ಭಾರತ ಮೂಲದ ಜನರಿಗೆ ಅಮೆರಿಕದಲ್ಲಿ ಹಿಂಸೆ? ಜನಾಂಗೀಯ ದಾಳಿಯ ಭಯಾನಕ ಸತ್ಯ
ಜಗತ್ತು ಒಂದು ಕಡೆ ಹೋದರೆ, ಅಮೆರಿಕ ಮತ್ತೊಂದು ಕಡೆ ಸಾಗುತ್ತದೆ. ಅದು ಅಭಿವೃದ್ಧಿಯೇ ಇರಬಹುದು ಅಥವಾ ಮಿಲಿಟರಿ ವಿಚಾರವೇ ಇರಬಹುದು. ಹೀಗೆ ಅಮೆರಿಕ ಎಲ್ಲದರಲ್ಲೂ ನಂಬರ್ 1 ಆಗಬೇಕೆಂಬ ಕನಸು ಹೊಂದಿದೆ. ಆದರೆ ಅಮೆರಿಕದ ಸಾಮಾಜಿಕ ಸ್ವಾಸ್ಥ್ಯ ಮಾತ್ರ ಹಾಳಾಗಿ ಹೋಗಿದೆ. ಈಗಲಾದರೂ ಅಮೆರಿಕದಲ್ಲಿ ಕರಿಯರು, ಬಿಳಿಯರು, ಏಷ್ಯನ್ನರು ಎಂಬ ಕ್ರೂರ ಪದ್ಧತಿ ಇದೆ.
Recommended Video
ಅದ್ರಲ್ಲೂ ಭಾರತ ಮೂಲದವರಿಗೆ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾರಂತೆ ಕೆಲವು ಅಮೆರಿಕನ್ನರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸೇರಿ ಇನ್ನಿತರ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, ಅಮೆರಿಕದಲ್ಲಿ ವಾಸಿಸುತ್ತಿರುವ ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗಾದರೂ ಜನಾಂಗೀಯ ದಾಳಿಯ ಅನುಭವ ಆಗಿದೆಯಂತೆ.
ಅದರಲ್ಲೂ ಕೊರೊನಾ ವಕ್ಕರಿಸಿದ ಬಳಿಕ ಭಾರತೀಯರನ್ನ ಅಮೆರಿಕದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಸುಮಾರು 1200 ಭಾರತ ಮೂಲದ ಅಮೆರಿಕನ್ನರನ್ನು ಸಮೀಕ್ಷೆ ನಡೆಸಿದಾಗ ಈ ಭಯಾನಕ ವಿಚಾರ ಬೆಳಕಿಗೆ ಬಂದಿದೆ. ಭಾರತ ಮೂಲದವರನ್ನ ಹೆಚ್ಚಾಗಿ ಚರ್ಮದ ಬಣ್ಣ ಹಿಡಿದು ಹೀಯಾಳಿಸಿದವರೇ ಹೆಚ್ಚು ಎನ್ನಲಾಗಿದೆ.

ಭಾರತೀಯರ ಮೇಲೆ ಕೋಪ ಏಕೆ..?
ಅಮೆರಿಕದಲ್ಲಿ ಜನಾಂಗೀಯ ನಿಂದನೆ, ದಾಳಿ ಮೊದಲಿನಿಂದಲೂ ನಡೆಯುತ್ತಿದೆ. ಆದರೆ ಕೊರೊನಾ ಕಾಲದಲ್ಲಿ ಇಂತಹ ಕೀಳು ಮನಸ್ಥಿತಿ ಹೆಚ್ಚಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ ಅಮೆರಿಕದಲ್ಲಿ ವಾಸ ಇರುವ ಪ್ರತಿ ಇಬ್ಬರ ಪೈಕಿ ಒಬ್ಬ ಭಾರತ ಮೂಲದ ವ್ಯಕ್ತಿಗಾದರೂ ಜನಾಂಗೀಯ ನಿಂದನೆ ಅಥವಾ ಜನಾಂಗೀಯ ದಾಳಿ ಅನುಭವ ಆಗಿದೆಯಂತೆ. ಇದು ಅಮೆರಿಕದಲ್ಲಿ ಹಬ್ಬಿರುವ ಜನಾಂಗೀಯ ತಾರತಮ್ಯ ಮನೋಭಾವನೆಯನ್ನು ತಿಳಿಸುತ್ತದೆ. ಇದೆಲ್ಲವನ್ನೂ ಸಹಿಸಿಕೊಂಡೇ ಭಾರತೀಯರು ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕೆಲ ಸೈಕೋಗಳ ವರ್ತನೆಯಿಂದಾಗಿ ಅಮೆರಿಕದಲ್ಲಿ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರುವಂತಾಗಿದೆ.

