ಅಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗಲು ಬಿಡುವುದಿಲ್ಲ: ಬೈಡನ್

ವಾಷಿಂಗ್ಟನ್, ಆಗಸ್ಟ್ 25: ಅಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗಲು ಬಿಡುವುದಿಲ್ಲ ಇದಕ್ಕೆ ಜಿ-7 ರಾಷ್ಟ್ರಗಳ ಬೆಂಬಲವೂ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ತಾಲಿಬಾನ್ ಕ್ರಮಗಳಿಂದ ನಾವು ನಿರ್ಣಯಿಸುತ್ತೇವೆ, ತಾಲಿಬಾನ್ ನಡವಳಿಕೆಗೆ ಯಾವುದೇ ಕ್ರಮ ಕೈಗೊಳ್ಳಬೇಕಾದರೂ ನಾವು ನಿಕಟ ಸಹಕಾರದಿಂದ ಇರುತ್ತೇವೆ, ಇದೇ ವೇಳೆ ಆಫ್ಘನ್ ಜನರಿಗೆ ಮಾನವೀಯ ಬದ್ಧತೆಯನ್ನು ನಾವು ನವೀಕರಿಸಿದ್ದು, ಅಫ್ಘಾನಿಸ್ತಾನದಲ್ಲಿ ಅನಿಯಮಿತ ಮಾನವೀಯ ಪ್ರವೇಶದೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಪ್ರಸ್ತಾವನೆಯನ್ನು ಬೆಂಬಲಿಸಿದ್ದೇವೆ ಎಂದು ಬೈಡನ್ ಹೇಳಿದರು.

ಜಿ-7, ವಿಶ್ವಸಂಸ್ಥೆ, ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ಮುಖಂಡರುಗಳ ಜೊತೆಗೆ ಮಂಗಳವಾರ ನಡೆದ ವರ್ಚುಯಲ್ ಸಭೆಯ ಬಳಿಕ ಬೈಡನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಜಿ-7 ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್ ನೊಳ್ಳಗೊಂಡ ಅಂತರ್ ಸರ್ಕಾರಿ ರಾಜಕೀಯ ವೇದಿಕೆಯಾಗಿದೆ.

ತಾಲಿಬಾನ್ ವಿಚಾರದಲ್ಲಿ ಒಗ್ಗಟ್ಟಿನಿಂದ ನಿಲ್ಲುವುದಾಗಿ ಜಿ-7, ಯುರೋಪಿಯನ್ ಯೂನಿಯನ್, ನ್ಯಾಟೋ ಮತ್ತು ವಿಶ್ವಸಂಸ್ಥೆಯ ನಾಯಕರು ಒಪ್ಪಿಕೊಂಡಿರುವುದಾಗಿ ಶ್ವೇತಭವನದಲ್ಲಿ ಬೈಡನ್ ತಿಳಿಸಿದರು.

ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ಮೂಲ ನೆಲೆಯಾಗದಂತೆ ತಡೆಗಟ್ಟುವುದು ಸೇರಿದಂತೆ ಅಫ್ಘಾನಿಸ್ತಾದಲ್ಲಿ ಯಾವುದೇ ಭವಿಷ್ಯದ ಸರ್ಕಾರದ ನ್ಯಾಯಸಮ್ಮತತೆಯು ಅಂತರಾಷ್ಟ್ರೀಯ ಬಾಧ್ಯತೆಗಳನ್ನು ಎತ್ತಿಹಿಡಿಯಲು ಈಗ (ತಾಲಿಬಾನ್) ತೆಗೆದುಕೊಳ್ಳುವ ವಿಧಾನವನ್ನು ಅವಲಂಬಿಸಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ, ಜಿ -7 ದೇಶಗಳು ತಮ್ಮಲ್ಲಿ ಯಾರೂ ತಾಲಿಬಾನ್‌ ಮಾತನ್ನು ತೆಗೆದುಕೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿವೆ ಎಂದು ಬೈಡನ್ ಹೇಳಿದರು.

 ತಾಲಿಬಾನ್‌ಗೆ ಪಾಕಿಸ್ತಾನ ಬೆಂಬಲ

ತಾಲಿಬಾನ್‌ಗೆ ಪಾಕಿಸ್ತಾನ ಬೆಂಬಲ

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುವಲ್ಲಿ ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಮೆರಿಕದ ರಿಪಬ್ಲಿಕನ್ ಸಂಸದ ಸ್ಟೀವ್ ಚಾಬಟ್ ನೇರವಾಗಿ ಆರೋಪಿಸಿದ್ದಾರೆ. ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸಂಪೂರ್ಣ ಬೆಂಬಲ ನೀಡಿದ್ದು, ಇದೀಗ ಇದು ಕ್ರೌರ್ಯಕ್ಕೆ ಕಾರಣವಾಗಿದೆ. ಈ ರೀತಿಯ ಕುಕೃತ್ಯವೆಸಗಿದ ಬಳಿಕ ಅದನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸುತ್ತಿರುವುದು ಅಸಹ್ಯಕರ ಎಂದು ಅವರು ಹೇಳಿದ್ದಾರೆ.

