ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕೋವಿಡ್ ರೂಪಾಂತರಿ ವಿರುದ್ಧ ಬೂಸ್ಟರ್ ಡೋಸ್ ಸಿದ್ಧಪಡಿಸಲಿದೆ ಮಾಡೆರ್ನಾ

|
Google Oneindia Kannada News

ವಾಷಿಂಗ್ಟನ್,ನವೆಂಬರ್ 27: ಅಮೆರಿಕ ಫಾರ್ಮಾಸುಟಿಕಲ್ ಕಂಪನಿ ಮಾಡೆರ್ನಾವು ಹೊಸ ಕೋವಿಡ್ ರೂಪಾಂತರಿ 'ಒಮಿಕ್ರೋನ್' ವಿರುದ್ಧ ಬೂಸ್ಟರ್ ಶಾಟ್ಸ್‌ಗಳನ್ನು ಸಿದ್ಧಪಡಿಸಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇದೀಗ ಈ ಹೊಸ ಕೊರೊನಾ ರೂಪಾಂತರಿಯು ಜನರಲ್ಲಿ ಆತಂಕ ಸೃಷ್ಟಿಸಿದ್ದು, ಈ ಬೂಸ್ಟರ್ ಶಾಟ್ಸ್‌ಗಳು ಈ ರೂಪಾಂತರಿ ವಿರುದ್ಧ ಹೋರಾಡಲಿವೆ. ಈ ಒಮಿಕ್ರೋನ್ ರೂಪಾಂತರಿ ಬೇಗ ಬೇರೊಬ್ಬರಿಗೆ ಹರಡುತ್ತದೆ. ಅಷ್ಟೇ ವೇಗವಾಗಿ ನಾವು ಕೂಡ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ.

ಕೊರೊನಾ ಸೋಂಕು ಕಡಿಮೆಯಾಯಿತು ಎನ್ನುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದೆ. ಅಲ್ಲದೇ, ರೂಪಾಂತರಿ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ನಡೆಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮಹತ್ವದ ಆದೇಶ ನೀಡಿದೆ.

Moderna Booster Dose

ವಿಶ್ವ ಆರೋಗ್ಯ ಸಂಸ್ಥೆ B.1.1.529 ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ ಮಾಡಲಾಗಿದ್ದು, ಭಾರತದಲ್ಲಿಯೂ ರೂಪಾಂತರಿ ಆತಂಕ ಸೃಷ್ಟಿಸಿದೆ. ವಿಶ್ವದಲ್ಲಿ 87 ಒಮಿಕ್ರೋನ್ ಪ್ರಭೇದ ರೂಪಾಂತರಿಗಳಿವೆ. ದಕ್ಷಿಣ ಆಫ್ರಿಕಾದ ಸಾವಿರಾರು ಜನರಲ್ಲಿ ರೋಗದ ಲಕ್ಷಣ ಕಂಡುಬಂದಿದೆ.

ಕೊರೊನಾವೈರಸ್ ಬಿ.1.1.529 ರೂಪಾಂತರ ಬಗ್ಗೆ ಚರ್ಚೆಗೆ WHO ತುರ್ತುಸಭೆಕೊರೊನಾವೈರಸ್ ಬಿ.1.1.529 ರೂಪಾಂತರ ಬಗ್ಗೆ ಚರ್ಚೆಗೆ WHO ತುರ್ತುಸಭೆ

ದಕ್ಷಿಣ ಆಫ್ರಿಕಾ ಸೇರಿ 7 ರಾಷ್ಟ್ರಗಳಿಗೆ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊಸ ತಳಿಯ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಕೆಲವು ವಿದೇಶಗಳಿಂದ ಆಗಮಿಸುವವರಿಗೆ ಪರೀಕ್ಷೆ ಸೇರಿದಂತೆ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಕೋವಿಡ್ ಬೂಸ್ಟರ್ ಲಸಿಕೆಗಳನ್ನು ಯಾರೆಲ್ಲಾ ತೆಗೆದುಕೊಳ್ಳಬಹುದು ಎಂಬ ಪಟ್ಟಿಯನ್ನು ಅಮೆರಿಕ ಶುಕ್ರವಾರ ಅಂತಿಮಗೊಳಿಸಿದೆ. ಮುಂದಿನ ದಿನಗಳಲ್ಲಿ 18 ವರ್ಷ ದಾಟಿದ ಎಲ್ಲರೂ ತಮ್ಮ ಮೊದಲ ಡೋಸ್ ಸ್ವೀಕರಿಸಿದ ಆರು ತಿಂಗಳ ನಂತರ ಬೂಸ್ಟರ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

ಫೈಜರ್ ಮತ್ತು ಮಾಡೆರ್ನಾ ಲಸಿಕೆಗಳನ್ನು ಬೂಸ್ಟರ್ ಆಗಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಚಳಿಗಾಲದ ಈ ಸಂದರ್ಭದಲ್ಲಿ ಬೂಸ್ಟರ್​ ಡೋಸ್​ಗಳ ತುರ್ತು ಬಳಕೆಗೆ ಅನುಮೋದನೆ ನೀಡಿರುವ ಈ ಕ್ರಮವು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮಾಡೆರ್ನಾದ ಸಿಇಒ ಸ್ಟಿಫನ್ ಬಾನ್ಸೆಲ್ ಹೇಳಿದರು.

