• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರೀನ್ ಕಾರ್ಡ್, ಎಚ್1ಬಿ ವೀಸಾ ಬಗ್ಗೆ ಟ್ರಂಪ್ ಮಹತ್ವದ ಘೋಷಣೆ

|

ವಾಷಿಂಗ್ಟನ್, ಮೇ 16: ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ಎಚ್ 1ಬಿ ವೀಸಾ ನೀತಿ ಬಗ್ಗೆ ಗುರುವಾರದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕೃತವಾಗಿ ಘೋಷಣೆ ಹೊರಡಿಸಲಿದ್ದಾರೆ. ಈ ಹೊಸ ನೀತಿಯಲ್ಲಿ ಪ್ರಮುಖವಾಗಿ ವಿದೇಶದಿಂದ ಅಮೆರಿಕಕ್ಕೆ ಬರುವವರಿಗೆ ಕೌಶಲ್ಯ ಆಧಾರದ ಮೇಲೆ ಮಾತ್ರ ಉದ್ಯೋಗ ನೀಡುವ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಾಗಿದೆ. ಜೊತೆಗೆ ಗ್ರೀನ್ ಕಾರ್ಡ್ ಪಡೆಯಲು ಬಯಸಿರುವವರಿಗೂ ಶುಭ ಸುದ್ದಿಯಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಡೊನಾಲ್ಡ್ ಟ್ರಂಪ್ ಅವರ ಅಳಿತ ಜಾರಾಡ್ ಕುಷ್ನರ್ ಅವರು ಈ ಹೊಸ ನೀತಿಯ ರೂಪುರೇಷೆಗಳನ್ನು ಸಿದ್ಧಪಡಿಸಿದ ಪ್ರಮುಖರಾಗಿದ್ದಾರೆ. ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರಲು ಎಚ್ 1 ಬಿ 2020ರ ಸೀಸನ್ ತನಕ ಕಾಯಬೇಕಿದೆ. ಅಮೆರಿಕದ ವಿದ್ಯಾಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಸ್ನಾತಕೋತ್ತರ ಪದವಿ ಪಡೆದ ಕೌಶಲ್ಯಪೂರ್ಣ ವಿದೇಶಿಯರಿಗೆ ಮಾತ್ರ ಹೆಚ್ಚ ಅವಕಾಶ ಸಿಗಲಿದೆ.

ಈ 15 ಕಂಪನಿಗಳು ಎಚ್ 1 ಬಿ ವೀಸಾಕ್ಕೆ ಅರ್ಜಿ ಹಾಕುವಂತಿಲ್ಲ

ಕೌಟುಂಬಿಕ ಹಿನ್ನಲೆ ಆಧಾರ ಮೇಲೆ 66% ಹಾಗೂ ಕೌಶಲ್ಯ ಆಧಾರದ ಮೇಲೆ 12% ಮಂದಿಗೆ ಗ್ರೀನ್ ಕಾರ್ಡ್ ನೀಡಲಾಗುತ್ತಿದೆ. ಸದ್ಯ 1.1 ಮಿಲಿಯನ್ ಗ್ರೀನ್ ಕಾರ್ಡ್ ಗಳನ್ನು ಪ್ರತಿವರ್ಷ ನೀಡಲಗುತ್ತಿದೆ. ಹೊಸ ನೀತಿ ಜಾರಿಗೊಂಡ ಬಳಿಕ ಸರಿಯಾಗಿ ಅಧ್ಯಕ್ಷೀಯ ಚುನಾವಣೆ ಹೊತ್ತಿಗೆ ಕೌಶಲ್ಯ ಆಧಾರದ ಮೇಲೆ ಹೆಚ್ಚೆಚ್ಚು ಗ್ರೀನ್ ಕಾರ್ಡ್ ನೀಡುವ ಪ್ರಕ್ರಿಯೆ ಶುರುವಾಗಲಿದೆ. ಇದರಿಂದ ಎಚ್ 1 ಬಿ ವೀಸಾ ಆಧಾರಿಸಿರುವ ಭಾರತೀಯ ಮೂಲದ ವೃತ್ತಿಪರರಿಗೆ ನೆರವಾಗಲಿದೆ. ಆದರೆ, ಅತ್ಯುನ್ನತ ಕೌಶಲ್ಯ ಹೊಂದಿದವರಿಗೆ ಅದ್ಯತೆ ಸಿಗಲಿದೆ. ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಜಪಾನ್ ದೇಶಗಳ ವೀಸಾ ನೀತಿಯನ್ನು ಪರಿಶೀಲಿಸಿ ಯುಎಸ್ ನಲ್ಲಿ ವೀಸಾ ನೀತಿ ಬದಲಾಯಿಸಲಾಗಿದೆ.