'ಪಾಕಿಸ್ತಾನವೇ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಅಮೆರಿಕದವರು ಅಷ್ಟಾಗಿ ಗಮನಹರಿಸಿಲ್ಲ. ಈ ದೌರ್ಜನ್ಯಗಳ ಬಗ್ಗೆ ನಮ್ಮ ನಾಗರಿಕರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅಪಹರಣ, ಇಸ್ಲಾಂಗೆ ಬಲವಂತದ ಮತಾಂತರ, ಸಣ್ಣ ವಯಸ್ಸಿನ ಹಿಂದೂ ಯುವತಿಯರನ್ನು ವಯಸ್ಸಾದ ಮುಸ್ಲಿಮರೊಂದಿಗೆ ಬಲವಂತದಿಂದ ಮದುವೆ ಮಾಡಿಸುವುದು ಇತ್ಯಾದಿ ದೌರ್ಜನ್ಯ ನಡೆಯುತ್ತಿವೆ ಎಂದು ಚಾಬಟ್ ಹೇಳಿದ್ದಾರೆ.

ಹಿಂದೂ ರಾಜಕೀಯ ಕಾರ್ಯ ಸಮಿತಿಯ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕದ ರಿಪಬ್ಲಿಕನ್ ಸಂಸದ ಸ್ಟೀವ್ ಚಾಬಟ್, ಅಫ್ಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರನ್ನು ಭಾರತ ಸ್ವಾಗತಿಸುತ್ತಿರುವುದು ನಿಜಕ್ಕೂ ಶ್ಲಾಘನೀರು ವಿಚಾರ ಎಂದರು. ಪಾಕಿಸ್ತಾನದ ವಿರುದ್ಧ ದಾಳಿ ಮುಂದುವರಿಸಿದ ಅವರು, 'ಪಾಕಿಸ್ತಾನ ಮತ್ತು ಅದರ ಗುಪ್ತಚರ ಇಲಾಖೆ ತಾಲಿಬಾನಿಗಳನ್ನು ಬೆಳೆಸುವಲ್ಲಿ ಮತ್ತು ಅಂತಿಮವಾಗಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ನಮಗೆಲ್ಲರಿಗೂ ತಿಳಿದಿದೆ. ಅಫ್ಘಾನಿಸ್ತಾನದ ಜನರಿಗೆ ಸಂಕಷ್ಟ ತರಬಲ್ಲ ತಾಲಿಬಾನಿಗಳ ಗೆಲುವನ್ನು ಪಾಕಿಸ್ತಾನದ ಅಧಿಕಾರಿಗಳು ಸಂಭ್ರಮಿಸುತ್ತಿರುವುದು ನಿಜಕ್ಕೂ ಅಸಹ್ಯಕರ' ಎಂದು ಅವರು ಹೇಳಿದ್ದಾರೆ.

 ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ

ಅಮೆರಿಕ ಸೇನೆ ಹೋದ ಬಳಿಕ ಅಪ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾದ್ಯತೆ ಇದೆ. ಹೀಗಾಗಿ ತಾಲಿಬಾನಿಯರು ಅಮೆರಿಕಾಗೆ ಈಗಾಗಲೇ ನಿಗದಿಯಾಗಿರುವ ಗಡುವಾದ ಆಗಸ್ಟ್‌ 31ರಂದೇ ಅಮೆರಿಕ ಹಾಗೂ ಬ್ರಿಟನ್‌ ಪಡೆಗಳು ಅಷ್ಘಾನಿಸ್ತಾನವನ್ನು ತೊರೆಯಬೇಕು. ಒಂದು ವೇಳೆ ಈ ಗಡುವು ಮೀರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದೆ.

ಮಂಗಳವಾರ ಬ್ರಿಟನ್‌, ಅಮೆರಿಕ, ಫ್ರಾನ್ಸ್‌, ಕೆನಡಾ, ಜರ್ಮನಿ, ಇಟಲಿ ಹಾಗೂ ಜಪಾನ್‌ ಒಳಗೊಂಡ 'ಜಿ-7' ಗುಂಪಿನ ದೇಶಗಳು ಸಭೆ ನಡೆಸಲಿದ್ದು, ಆ.31ರ ನಂತರವೂ ಅಷ್ಘಾನಿಸ್ತಾನದಲ್ಲಿ ಅಮೆರಿಕ ಹಾಗೂ ಮಿತ್ರಪಡೆಗಳು ಇರಬೇಕು, ಪೂರ್ತಿ ಕರೆಸಿಕೊಳ್ಳಬಾರದು ಎಂದು ಒತ್ತಾಯಿಸುವ ಸಾಧ್ಯತೆ ಇದೆ. ಆಫ್ಘನ್‌ನಲ್ಲಿನ ವಿದೇಶಿಗರ ತೆರವು ಕಾರಾರ‍ಯಚರಣೆ ಇನ್ನೂ ಮುಗಿಯದ ಕಾರಣ ಪಡೆಗಳ ಇರುವಿಕೆ ಅಗತ್ಯ ಎಂದು ಹೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್‌ ಸೋಮವಾರ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.