ಯಾರು ಬೂಸ್ಟರ್ ಲಸಿಕೆ ತೆಗೆದುಕೊಳ್ಳಬಹುದು ಎಂಬ ಈವರೆಗಿನ ಪಟ್ಟಿ ಗೊಂದಲಕಾರಿಯಾಗಿತ್ತು. 18 ವರ್ಷ ಅಥವಾ ಅದಕ್ಕೂ ಹೆಚ್ಚು ವಯಸ್ಸಾದವರು ಮೊದಲ ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅಮೆರಿಕ ಅವಕಾಶ ಮಾಡಿಕೊಟ್ಟಿದೆ. ಕಳೆದ ವಾರ ಫಿಝರ್ ಕಂಪನಿಯು ಎಲ್ಲರಿಗೂ ಬೂಸ್ಟರ್​ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಅಮೆರಿಕದ ಔಷಧ ನಿಯಂತ್ರಕರನ್ನು (ಎಫ್​ಡಿಎ) ಕೋರಿತ್ತು. ಈ ಬಗ್ಗೆ 10,000 ಜನರ ಮೇಲೆ ಪ್ರಯೋಗಗಳನ್ನು ನಡೆಸಿ ಸಾಕಷ್ಟು ದತ್ತಾಂಶವನ್ನೂ ಸಂಗ್ರಹಿಸಿತ್ತು.

ಜನರನ್ನು ಆಸ್ಪತ್ರೆಗಳಿಂದ ಹೊರಗೆ ಇಡಬಲ್ಲ ಯಾವುದೇ ಲಸಿಕೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಫೌಸಿ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದರು. ಅಮೆರಿಕದಲ್ಲಿ 19.5 ಕೋಟಿಗೂ ಹೆಚ್ಚು ಜನರು ಕೊವಿಡ್ ಲಸಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಂಡಿದ್ದಾರೆ. ಫಿಝರ್ ಅಥವಾ ಮಾಡೆರ್ನಾ ಲಸಿಕೆಗಳ ಎರಡು ಡೋಸ್ ಅಥವಾ ಜಾನ್​ಸನ್ ಅಂಡ್ ಜಾನ್​ಸನ್ ಲಸಿಕೆಯ ಒಂದು ಡೋಸ್ ಪಡೆದುಕೊಂಡರೆ ಲಸಿಕೆಯ ಪೂರ್ಣ ಡೋಸ್ ಪಡೆದಂತೆ ಎಂದು ಅಮೆರಿಕದಲ್ಲಿ ಪರಿಗಣಿಸಲಾಗುತ್ತದೆ.

ಬೂಸ್ಟರ್ ಲಸಿಕೆ ತೆಗೆದುಕೊಳ್ಳುವವರು ಈ ಮೊದಲು ತೆಗೆದುಕೊಂಡ ಕಂಪನಿಯ ಲಸಿಕೆಯನ್ನೇ ತೆಗೆದುಕೊಳ್ಳಬೇಕಿಲ್ಲ ಎಂದು ಎಫ್​ಡಿಎ ಈ ಮೊದಲೇ ಸ್ಪಷ್ಟಪಡಿಸಿತ್ತು. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಸಲಹಾ ಮಂಡಳಿಯು ಈ ಕುರಿಚು ಚರ್ಚಿಸಿ ಬೂಸ್ಟರ್ ಡೋಸ್​ಗಳನ್ನು ವಿಸ್ತರಿತ ಜನಸಮುದಾಯಕ್ಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.

Recommended Video

ಹೆದುರಿ ನಡುಗಿದ ಬೆಂಗಳೂರಿಗರು ! | Oneindia Kannada

ಸಲಹಾ ಮಂಡಳಿಯು ಕಳೆದ ತಿಂಗಳು ಈ ವಿನಂತಿಯನ್ನು ಒಪ್ಪಿಕೊಂಡಿತ್ತು. ಅನಂತರವೇ ಮಾಡೆರ್ನಾ ಬೂಸ್ಟರ್ ನೀಡಲು ಎಫ್​ಡಿಎ ಸಮ್ಮತಿಸಿತ್ತು. ಡಾ.ಅಂತೋಣಿ ಫೌಸಿ ಸೇರಿದಂತೆ ಅಮೆರಿಕ ಆರೋಗ್ಯ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಬೂಸ್ಟರ್​ ಡೋಸ್​ಗಳನ್ನು ನೀಡಬೇಕೆಂಬ ಅಂಶವನ್ನು ಪ್ರತಿಪಾದಿಸುತ್ತಿದ್ದರು. ಯುವಜನರಲ್ಲಿ ಸ್ವಲ್ಪವೇ ಸೋಂಕು ಕಾಣಿಸಿಕೊಂಡರೂ ಕೊವಿಡ್ ಹಾಗೂ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದರು.

English summary
The US pharmaceutical company Moderna said Friday it will develop a booster shot against the new Omicron variant of the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X