ಅಲ್ಲೇ ಹುಟ್ಟಿದ್ದರೆ ಇನ್ನೂ ಟಾರ್ಚರ್
ಭಾರತದಿಂದ ಹೋಗಿ ನೆಲೆಸಿದವರಿಗಿಂತಲೂ, ಅಮೆರಿಕದಲ್ಲೇ ಹುಟ್ಟಿದ ಭಾರತ ಮೂಲದವರಿಗೆ ಜನಾಂಗೀಯ ತಾರತಮ್ಯ ಹೆಚ್ಚಾಗಿ ಅನುಭವವಾಗಿದೆ. ಅದರಲ್ಲೂ ಭಾರತ ಮೂಲದ ದಂಪತಿಗೆ ಜನಿಸಿದವರು ಇಂತಹ ಕೆಟ್ಟ, ಸಹಿಸಲಾಗದ ಪರಿಸ್ಥಿತಿಯಲ್ಲಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಏಷ್ಯಾ ಮೂಲದ ಜನರ ಮೇಲೆ ಹೀಗೆ ಹಲವು ದಾಳಿಗಳು ನಡೆಯುತ್ತವೆ, ಆದರೆ ಭಾರತೀಯರನ್ನೇ ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಕಳವಳ ಉಂಟುಮಾಡುವ ವಿಚಾರ. ಅದೆಷ್ಟೇ ಶ್ರೀಮಂತ ರಾಷ್ಟ್ರ ಎನಿಸಿಕೊಂಡರೂ ಅಮೆರಿಕ ಇಂತಹ ಕ್ರೂರ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗದೇ ಇರೋದು ದುರಂತವೇ ಸರಿ.

ಲಕ್ಷ ಲಕ್ಷ ಭಾರತೀಯರು..!
ಭಾರತ ಮೂಲದ ಪ್ರತಿಭೆಗಳಿಗೆ ಜಗತ್ತಿನ ಯಾವ ಮೂಲೆಯಲ್ಲಾದರೂ ಜಾಗವಿದೆ. ಭಾರತ ಮೂಲದ ಕೋಟಿ ಕೋಟಿ ಪ್ರತಿಭಾವಂತರು ಹೊರ ದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗೇ ತಾಯಿ ನಾಡಿನ ಸೇವೆಯನ್ನೂ ಮಾಡುತ್ತಿದ್ದಾರೆ. ಹೀಗೆ ಅಮೆರಿಕದಲ್ಲಿ ಸುಮಾರು 42 ಲಕ್ಷ ಭಾರತೀಯರು ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ. 1ಕ್ಕೆ ಸಮವಾಗಿದೆ. 42 ಲಕ್ಷ ಭಾರತೀಯರಲ್ಲಿ ಬಹುತೇಕರಿಗೆ ಅಮೆರಿಕದಲ್ಲಿ ಮತದಾನ ಮಾಡುವ ಹಕ್ಕು ಕೂಡ ಇದೆ. ಇದೆಲ್ಲಾ ‘ಬಿಳಿಯರ ಸಾರ್ವಭೌಮತ್ವ' ವಾದಿಗಳಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಭಾರತೀಯರ ಮೇಲೆ ಜನಾಂಗೀಯ ದಾಳಿ ಹೆಚ್ಚುತ್ತಿದೆ ಎಂಬ ಆರೋಪವಿದೆ.

ಇದು ಶತಮಾನಗಳ ಕಾದಾಟ
ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ಎಂಬುದು ಇಂದು ಅಥವಾ ನಿನ್ನೆಯದಲ್ಲ. ಯಾವಾಗ ಯುರೋಪ್ ಮೂಲದ ಜನರು ಅಮೆರಿಕದಲ್ಲಿ ನೆಲೆ ಕಂಡುಕೊಂಡರೋ, ಅಂದಿನಿಂದಲೇ ಈ ಕಿತ್ತಾಟವೂ ಆರಂಭವಾಗಿದೆ. ನೂರಾರು ವರ್ಷಗಳಿಂದ ಅಮೆರಿಕದಲ್ಲಿ ಜನಾಂಗೀಯ ದಾಳಿ, ತಾರತಮ್ಯ, ಸಂಘರ್ಷ ಇದೆ. ಮೊದಲಿಗೆಲ್ಲಾ ಅಮೆರಿಕದ ಮೂಲ ನಿವಾಸಿಗಳ ಜೊತೆ ಕಿತ್ತಾಡಿದ್ದ ಯುರೋಪ್ ವಲಸಿಗರು, ನಂತರ ಆಫ್ರಿಕಾ ಮೂಲದವರ ಮೇಲೆ ದಾಳಿ ಮಾಡಿ ಜೀತ ಮಾಡಿಸಿದರು. ಅಲ್ಲಿಂದ ಮುಂದೆ ಆಫ್ರಿಕನ್-ಅಮೆರಿಕನ್ಸ್ ಮೂಲ ನಿವಾಸಿಗಳ ಸ್ಥಾನಮಾನ ಪಡೆದರು. ಆಫ್ರಿಕನ್-ಅಮೆರಿಕನ್ಸ್‌ಗೆ ಅಮೆರಿಕದ ಪೌರತ್ವ ಸಿಕ್ಕ ನಂತರವಂತೂ ಜನಾಂಗೀಯ ಸಂಘರ್ಷ ತಾರಕಕ್ಕೆ ಏರಿತ್ತು. ಈಗಲೂ ಇಂತಹ ಕೀಳು ಮನಸ್ಥಿತಿ ಅಸ್ಥಿತ್ವದಲ್ಲಿರುವುದು ಅಮೆರಿಕದ ದುರಂತ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications