• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಭಾರತ ಮತ್ತೆ ಆಯ್ಕೆ

|
Google Oneindia Kannada News

ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ(ಯುನೆಸ್ಕೋ)ದ ಕಾರ್ಯಕಾರಿ ಮಂಡಳಿಗೆ ಭಾರತ ಮತ್ತೆ ಆಯ್ಕೆಯಾಗಿದೆ. 2021ರಿಂದ 2025ರವರೆಗೆ ಭಾರತದ ಸದಸ್ಯತ್ವ ಹೀಗೆಯೇ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬುಧವಾರ ಯುನೆಸ್ಕೋ ಕಾರ್ಯಕಾರಿ ಮಂಡಳಿ ಸದಸ್ಯರ ಚುನಾವಣೆ ನಡೆಯಿತು, ಆರನೇ ಗುಂಪಿನ ಏಷ್ಯಾ ಮತ್ತು ಪೆಸಿಫಿಕ್ ರಾಷ್ಟ್ರಗಳ ಪೈಕಿ ಜಪಾನ್, ಫಿಲಿಪೀನ್ಸ್‌, ವಿಯೆಟ್ನಾಂ, ಕುಕ್ ಐಲ್ಯಾಂಡ್ಸ್‌ ಹಾಗೂ ಚೀನಾ ಕೂಡ ಆಯ್ಕೆಯಾಗಿವೆ.

ಭಾರತವು ಒಟ್ಟು 164 ಮತಗಳನ್ನು ಪಡೆಯುವ ಯುನೆಸ್ಕೋದ ಕಾರ್ಯಕಾರಿ ಮಂಡಳಿಯ ಸದಸ್ಯ ಸ್ಥಾನಕ್ಕೆ 2020-25ರ ಅವಧಿಗೆ ಮರು ಆಯ್ಕೆಯಾಗಿದೆ ಎಂದು ಪ್ಯಾರಿಸ್‌ನಲ್ಲಿರುವ ಯುನೆಸ್ಕೋದ ಭಾರತದ ಕಾಯಂ ನಿಯೋಗದ ಟ್ವಿಟ್ಟರ್ ಖಾತ್ರಿ ಪಡಿಸಿದೆ.

ವಿಶ್ವಸಂಸ್ಥೆಯಲ್ಲಿರುವ ಸಾಮಾನ್ಯ ಸಭೆಯ ಅಡಿಯಲ್ಲಿ ಯುನೆಸ್ಕೋ ಕಾರ್ಯಕಾರಿ ಮಂಡಳಿ ಕಾರ್ಯಾಚರಿಸುತ್ತಿದೆ. ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್ ಅಂದಾಜಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಮಂಡಳಿಯು ಪರಿಶೀಲನೆ ನಡೆಸುತ್ತಿದೆ.

ಯುನೆಸ್ಕೋ ವೆಬ್‌ಸೈಟ್ ಪ್ರಕಾರ, ಕಾರ್ಯಕಾರಿ ಮಂಡಳಿಯು 58 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಪ್ರತಿ ಸದಸ್ಯ ರಾಷ್ಟ್ರವು ನಾಲ್ಕು ವರ್ಷಗಳ ಕಾರ್ಯಾಚರಣೆ ಅವಧಿ ಹೊಂದಿರುತ್ತದೆ.

ವಿಶ್ವ ಸಂಸ್ಥೆಯ ಮೂರು ಅಂಗಗಳಲ್ಲಿ ಯುನೆಸ್ಕೋ ಕಾರ್ಯಕಾರಿ ಮಂಡಳಿಯೂ ಕೂಡ ಒಂದು. ಧ್ವನಿಮತದ ಮೂಲಕ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಮೂರು ಸಂಸ್ಥೆಗಳ ಕಾರ್ಯಕಾರಿ ಸಮಿತಿಗೆ ಭಾರತವನ್ನು ಸದಸ್ಯ ರಾಷ್ಟ್ರವನ್ನಾಗಿ ಏಪ್ರಿಲ್‌ನಲ್ಲಿ ಆಯ್ಕೆ ಮಾಡಲಾಗಿತ್ತು.

ಜನವರಿ 1 2022 ರಿಂದ ಆರಂಭವಾಗಲಿರುವ ವಿಶ್ವಸಂಸ್ಥೆಯ ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಆಯೋಗ, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಮತ್ತು ವಿಶ್ವ ಆಹಾರ ಕಾರ್ಯಕ್ರಮಗಳ ಕಾರ್ಯಕಾರಿ ಸಮಿತಿಗೆ ಭಾರತವನ್ನು ಆಯ್ಕೆ ಮಾಡಲಾಗಿದೆ.

ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಆಯೋಗಕ್ಕೆ ಆಸ್ಟ್ರಿಯಾ, ಬಹ್ರೇನ್, ಬೆಲರಸ್, ಬಲ್ಗೇರಿಯಾ, ಕೆನಡಾ, ಫ್ರಾನ್ಸ್‌, ಘಾನಾ, ಲಿಬಿಯಾ, ಪಾಕಿಸ್ತಾನ, ಕತಾನರ್, ಥಾಯ್ಲೆಂಡ್ ಹಾಗೂ ಅಮೆರಿಕ ರಾಷ್ಟ್ರಗಳನ್ನೂ ಧ್ವನಿ ಮತದ ಮೂಲಕ ಆಯ್ಕೆ ಮಾಡಿದ್ದರೆ, ಬ್ರೆಜಿಲ್, ಡೊಮಿನಿಕನ್ ಗಣರಾಜ್ಯ, ಪರಗ್ವೆ, ಚಿಲಿ, ಕ್ಯೂಬಾ ರಾಷ್ಟ್ರಗಳನ್ನು ಗೌಪ್ಯ ಮತದಾನದ ಮೂಲಕ ಆಯ್ಕೆ ಮಾಡಲಾಗಿತ್ತು.

ವಿಶ್ವಸಂಸ್ಥೆಯ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ವಿಭಾಗದ ಕಾರ್ಯನಿರ್ವಾಹಕ ಮಂಡಳಿಗೆ ಭಾರತದೊಂದಿಗೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕ್ಯಾಮರೂನ್, ಕೊಲಂಬಿಯಾ, ಈಜಿಪ್ಟ್, ಗ್ಯಾಂಬಿಯಾ, ಗಯಾನಾ, ಮೊನೊಕೊ, ಪೋಲೆಂಡ್, ದಕ್ಷಿಣ ಆಫ್ರಿಕಾ, ಉಕ್ರೇನ್ ದೇಶಗಳನ್ನು ಧ್ವನಿ ಮತದ ಮೂಲಕ ಆಯ್ಕೆ ಮಾಡಲಾಗಿದೆ.

English summary
India on Wednesday won the re-election to the executive board of the UN's cultural and education organisation for the 2021-25 term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X