ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯ, ಭೂಮಿಗೆ ಕಾಂತೀಯ ಬಿರುಗಾಳಿ ಅಪ್ಪಳಿಸುತ್ತದೆಂಬ ಸುದ್ದಿ ಸುಳ್ಳಂತೆ!

|
Google Oneindia Kannada News

ಅಮೆರಿಕ, ಮಾರ್ಚ್ 15: ಇನ್ನೆರಡೆ ದಿನದಲ್ಲಿ ಭೂಕಂಪವಾಗಿ ಬೆಂಗಳೂರು ನಾಶವಾಗುತ್ತದೆ ಎಂಬ ಸುದ್ದಿಯನ್ನು ಅದೆಷ್ಟೆಲ್ಲ ಬಾರಿ ಕೇಳಿದ್ದೀವಿ. ಈಗೊಂದು ಮೂರ್ನಾಲ್ಕು ದಿನದ ಮೊದಲೂ ಇಂಥದೇ ಗುಲ್ಲೆದ್ದಿತ್ತು. ಇಂಥ ಸುದ್ದಿಗಳಿಗೆ ಆತಂಕ ಪಡುವುದನ್ನು ನಿಲ್ಲಿಸಿರುವ ಜನರು, ಯಾವ ನಿಖರ ಮಾಹಿತಿ, ಮೂಲವಿಲ್ಲದೆ ಇಂಥ ಸುದ್ದಿಗಳನ್ನು ಬಿತ್ತರಿಸುವ ಕೆಲವು ಮಾಧ್ಯಮಗಳನ್ನು ಟ್ರೋಲ್ ಮಾಡಿ ಗೇಲಿ ಮಾಡುವುದಕ್ಕೆ ಈಗಾಗಲೇ ಆರಂಭಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇಂಥದೇ ಒಂದು ಆಘಾತಕಾರಿ ಸುದ್ದಿಯನ್ನು ಇತ್ತೀಚೆಗೆ ಅಮೆರಿಕದ ಕೆಲವು ಮಾಧ್ಯಮಗಳು ಬಿತ್ತರಿಸಿದ್ದವು. ಅದೇನೆಂದರೆ 'ಭೀಕರ ಕಾಂತೀಯ ಬಿರುಗಾಳಿ(Massive geomagnetic storm)ಯೊಂದು ಭೂಮಿಗೆ ಅಪ್ಪಳಿಸುತ್ತದೆ' ಎಂಬುದು. ಆದರೆ ಈ ಸುದ್ದಿಯನ್ನು ಅಮೆರಿಕದ ನ್ಯಾಶ್ನಲ್ ಓಶ್ಯಾನಿಕ್ ಅಂಡ್ ಅಟ್ಮಾಸ್ಫೀರಿಕ್ ಅಡ್ಮಿನಿಸ್ಟ್ರೇಶನ್(NOAA) ಸುಳ್ಳು ಎಂದಿದೆ.

ಜಗತ್ತು ಅಂತ್ಯವಾಗುವ ಆ 8 ಸಂಭವನೀಯ ವರ್ಷಗಳು!ಜಗತ್ತು ಅಂತ್ಯವಾಗುವ ಆ 8 ಸಂಭವನೀಯ ವರ್ಷಗಳು!

ಹೀಗೆ ಕಾತೀಯ ಬಿರುಗಾಳಿ ಭೂಮಿಗೆ ಅಪ್ಪಳಿಸುವುದರಿಂದ ಉಪಗ್ರಹ ಆಧಾರಿತ ಸಂವಹನಗಳೆಲ್ಲ ನಾಶವಾಗುತ್ತವೆ. ಈ ಪ್ರಕ್ರಿಯೆ ವರ್ಷಕ್ಕೆ ಕನಿಷ್ಠ 100 ಬಾರಿಯಾದರೂ ಆಗುತ್ತದಾದರೂ ಇದರ ಪ್ರಮಾಣ ಕಡಿಮೆ ಇರುವುದರಿಂದ ಹೆಚ್ಚು ಹಾನಿ ಉಂಟಾಗುವುದಿಲ್ಲ. ಆದರೆ ಈ ಬಾರಿ ಅಪ್ಪಳಿಸುವ ಕಾಂತೀಯ ಬಿರುಗಾಳಿ ಅತ್ಯಂತ ಭೀಕರವಾಗಿದ್ದು, ಇದರಿಂದ ಹಲವು ದುರಂತಗಳು ಸಂಭವಿಸಬಹುದು ಎನ್ನಲಾಗಿತ್ತು.

Massive geomagnetic storm will not hit earth on march 18th

ಜೀಯೋ ಮ್ಯಾಗ್ನೆಟಿಕ್ ಸ್ಟಾರ್ಮ್ ಎಂದು ಕರೆಯಲ್ಪಡುವ ಇವನ್ನು, G1 ನಿಂದ G5 ವರೆಗೆ ಅಳೆಯಲಾಗುತ್ತದೆ. ಜೀಯೋ ಮ್ಯಾಗ್ನೆಟಿಕ್ ಮಾಪನದಲ್ಲಿ G5 ದಾಖಲಾದರೆ ಅದು ಅತ್ಯಂತ ಭೀಕರ ಕಾಂತೀಯ ಬಿರುಗಾಳಿ ಎನ್ನಿಸಿಕೊಳ್ಳುತ್ತದೆ. ಮಾ.18 ರಂದು ಸಹ ಇಂಥದೇ ಕಾಂತೀಯ ಬಿರುಗಾಳಿ ಅಪ್ಪಳಿಸುತ್ತದೆ ಎನ್ನಲಾಗಿತ್ತು. ಈ ಸುದ್ದಿಯನ್ನು ಸುಳ್ಳು ಎಂದಿರುವುದರಿಂದ ಜನರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ

ಕಾಂತೀಯ ಬಿರುಗಾಳಿಗಳು ಭೂಮಿಗೆ ಅಪ್ಪಳಿಸುವುದರಿಂದ ಭುಮಿಯ ಗುರುತ್ವಾಕರ್ಷಣ ಸ್ಥಿತಿಯಲ್ಲಿ ಏರುಪೇರಾಗುತ್ತದೆ. ಭೂಮಿಯ ಮೇಲಿನ ಪ್ರತಿ ಕೆಲಸಗಳೂ ಗುರುತ್ವಾಕರ್ಷಣೆಯ ಆಧಾರ ಮೇಲೆ ನಿಂತಿರುವುದರಿಂದ ಈ ಬಿರುಗಾಳಿಯ ಕುರಿತು ಆತಂಕ ವ್ಯಕ್ತವಾಗಿತ್ತು.

English summary
A Massive geomagnetic storm will not hit earth on march 18th, National Oceanic and Atmospheric Administration (NOAA), America confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X