 ಸೇನೆ ಹಿಂತೆಗೆಯುವಂತೆ ಒತ್ತಾಯ

ಸೇನೆ ಹಿಂತೆಗೆಯುವಂತೆ ಒತ್ತಾಯ

ಅಮೆರಿಕ ಸೇನೆಯ ಶ್ರೀರಕ್ಷೆಯಿಂದಾಗಿ ಅಫ್ಘಾನಿಸ್ತಾನದಲ್ಲಿ 20 ವರ್ಷ ಬಾಲ ಮುದುರಿಕೊಂಡಿದ್ದ ತಾಲಿಬಾನಿಗಳು ಈಗ ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದು, "ಆಗಸ್ಟ್‌ 31ರೊಳಗೆ ಸೇನೆಯನ್ನು ಸಂಪೂರ್ಣವಾಗಿ ವಾಪಸ್‌ ಪಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ,'' ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಬ್ರಿಟನ್‌ ಸೇನೆಗೂ ಇದೇ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಹಾಗೂ ಬ್ರಿಟನ್‌ ಸರಕಾರಗಳು ಗಡುವು ವಿಸ್ತರಣೆ ಮಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಉತ್ತರ ಇಲ್ಲ ಎಂಬುದೇ ಆಗಿದೆ. ಇದನ್ನೇ ಉಭಯ ರಾಷ್ಟ್ರಗಳು ಡೆಡ್‌ಲೈನ್‌ ಎಂದು ಭಾವಿಸಬೇಕು. ಇಲ್ಲದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ, ಎಂದು ತಾಲಿಬಾನ್‌ ವಕ್ತಾರ ಸುಹೇಲ್‌ ಶಹೀನ್‌ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ನಿಗದಿಯಂತೆ ಸೇನೆಯ ಸ್ಥಳಾಂತರ ಮಾಡಲಾಗುತ್ತಿದ್ದರೂ, ಆ.31ರ ನಂತರ ಸಹ ಅಮೆರಿಕ ಸೈನಿಕರು ಅಫ್ಘಾನಿಸ್ತಾನದಲ್ಲಿ ಇರಬಹುದು, ಎಂದು ಜೋ ಬೈಡೆನ್‌ ಹೇಳಿರುವ ಬೆನ್ನಲ್ಲೇ ತಾಲಿಬಾನಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಜೋ ಬೈಡೆನ್‌ ಮುಂದಿನ ನಡೆಯು ಕುತೂಹಲ ಕೆರಳಿಸಿದೆ.

 ಬ್ರಿಟನ್ ನಿಲುವು

ಬ್ರಿಟನ್ ನಿಲುವು

ಒಪ್ಪಂದದಂತೆ ಅಮೆರಿಕವೇನೋ ಆಗಸ್ಟ್‌ 31ರೊಳಗೆ ಎಲ್ಲ ಸೈನಿಕರ ಹಿಂಪಡೆಯಲು ಮುಂದಾಗಿದ್ದು, ಈಗಾಗಲೇ ಸಾವಿರಾರು ಸೈನಿಕರು ವಾಪಸಾಗಿದ್ದಾರೆ. ಆದರೆ, ಬ್ರಿಟನ್‌ ಇದುವರೆಗೂ ತಾಲಿಬಾನಿಗಳಿಗೆ ಇಷ್ಟೇ ದಿನದಲ್ಲಿ ಸೇನೆ ಹಿಂಪಡೆಯುತ್ತೇವೆ ಎಂದು ತಿಳಿಸಿಲ್ಲ. ಹಾಗಾಗಿ ಎಷ್ಟು ದಿನದಲ್ಲಿ ವಾಪಸ್‌ ಪಡೆಯಬೇಕು ಎಂಬ ಕುರಿತು ತಾಲಿಬಾನಿಗಳ ಜತೆ ಬ್ರಿಟನ್‌ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ. ತಾಲಿಬಾನ್‌ ವಿರುದ್ಧ ನಿರ್ಬಂಧ ಹೇರಬೇಕು ಎಂದು ಬ್ರಿಟನ್‌ ಪ್ರತಿಪಾದಿಸದಿದ್ದರೂ, ಜಿ-7 ರಾಷ್ಟ್ರಗಳು ಆಫ್ಘನ್‌ ಕುರಿತು ಒಗ್ಗೂಡಬೇಕು ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+