• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ: ಕೊರೊನಾದಿಂದ ಭಾರತ ಮೂಲದ ವೈದ್ಯ ತಂದೆ-ಮಗಳು ಸಾವು

|

ನ್ಯೂಯಾರ್ಕ್, ಮೇ 9: ಭಾರತ ಮೂಲದ ವೈದ್ಯ ತಂದೆ ಹಾಗೂ ಮಗಳು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

   ಜಮೀರ್ ಅಹಮ್ಮದ್ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ | Siddaramaiah | Oneindia Kannada

   ನ್ಯೂಜೆರ್ಸಿಯಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ತಂದೆ ಹಾಗೂ ಮಗಳು ಕೊವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರ ನಿಧನ ಸಹಿಸಿಕೊಳ್ಳಲಾಗದು ಎಂದಿರುವ ಗೌರ್ವನರ್ ಫಿಲ್ ಮರ್ಫಿ, ಇತರ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದಿದ್ದಾರೆ.

   ಇಂಟರ್ನಲ್ ಮೆಡಿಸನ್ ಮತ್ತು ನೆಪ್ರೋಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಪ್ರಿಯಾ ಖನ್ನಾ, ಆರ್ ಡಬ್ಲ್ಯೂಜೆ ಬರ್ನಾಬಸ್ ಆರೋಗ್ಯ ಸಂಸ್ಥೆಯ ಅಂಗವಾಗಿರುವ ಯುನಿಯನ್ ಆಸ್ಪತ್ರೆಯ ಚೀಪ್ ರೆಸಿಡೆಂಟ್ಸ್ ಆಗಿದ್ದರು.

   ಕ್ಲಾರಾ ಮಾಸ್ ಮೆಡಿಕಲ್ ಸೆಂಟರ್ ನಲ್ಲಿ ಡಾ. ಸತ್ಯೇಂದರ್ ದೇವ್ ಖನ್ನಾ ಹಾಗೂ ಪ್ರಿಯಾ ಖನ್ನಾ ಇಬ್ಬರು ಮೃತಪಟ್ಟಿದ್ದಾರೆ. ಡಾ. ಸತ್ಯೇಂದರ್ ದೇವ್ ಖನ್ನಾ ಪತ್ನಿ ಕೊಮ್ಲಿಸ್ ಖನ್ನಾ ಶಿಶು ತಜ್ಞೆಯಾಗಿದ್ದಾರೆ.

   ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ

   ಮತ್ತಿಬ್ಬರು ಮಕ್ಕಳಾದ ಸುಗಂಧ ಖನ್ನಾ, ಫಿಜಿಶೀಯನ್ ಆಗಿದ್ದರೆ ಅನಿಶಾ ಖನ್ನಾ ಶಿಶು ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಜನರನ್ನು ಬದುಕುಳಿಸಿರುವ ಅವರ ಕುಟುಂಬಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಮರ್ಫಿ ಸ್ಮರಿಸಿದ್ದಾರೆ.

   78 ವರ್ಷದ ಸತ್ಯೇಂದರ್ ದೇವ್ ಖನ್ನಾ, ಅವರ ಪುತ್ರಿ ಪ್ರಿಯಾ ಖನ್ನಾ 43 ಕೊವಿಡ್- 19 ನಿಂದ ಮೃತಪಟ್ಟ ವೈದ್ಯರು. ನ್ಯೂಜೆರ್ಸಿಯ ವಿವಿಧ ಆಸ್ಪತ್ರೆಗಳಲ್ಲಿ ದಶಕಗಳ ಕಾಲ ಸರ್ಜನ್, ಸರ್ಜಿಕಲ್ ವಿಭಾಗದ ಮುಖ್ಯಸ್ಥರಾಗಿ ಸತ್ಯೇಂದರ್ ದೇವ್ ಖನ್ನಾ ಸೇವೆ ಸಲ್ಲಿಸಿದ್ದರು.

   ಡಾ. ಸತ್ಯೇಂದರ್ ದೇವ್ ಖನ್ನಾ ಹಾಗೂ ಡಾ. ಪ್ರಿಯಾ ಖನ್ನಾ ತಂದೆ- ಮಗಳು. ಇತರರಿಗೆ ನೆರವಾಗಲು ಹೋಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಇದು ಆರೋಗ್ಯ ಮತ್ತು ಔಷಧಕ್ಕೆ ಮೀಸಲಾದ ಕುಟುಂಬ. ಮಾತುಗಳಿಂದ ಸಂತಾಪ ವ್ಯಕ್ತಪಡಿಸಲು ಆಗದು ಎಂದು ನ್ಯೂಜೆರ್ಸಿ ಗೌರ್ನರ್ ಮರ್ಫಿ ಟ್ವೀಟ್ ಮಾಡಿದ್ದಾರೆ.

   English summary
   An Indian-American father and daughter, both doctors in New Jersey, have died due to the Covid-19, with Governor Phil Murphy describing their demise as “particularly tough” and hailed them for dedicating their lives for others.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X