ಬಂದೂಕುಧಾರಿಯಿಂದ ಬರ್ತ್‌ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 7 ಮಂದಿ ಸಾವು
ಕೊಲೊರಾಡೋ, ಮೇ 10:ಬಂದೂಕುಧಾರಿಯೊಬ್ಬ ಕೊಲೊರಾಡೋದಲ್ಲಿ ನಡೆಯುತ್ತಿದ್ದ ಬರ್ಡ್‌ಡೇ ಪಾರ್ಟಿಯಲ್ಲಿ ಗುಂಡಿನ ಸುರಿಮಳೆ ಗೈದಿದ್ದು, 7 ಮಂದಿ ಮೃತಪಟ್ಟಿದ್ದಾರೆ.
ಕೊಲೊರಾಡೋದಲ್ಲಿ ಈ ಘಟನೆ ನಡೆದಿದೆ. ಸ್ಪ್ರಿಂಗ್ಸ್ ನ ಪೂರ್ವ ಭಾಗದಲ್ಲಿರುವ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ಗುಂಡಿನ ದಾಳಿ ನಡೆದಿದೆ. ತನ್ನ ಪ್ರೇಯಸಿ ಭಾಗಿಯಾಗಿದ್ದ ಪಾರ್ಟಿ ಮೇಲೆ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ನಂತರ ಆತನು ತನಗೆ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಟ್ಟುಹಬ್ಬದ ಪಾರ್ಟಿಯಲ್ಲಿ ಕುಟುಂಬ, ಮಕ್ಕಳು ಮತ್ತು ಸ್ನೇಹಿತರು ಸೇರಿ ಖುಷಿಯಲ್ಲಿ ಮುಳುಗಿದ್ದರು. ಈ ವೇಳೆ ಪಾರ್ಟಿಗೆ ನುಗ್ಗಿದ್ದ ಬಂದೂಕುದಾರಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಮ್ಮೆಲೆ ಗುಂಡಿನ ದಾಳಿ ನಡೆದಾಗ ನಾನು ಗುಡುಗು ಎಂದು ಭಾವಿಸಿದೆ, ತಕ್ಷಣವೇ ಪೊಲೀಸರು ಆಗಮಿಸಿ ಮಕ್ಕಳೆಲ್ಲರನ್ನೂ ಒಂದು ಕಾರಿನಲ್ಲಿ ಕೂರಿಸಿದರು. ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗಿಲ್ಲ ಅವರನ್ನು ಪರಿಚಯಸ್ಥರ ಮನೆಗೆ ಕಳುಹಿಸಲಾಗಿದೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಆದರೆ ಆರೋಪಿಯ ಬಗ್ಗೆ ಪೊಲೀಸರು ಇದುವರೆಗೆ ಮಾಹಿತಿ ನೀಡಿಲ್ಲ, ಹಲವು ಮಂದಿ ಪೋಷಕರನ್ನು ಕಳೆದುಕೊಂಡಿದ್ದಾರೆ, ಇನ್ನೂ ಕೆಲವರು ತಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಿದ್ದಾರೆ, ಇದನ್ನು ನೋಡಿ ಬೇಸರವಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications