ಅಮೆರಿಕ: ಮೊದಲ ಕೊರೊನಾ ಲಸಿಕೆ ಪಡೆಯಲಿದ್ದಾರೆ ನಿಯೋಜಿತ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್, ಡಿಸೆಂಬರ್ 21:ಅಮೆರಿಕದಲ್ಲಿ ಮೊದಲ ಕೊರೊನಾ ಲಸಿಕೆಯ ಡೋಸ್‌ ಅನ್ನು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪಡೆಯಲಿದ್ದಾರೆ.

ಮಾಡೆರ್ನಾ ಸಂಸ್ಥೆ ತಯಾರಿಸಿದ ಕೊವಿಡ್ ಲಸಿಕೆಯು ಕೂಡ ಸಧ್ಯದಲ್ಲೇ ಅಮೆರಿಕಕ್ಕೆ ಬರಲಿದೆ. ಅಮೆರಿಕದಲ್ಲಿ ಈವರೆಗೆ 3.17 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಆರೋಗ್ಯ ಕಾರ್ಯಕರ್ತರು ಡೋಸ್ ಸ್ವೀಕರಿಸುವ ಮುನ್ನ ನನಗೆ ಲಸಿಕೆ ಸ್ವೀಕರಿಸಲು ಇಷ್ಟವಿಲ್ಲ, ಆದರೆ ಅಮೆರಿಕ ಜನತೆಗೆ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಸ್ಪಷ್ಟಪಡಿಸಿ ಭರವಸೆ ಮೂಡಿಸುವುದು ಕೂಡ ಅಷ್ಟೇ ಮುಖ್ಯವಾಗಿರುವ ಕಾರಣ ನಾನೇ ಮೊದಲ ಕೊರೊನಾ ಲಸಿಕೆ ಸ್ವೀಕರಿಸಲಿದ್ದೇನೆ ಎಂದು ಬೈಡನ್ ಹೇಳಿಕೊಂಡಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಿರುವ ಬೈಡನ್

ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಿರುವ ಬೈಡನ್

ಲಸಿಕೆ ಪಡೆದ ಬಳಿಕ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಅವರು ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಮುಂದಿನ ವಾರ ಕಮಲಾ ಹ್ಯಾರಿಸ್ ಹಾಗೂ ಅವರ ಪತಿ ಕೊರೊನಾ ಲಸಿಕೆ ಪಡೆಯುವ ಸಾಧ್ಯತೆಗಳಿವೆ.

ವೈದ್ಯಕೀಯ ಸಿಬ್ಬಂದಿಗೆ ಫೈಜರ್ ಲಸಿಕೆ ಟ್ರಂಪ್ ಸಂತಸ

ವೈದ್ಯಕೀಯ ಸಿಬ್ಬಂದಿಗೆ ಫೈಜರ್ ಲಸಿಕೆ ಟ್ರಂಪ್ ಸಂತಸ

ಅಮೆರಿಕದಲ್ಲಿ ಫೈಜರ್ ಕೊರೊನಾ ಲಸಿಕೆಯ ಸಾರ್ವಜನಿಕ ಬಳಕೆಗೆ ಮುಂದಡಿ ಇಡಲಾಗಿದ್ದು, ನ್ಯೂಯಾರ್ಕ್‌ನ ಮಹಿಳಾ ವೈದ್ಯಕೀಯ ಸಿಬ್ಬಂದಿಯೋರ್ವರಿಗೆ ಮೊದಲ ಲಸಿಕೆ ನೀಡಲಾಗಿದೆ. ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್ ಯಹೂದಿ ವೈದ್ಯಕೀಯ ಕೇಂದ್ರದಲ್ಲಿ ನರ್ಸ್ ಆಗಿರುವ ಸಾಂಡ್ರಾ ಲಿಂಡ್ಸೆ ಅವರಿಗೆ ಮೊದಲ ಕೊರೊನಾ ವೈರಸ್ ಲಸಿಕೆ ನೀಡಲಾಗಿದೆ.

ಇನ್ನೊಂದು ತಿಂಗಳಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ

ಇನ್ನೊಂದು ತಿಂಗಳಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ

ಅಮೆರಿಕದಲ್ಲಿ ಫೈಜರ್ ಲಸಿಕೆಯ ಸಾರ್ವತ್ರಿಕ ಬಳಕೆ ಆರಂಭವಾಗಿದ್ದು, ಇನ್ನೊಂದು ತಿಂಗಳಲ್ಲಿ ಪ್ರತಿಯೊಬ್ಬ ಪ್ರಜೆಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಮೊದಲ ಕೊರೊನಾ ಲಸಿಕೆ ಬಳಕೆಗೆ ಅಭಿನಂದನೆ

ಮೊದಲ ಕೊರೊನಾ ಲಸಿಕೆ ಬಳಕೆಗೆ ಅಭಿನಂದನೆ

ಇನ್ನು ಅಮೆರಿಕದಲ್ಲಿ ಮೊದಲ ಕೊರೊನಾ ಲಸಿಕೆ ನೀಡಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿ ಕೊರೊನಾ ಲಸಿಕೆಯ ಸಾರ್ವತ್ರಿಕ ಬಳಕೆ ಜಾರಿಯಾಗಿರುವುದು ತುಂಬ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಮೊದಲ ಕೊರೊನಾ ಲಸಿಕೆ ಬಳಕೆಗೆ ಅಮೆರಿಕಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ವಿಶ್ವಕ್ಕೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+