ಗ್ರೀನ್ ಕಾರ್ಡ್ ಗಾಗಿ ಹೆಚ್ಚು ಕಾಯಬೇಕಿಲ್ಲ

ಗ್ರೀನ್ ಕಾರ್ಡ್ ಗಾಗಿ ಹೆಚ್ಚು ಕಾಯಬೇಕಿಲ್ಲ

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಅಥವಾ ಶಾಶ್ವತ ನೆಲೆ ಕಂಡುಕೊಳ್ಳಲು ಯೋಜನೆ ಹಾಕಿಕೊಂಡಿರುವ ವೃತ್ತಿಪರರಿಗೆ ಇದು ರಹದಾರಿ ನೀಡಲಿದೆ. ಸಾಮಾನ್ಯವಾಗಿ 3 ರಿಂದ 6 ವರ್ಷಗಳ ಅವಧಿಗೆ ವಿದೇಶಿ ವೃತ್ತಿಪರರಿಗೆ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿ ಅನ್ವಯ ಬದಲಾವಣೆ ಅನಿವಾರ್ಯವಾಗಲಿದೆ.

H-1Bವೀಸಾಗೆ ಭಾರತೀಯರಿಂದಲೇ ಅತೀ ಹೆಚ್ಚು 2.47 ಲಕ್ಷ ಅರ್ಜಿ

ವೀಸಾ ನಿಯಮದಲ್ಲಿ ಭಾರಿ ಬದಲಾವಣೆಯಾಗಿದೆ

ವೀಸಾ ನಿಯಮದಲ್ಲಿ ಭಾರಿ ಬದಲಾವಣೆಯಾಗಿದೆ

ಬಹುತೇಕ ಭಾರತದ ಐಟಿ ವೃತ್ತಿಪರರು ಅರ್ಜಿ ಹಾಕುವ ಈ ಬೇಡಿಕೆಯ ವೀಸಾ ನಿಯಮದಲ್ಲಿ ಭಾರಿ ಬದಲಾವಣೆಯಾಗಿದೆ. ಜೊತೆಗೆ, ವೃತ್ತಿ ಸಂಬಂಧಿ ವೀಸಾ ನವೀಕರಣ ಮಾಡುವುದು ಹೆಚ್ಚಾಗಿದೆ. ಕಡಿಮೆ ದರದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಭಾರತ ಹಾಗೂ ಚೀನಾ ಒದಗಿಸುತ್ತಿದೆ. ಹೊಸ ನೀತಿಯಂತೆ, third party worksite ನಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವೀಸಾಗಳ ಅವಧಿ 3 ವರ್ಷಗಳ ತನಕ ಇರುತ್ತದೆ. ಆದರೆ, ಇದರ ನವೀಕರಣ ಪ್ರಕ್ರಿಯೆ ಸುಲಭವಾಗಿಲ್ಲ.

ಭಾರತದ ಐಟಿ ಕಂಪನಿಗಳಿಗೆ ನೆಮ್ಮದಿ

ಭಾರತದ ಐಟಿ ಕಂಪನಿಗಳಿಗೆ ನೆಮ್ಮದಿ

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿತ್ತು. ವೀಸಾ ನೀತಿಯಲ್ಲಿ ಮಾರ್ಪಾಟು ಹಾಗೂ ಎಚ್ 1 ಬಿ ವೀಸಾ ಪಡೆಯುವ ಪ್ರತಿಭಾವಂತರ ಬಗ್ಗೆ ಮೋದಿ ಅವರು ಕಾಳಜಿ ವಹಿಸಿ ಯುಎಸ್ ಪ್ರತಿನಿಧಿಗಳ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಕೊನೆಗೂ ಟ್ರಂಪ್ ಸರ್ಕಾರದಿಂದ ಭಾರತದ ಹೊರಗುತ್ತಿಗೆ ಕಂಪನಿಗಳಿಗೆ ಶುಭ ಸುದ್ದಿ ಸಿಕ್ಕಿದೆ.

ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು

ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು

ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್​ನಿಂದ 1,30,000 ಡಾಲರ್​ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆಯಾಗಿದೆ. ಅಮೆರಿಕದ ಸಂಸತ್ತಿನಲ್ಲಿ ಎಚ್ 1 ಬಿ ವೀಸಾದಾರರ ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಈ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ .

English summary
In a major policy speech Thursday, US President Donald Trump is all set to announce a new proposal to overhaul the country's immigration policy that would give preference to foreigners based on merit rather than the existing system that gives preference to family ties, a move that could end the agonising Green Card wait for hundreds and thousands of Indian professionals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X