ ಹೆಸರಿನ ವಿಶೇಷ ವೆಂಟಿಲೇರ್ ತಯಾರಿಸಿ ಕೊವಿಡ್ 19 ರೋಗಿಗಳ ನೆರವಿಗೆ ಮುಂದಾಗಿದ್ದಾರೆ.

ತಯಾರಿಕೆಗೆ ಮೂರು ಭಾರತೀಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಾಂಪ್ರದಾಯಿಕ ವೆಂಟಿಲೇಟರ್‌ಗೆ ಹೋಲಿಸಿದರೆ ವೈಟಲ್‌ ತಯಾರಿಕೆ ಹಾಗೂ ಬಳಕೆ ಸುಲಭವಾಗಿದೆ. ಹೈ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಹೋಟೆಲ್‌ಗಳು, ಕ್ವಾರಂಟೈನ್‌ ಕೇಂದ್ರಗಳು ಎಲ್ಲಿ ಬೇಕಾದರೂ ಇದನ್ನು ಬಳಸಬಹುದಾಗಿದೆ.

ಬಡವರ ಜೀವ ಉಳಿಸಲು ಬರಲಿದೆ ಕಡಿಮೆ ವೆಚ್ಚದ ವೆಂಟಿಲೇಟರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ವಸ್ತುಗಳನ್ನೇ ಬಳಸಿಕೊಂಡು ಕ್ಷಿಪ್ರವಾಗಿ ತಯಾರಿಸಬಹುದಾಗಿದ್ದು, ಸಾಂಪ್ರದಾಯಿಕ ಉಪಕರಣಕ್ಕೆ ಹೋಲಿಸಿದರೆ ನಿರ್ವಹಣೆಯೂ ಅತ್ಯಂತ ಸುಲಭವಾಗಿದೆ.

ಸಾಂಪ್ರದಾಯಿಕ ವೆಂಟಿಲೇಟರ್‌ಗಳನ್ನು ಬಹು ಉದ್ದೇಶಕ್ಕೆ ಬಳಸಬಹುದು ಮತ್ತು ಅವು ದೀರ್ಘಕಾಲ ಬಳಕೆ ಸಾಮರ್ಥ್ಯ ಹೊಂದಿರುತ್ತವೆ.

ಸಾಂಪ್ರದಾಯಿಕ ವೆಂಟಿಲೇಟರ್

ಸಾಂಪ್ರದಾಯಿಕ ವೆಂಟಿಲೇಟರ್

ಸಾಂಪ್ರದಾಯಿಕ ವೆಂಟಿಲೇಟರ್‌ಗಳನ್ನು ಬಹು ಉದ್ದೇಶಕ್ಕೆ ಬಳಸಬಹುದು ಮತ್ತು ಅವು ದೀರ್ಘಕಾಲ ಬಳಕೆ ಸಾಮರ್ಥ್ಯ ಹೊಂದಿರುತ್ತವೆ. ಆದರೆ 'ವೈಟಲ್‌' ವೆಂಟಿಲೇಟರ್‌ಗಳ ಉದ್ದೇಶ ಕೇವಲ ಕೊರೊನಾ ರೋಗಿಗಳ ಬಳಕೆಗೆ ಮಾತ್ರವಾಗಿದ್ದು, 3-6 ತಿಂಗಳು ಮಾತ್ರ ಬಾಳಿಕೆ ಬರುತ್ತವೆ.

ಸುಸಜ್ಜಿತ ಡೈನಾಮಿಕ್ ವೆಂಟಿಲೇಟರ್

ಸುಸಜ್ಜಿತ ಡೈನಾಮಿಕ್ ವೆಂಟಿಲೇಟರ್

ಐಸಿಯುವಿನಲ್ಲಿರುವ ಕೊರೊನಾ ರೋಗಿಗಳಿಗೆ ಅತ್ಯಂತ ಸುಸಜ್ಜಿತ ಡೈನಾಮಿಕ್‌ ವೆಂಟಿಲೇಟರ್‌ ಬೇಕಾಗುತ್ತದೆ. ಸಾಮಾನ್ಯ ಸೋಂಕಿತರು ಅಂತಹ ಸ್ಥಿತಿಗೆ ತಲುಪದಂತೆ ತಡೆಯುವುದು 'ವೈಟಲ್‌' ಉದ್ದೇಶ. ವಿಶ್ವಾದ್ಯಂತ ಇದರ ಬಳಕೆ ಸಾಧ್ಯವಿದೆ ಎಂದು ನಾಸಾ ವೈದ್ಯಕೀಯ ವಿಭಾಗದ ಮುಖ್ಯಸ್ಥ ಜೆ.ಡಿ.ಪೋಲ್ಕ್‌ ಹೇಳಿದ್ದಾರೆ.

ಈ ವೆಂಟಿಲೇಟರ್ ಹೇಗೆ ಕೆಲಸ ಮಾಡುತ್ತೆ

ಈ ವೆಂಟಿಲೇಟರ್ ಹೇಗೆ ಕೆಲಸ ಮಾಡುತ್ತೆ

ಸಾಮಾನ್ಯ ವೆಂಟಿಲೇಟರ್‌ ಮಾದರಿಯಂತೆಯೇ ರೋಗಿಗಳನ್ನು ಪ್ರಜ್ಞಾಹೀನಗೊಳಿಸಿ (ಸೆಡೆಷನ್‌), ಮೂಗಿನ ವಾಯುನಾಳಗಳ ಮೂಲಕ ಆಮ್ಲಜನಕವನ್ನು ಶ್ವಾಸಕೋಶಗಳಿಗೆ ಪೂರೈಸಲಾಗುತ್ತದೆ. ತೀವ್ರ ಉಸಿರಾಟ ತೊಂದರೆ ಹೊಂದಿರುವ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದರಿಂದ ಹೆಚ್ಚು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ನಾಸಾವು ಆಲ್ಫಾ ಡಿಸೈನ್ ಟೆಕ್ನಾಲಜೀಸ್, ಭಾರತ್ ಫೋರ್ಜ್, ಮೇಧಾ ಸರ್ವೋ ಡ್ರೈವ್ಸ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಕೊರೊನಾ ವೈರಸ್‌ನಿಂದ 1 ಲಕ್ಷ ಮಂದಿ ಸಾವು

ಕೊರೊನಾ ವೈರಸ್‌ನಿಂದ 1 ಲಕ್ಷ ಮಂದಿ ಸಾವು

ಅಮೆರಿಕದಲ್ಲಿ ಕೊರೊನಾ ಮಾರಣಹೋಮಕ್ಕೆ ಮೃತರಾದವರ ಸಂಖ್ಯೆ 1 ಲಕ್ಷ ದಾಟಿದೆ. ಅಗತ್ಯ ಪ್ರಮಾಣದಲ್ಲಿ ವೆಂಟಿಲೇಟರ್‌ ಲಭ್ಯತೆ ಇಲ್ಲದಿರುವುದು ಕೊರೊನಾ ರೋಗಿಗಳ ಸಾವಿಗೆ ಮುಖ್ಯ ಕಾರಣವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 'ವೈಟಲ್‌' ಹೆಸರಿನ ವಿಶೇಷ ವೆಂಟಿಲೇಟರ್‌ ತಯಾರಿಸಿ ಕೊರೊನಾ ರೋಗಿಗಳ ನೆರವಿಗೆ ಮುಂದಾಗಿದೆ.

English summary
In times when the whole world is in desperate need of readily available ventilators, NASA has come up with simpler, more affordable piece of tech that can be modified for field hospitals and go a long way in assisting the fight against coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X