ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಟೀಕಾಕಾರರಿಗೆ ಪಾರ್ಸೆಲ್ ಬಾಂಬ್ ಕಳುಹಿಸುತ್ತಿದ್ದ ಶಂಕಿತನ ಬಂಧನ

|
Google Oneindia Kannada News

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೈ ಪ್ರೊಫೈಲ್ ವಿಮರ್ಶಕರಿಗೆ ಕನಿಷ್ಠ ಹನ್ನೆರಡು ಪಾರ್ಸೆಲ್ ಬಾಂಬ್ ಕಳಿಸಿದ್ದ ಶಂಕಿತನನ್ನು ಶುಕ್ರವಾರ ಫ್ಲೋರಿಡಾದಲ್ಲಿ ಬಂಧಿಸಲಾಗಿದೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೇನು ಕೆಲ ದಿನಗಳಲ್ಲೇ ಅಮೆರಿಕದಲ್ಲಿ ಮಧ್ಯಾವಧಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್ ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್

ವಾಹನ ನಿಲುಗಡೆ ತಾಣದ ಬಳಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಬಂಧನದ ವೇಳೆ ಭಾರೀ ಸ್ಫೋಟದ ಸದ್ದು ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಶಕಿತನನ್ನು ಸೆಸರ್ ಸಯಕ್ ಎಂದು ಗುರುತಿಸಲಾಗಿದ್ದು, ಆತನಿಗೆ ಐವತ್ತಾರು ವರ್ಷ ವಯಸ್ಸು ಎಂದು ತಿಳಿಸಲಾಗಿದೆ. ಇನ್ನಷ್ಟು ಮಂದಿಯ ಬಂಧನದ ಸಾಧ್ಯತೆ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ.

ಅರ್ಹತೆ ಇರುವವರಿಗೆ ಮಾತ್ರ ಅಮೆರಿಕಕ್ಕೆ ಪ್ರವೇಶ ಎಂದ ಟ್ರಂಪ್ ಅರ್ಹತೆ ಇರುವವರಿಗೆ ಮಾತ್ರ ಅಮೆರಿಕಕ್ಕೆ ಪ್ರವೇಶ ಎಂದ ಟ್ರಂಪ್

ಮೊದಲಿಗೆ ಈ ಪಾರ್ಸೆಲ್ ಬಾಂಬ್ ಗಳನ್ನು ಕಳುಹಿಸಿರುವುದು ಭಯೋತ್ಪಾದಕರು ಎಂದು ಶಂಕಿಸಲಾಗಿತ್ತು. ಆದರೆ ಯಾವ ಸಂಘಟನೆಯು ಕೃತ್ಯದ ಹೊಣೆಯನ್ನು ಹೊತ್ತಿರಲಿಲ್ಲ. ಇನ್ನೇನು ಅಮೆರಿಕದ ಮಧ್ಯಾವಧಿ ಚುನಾವಣೆಗೆ ಎರಡು ವಾರಗಳು ಬಾಕಿ ಇರುವಾಗ ಇಂಥ ಕೃತ್ಯ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

Man suspected of sending parcel bombs to critics of Donald Trump arrested

ಅನುಮಾನಾಸ್ಪದವಾದ ಎರಡು ಪ್ಯಾಕೇಜ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅವುಗಳನ್ನು ಅಮೆರಿಕದ ಸೆನೆಟರ್ ಕೋರಿ ಬೂಕರ್, ಜೇಮ್ಸ್ ಕ್ಲಾಪರ್ (ರಾಷ್ಟ್ರೀಯ ಗುಪ್ತಚರ ಇಲಾಖೆ ಮಾಜಿ ನಿರ್ದೇಶಕ) ವಿಳಾಸಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗಿತ್ತು. ಹದಿಮೂರನೇ ಅನುಮಾನಾಸ್ಪದ ಪಾರ್ಸೆಲ್ ಅನ್ನು ಸೆನೆಟರ್ ಕಮಲಾ ಹ್ಯಾರಿಸ್ ವಿಳಾಸಕ್ಕೆ ಕಳುಹಿಸಲು ಸಜ್ಜುಗೊಂಡಿದ್ದು ಪತ್ತೆಯಾಗಿದೆ.

ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ

ಪಾರ್ಸೆಲ್ ಗಳನ್ನು ಫ್ಲೋರಿಡಾದಿಂದಲೇ ಕಳುಹಿಸಲು ಕೇಂದ್ರೀಕೃತ ಮಾಡಿಕೊಳ್ಳಲಾಗಿತ್ತು ಎಂಬ ಅನುಮಾನದಲ್ಲಿ ತನಿಖೆ ನಡೆಸಲಾಗುತ್ತಿತ್ತು.

English summary
Federal authorities arrested a man in Florida on Friday suspected of sending at least a dozen parcel bombs to high-profile critics of US President Donald Trump days ahead of congressional elections, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X