24 ಗಂಟೆಯಲ್ಲಿ ಕೊರೊನಾದಿಂದ 2700 ಸಾವು ಕಂಡ ಅಮೆರಿಕ

ವಾಷಿಂಗ್ಟನ್, ಏಪ್ರಿಲ್ 22: ಅಮೆರಿಕದಲ್ಲಿ ಕೊರೊನಾ ಹಾವಳಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸೋಂಕು ಹರಡುವಿಕೆಯಿಂದ ತಪ್ಪಿಸಿಕೊಳ್ಳುವಲ್ಲಿ ಟ್ರಂಪ್ ಸರ್ಕಾರ ಬಹಳ ಕಷ್ಟುಪಡುತ್ತಿದೆ ಹೊರತು, ಯಾವುದೇ ಪ್ರಯೋಜನ ಆಗುತ್ತಿಲ್ಲ. ಯಾಕಂದ್ರೆ, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೆ ಇದೆ.

ಕಳೆದ 24 ಗಂಟೆಗೆ ಯುಎಸ್‌ನಲ್ಲಿ 2700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8 ಲಕ್ಷ (818,744) ಗಡಿದಾಟಿದೆ. ಇದುವರೆಗೂ 44,845 ಜನರು ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಸೋಮವಾರ ರಾತ್ರಿ 8.30 ರಿಂದ ಮಂಗಳವಾರ ರಾತ್ರಿ 8.30 ಸಮಯದಲ್ಲಿ ಸುಮಾರು 44,000ಕ್ಕೂ ಅಧಿಕ ಸೋಂಕಿತರು ಯುಎಸ್‌ ದೇಶದಲ್ಲಿ ಪತ್ತೆಯಾಗಿದ್ದಾರೆ.

More Than 2,700 Dead In US From Coronavirus In Last 24 Hours

ಇಡಿ ಜಗತ್ತು ಕೊರೊನಾ ವೈರಸ್‌ಗೆ ತತ್ತರಿಸಿದೆ. ಆದರೆ, ಈ ವೈರಸ್‌ ಕಾಟ ಅಮೆರಿಕದಲ್ಲಿ ಸ್ವಲ್ಪ ಹೆಚ್ಚಿದ್ದು, ಭಾರಿ ನಷ್ಟ ತಂದಿದೆ. ಅಮೆರಿಕದ ಅಂಕಿ ಅಂಶ ನೋಡಿ ಇದಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತ ವೈಫಲ್ಯ ಕಾರಣ ಎಂದು ಟೀಕಿಸುತ್ತಿದ್ದಾರೆ.

ಅಮೆರಿಕದಲ್ಲಿ ಯಾವ ನಗರ ರೆಡ್ ಝೋನ್‌ನಲ್ಲಿದೆ ಎಂದು ನೋಡುವುದಾರೆ, ನ್ಯೂಯಾರ್ಕ್‌ ನಗರದಲ್ಲಿ ಮಾತ್ರ ಬರೊಬ್ಬರಿ 2.5 ಲಕ್ಷ (256,555) ಸೋಂಕು ಪತ್ತೆಯಾಗಿದೆ. 19,693 ಜನರು ಇಲ್ಲಿ ಮೃತಪಟ್ಟಿದ್ದಾರೆ. ನಂತರ ನ್ಯೂಜೆರ್ಸಿ ನಗರದಲ್ಲಿ 92,387 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇಲ್ಲಿ 4753 ಜನರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+