ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಗಡಿ ಸಂಘರ್ಷ: ಭಾರತದ ಹುತಾತ್ಮ ಯೋಧರಿಗೆ ಅಮೆರಿಕ ಕಂಬನಿ

|
Google Oneindia Kannada News

ವಾಷಿಂಗ್ಟನ್, ಜೂನ್ 19: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಉದ್ಧಟತನಕ್ಕೆ 20 ಭಾರತೀಯ ಸೈನಿಕರು ಹುತಾತ್ಮರಾಗಿರುವುದಕ್ಕೆ ಅಮೆರಿಕ ಕಂಬನಿ ಮಿಡಿದಿದೆ.

Recommended Video

ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸಾದ ಶ್ರೀಶಾಂತ್ | Sreesanth | Oneindia Kannada

ಈ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಚೀನಾದ ಜೊತೆಗಿನ ಇತ್ತೀಚಿನ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರಿಗೆ ಅಮೆರಿಕ ತನ್ನ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಯೋಧರ ಕುಟುಂಬ , ಆಪ್ತರು ಹಾಗೂ ಸಮುದಾಯದ ನೋವಿನ ಜೊತೆಗೆ ಅಮೆರಿಕವೂ ಇದೆ ಎಂದು ಮೈಕ್ ಪಾಂಪಿಯೋ ತಿಳಿಸಿದ್ದಾರೆ.

ಭಾರತ-ಚೀನಾ ನಡುವೆ ಮಧ್ಯಸ್ಥಿಕೆ: ಯೂಟರ್ನ್ ಹೊಡೆದ ಟ್ರಂಪ್ಭಾರತ-ಚೀನಾ ನಡುವೆ ಮಧ್ಯಸ್ಥಿಕೆ: ಯೂಟರ್ನ್ ಹೊಡೆದ ಟ್ರಂಪ್

ಈ ಮೂಲಕ ಅಮೆರಿಕ ಅಧಿಕೃತವಾಗಿ ಭಾರತದ ಪರ ನಿಂತಿದೆ. ಆದರೆ ನಿನ್ನೆಯಷ್ಟೇ ಭಾರತ-ಹಾಗೂ ಚೀನಾ ನಡುವೆ ಸಂಧಾನಕ್ಕೆ ಮಾತ್ರ ಅಮೆರಿಕ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

Pompeo Paid His Deepest Condolences To The Indian Soldiers

ಗಡಿ ವಿವಾದ ಬಗೆಹರಿಸಲು ಹಾಗೂ ಶಾಂತಿ ಮರು ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಲು ಬದ್ಧ ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ ಇಂದು ಹೇಳಿಕೆ ನೀಡಿರುವ ವೈಟ್‌ಹೌಸ್ ಸಧ್ಯಕ್ಕೆ ಇಂತಹ ಯಾವುದೇ ಯೋಜನೆ ಅಮೆರಿಕದ ಮುಂದಿಲ್ಲ ಎಂದಿತ್ತು.

ಅಮೆರಿಕ ಮಧ್ಯಸ್ಥಿಕೆ ಕುರಿತು ಚೀನಾ ಖಾರವಾಗಿ ಪ್ರತಿಕ್ರಿಯಿಸಿದ್ದು, ಭಾರತ ಹಾಗೂ ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿ ಚರ್ಚೆಗೆ ಉಭಯ ದೇಶಗಳ ನಡುವೆ ಚರ್ಚೆಗೆ ಸೂಕ್ತ ವೇದಿಕೆಗಳಿವೆ. ಪರಿಹಾರ ಮಾರ್ಗಗಳನ್ನು ಹುಡುಕಲು ಮೂರನೇ ದೇಶಗಳ ಅಥವಾ ವ್ಯಕ್ತಿಯ ಅಗತ್ಯವಿಲ್ಲ ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳಿತ್ತು.

ಜೂನ್ 15,16 ರಂದು ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಚೀನಾ-ಭಾರತ ನಡುವಿನ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. 43 ಮಂದಿ ಚೀನಾದ ಸೈನಿಕರು ಮೃತಪಟ್ಟಿದ್ದರು.

English summary
America Secretary Mike Pompeo said that 'We extend our deepest condolences to the people of India for the lives lost as a result of the recent confrontation with China. We will remember the soldiers' families, loved ones, and communities as they grieve
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X