ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಭಾರತೀಯ ವೈದ್ಯನಿಂದ ಕೊವಿಡ್ 19 ರೋಗಿಗೆ ಶ್ವಾಸಕೋಶ ಕಸಿ

|
Google Oneindia Kannada News

ಚಿಕಾಗೋ, ಜೂನ್ 11: ಭಾರತ ಮೂಲದ ವೈದ್ಯರೊಬ್ಬರು ಅಮೆರಿಕದಲ್ಲಿ ಮೊದಲ ಬಾರಿಗೆ ಕೊವಿಡ್ 19 ರೋಗಿಯೊಬ್ಬರಿಗೆ ಶ್ವಾಸಕೋಶ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಮಹಿಳಾ ರೋಗಿಗೆ ಕೊರೊನಾ ಸೋಂಕಿನಿಂದಾಗಿ ಶ್ವಾಸಕೋಶಕ್ಕೆ ತೊಂದರೆಯಾಗಿತ್ತು
.
ಕೊರೊನಾ ಸೋಂಕು ಬಂದ ಬಳಿಕ ಅಮೆರಿಕದಲ್ಲಿ ನಡೆದ ಮೊದಲ ಶ್ವಾಸಕೋಶ ಶಸ್ತ್ರ ಚಿಕಿತ್ಸೆ ಇದಾಗಿದೆ.ಶ್ವಾಸಕೋಶ ಕಸಿ ಮಾಡದೇ ಇದ್ದರೆ ಆಕೆ ಬದುಕುಳಿಯುವುದು ಸಾಧ್ಯವೇ ಇಲ್ಲ ಎಂದು ತಿಳಿದ ವೈದ್ಯರು ಈ ಸಾಹಸಕ್ಕೆ ಕೈ ಹಾಕಿದ್ದರು.

ಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತ

ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಆಕೆ ಚೇತರಿಸಿಕೊಳ್ಳಲು ಇನ್ನೂ 2 ತಿಂಗಳ ಸಮಯ ಬೇಕು ಎಂದು ವೈದ್ಯರು ತಿಳಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

Indian-Origin Doctor Performs 1st Lung Transplant In US For COVID-19 Patient

ಅಂಕಿತ್ ಭರತ್, ನಾರ್ಥ್‌ವೆಸ್ಟರ್ನ್ ಲಂಗ್ ಟ್ರಾನ್ಸ್‌ಪ್ಲಾಂಟ್ ಕಾರ್ಯಕ್ರಮದ ನಿರ್ದೇಶಕರಾಗಿದ್ದಾರೆ. ಸೋಂಕಿನಿಂದಾಗಿ ಆಕೆಯ ಜೀವ ಅಪಾಯದಲ್ಲಿತ್ತು, ಶಸ್ತ್ರ ಚಿಕಿತ್ಸೆ ಮಾಡಲೇಬೇಕಿತ್ತು, ಅಂತೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ, ಇದು ದೊಡ್ಡ ಸವಾಲಾಗಿತ್ತು ಎಂದು ವಿವರಿಸಿದ್ದಾರೆ.

ಆಕೆ ಸೆಕೆಂಡರಿ ಬ್ಯಾಕ್ಟೀರಿಯಲ್ ಸೋಂಕಿಗೆ ಒಳಗಾಗಿದ್ದು, ಆಂಟಿಬಯಾಟಿಕ್ಸ್‌ಗಳಿಂದ ಆಕೆಯನ್ನು ಕಾಪಾಡಲು ಸಾಧ್ಯವಾಗುತ್ತಿರಲಿಲ್ಲ. ಸೋಂಕು ಶ್ವಾಸಕೋಶವಲ್ಲದೆ ಹೃದಯಕ್ಕೂ ತಗುಲುತ್ತಿತ್ತು ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದರು.

ಆಕೆ ಎರಡು ದಿನ ವೈಟಿಂಗ್ ಲಿಸ್ಟ್‌ನಲ್ಲಿ ಇದ್ದರು, ಬಳಿಕ ಮದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವ ವ್ಯಕ್ತಿ ಕುಟುಂಬದವರು ಶ್ವಾಸಕೋಶವನ್ನು ನೀಡಲು ಮುಂದಾದರು.

English summary
Surgeons led by an Indian-origin doctor have given a new set of lungs to a young woman with severe lung damage from the coronavirus, a surgery believed to be the first of its kind in the US since the pandemic began.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X