ಪಾಕಿಸ್ತಾನದ ಮೇಲೆ ನಂಬಿಕೆ ಇದೆ: ಡೊನಾಲ್ಡ್ ಟ್ರಂಪ್

Recommended Video

      ಪಾಕಿಸ್ತಾನವನ್ನ ಹಾದಿ ಹೊಗಳಿದ ಟ್ರಂಪ್ | Oneindia Kannada

      ವಾಷಿಂಗ್ಟನ್, ಸೆಪ್ಟೆಂಬರ್ 24: ಮೊನ್ನೆಯಷ್ಟೆ ಭಾರತವನ್ನು ಹಾಡಿ ಹೊಗಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಾ-ಏಕಿ ಪಾಕಿಸ್ತಾನದ ಮೇಲೆ ಪ್ರೀತಿ ಪ್ರಕಟಿಸಿದ್ದಾರೆ.

      ನಿನ್ನೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಪಾಕಿಸ್ತಾನದ ಮೇಲೆ ನಂಬಿಕೆ ಇದೆ' ಎಂದಿದ್ದಾರೆ.

      ಕಾಶ್ಮೀರ ವಿಷಯವಾಗಿ ಭಾರತ-ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ತಯಾರಿರುವ ತಮ್ಮ ನಿಲವನ್ನು ಮತ್ತೆ ಪ್ರಕಟಿಸಿದ ಡೊನಾಲ್ಡ್ ಟ್ರಂಪ್, 'ಕಾಶ್ಮೀರ ವಿಷಯದಲ್ಲಿ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ತಯಾರು' ಎಂದು ಹೇಳಿದ್ದಾರೆ.

      I Have Trust In Pakistan: Donald Trump

      ಎರಡು ದಿನಗಳ ಹಿಂದಷ್ಟೆ ಪ್ರಧಾನಿ ಮೋದಿ ಅವರೊಂದಿಗೆ ಹ್ಯೂಸ್ಟನ್‌ನಲ್ಲಿ ವೇದಿಕೆ ಹಂಚಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವನ್ನು ಹಾಡಿ ಹೊಗಳಿದ್ದರು, ಜೊತೆಗೆ 'ವಿಶ್ವದಿಂದ ಇಸ್ಲಾಂ ಮೂಲಭೂತವಾದಿ ಭಯೋತ್ಪಾದನೆಯನ್ನು ಹೊಡೆದು ಹಾಕಲು ಅಮೆರಿಕ ಬದ್ಧ' ಎಂದು ಹೇಳಿದ್ದರು. ಆದರೆ ನಿನ್ನೆ ಅದೇ ಪಾಕಿಸ್ತಾನದ ಪರವಾಗಿ ಮೃದು ಧೋರಣೆಯ ಮಾತುಗಳನ್ನಾಡಿದ್ದಾರೆ.

      'ನಾನು ಪಾಕಿಸ್ತಾನವನ್ನು ನಂಬುತ್ತೇನೆ, ಕಾಶ್ಮೀರದಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರುವ ನಿರೀಕ್ಷೆ ಇದೆ, ನನಗೆ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಇದೆ, ಇಮ್ರಾನ್ ಖಾನ್ ಅವರೊಂದಿಗೂ ಉತ್ತಮ ಸ್ನೇಹ ಇದೆ, ಇಬ್ಬರೂ ಒಪ್ಪಿದರೆ, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ' ಎಂದು ಡೊನಾಲ್ಡ್ ಟ್ರಂಪ್ ನಿನ್ನೆ ಹೇಳಿದ್ದಾರೆ.

      ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ವಿಷಯವಾಗಿ ಮಧ್ಯಸ್ಥಿಕೆ ವಹಿಸುತ್ತೇವೆ ಎಂದಿದ್ದಾಗ, ಭಾರತವು ಸ್ಪಷ್ಟವಾಗಿ ಅದನ್ನು ನಿರಾಕರಿಸಿತ್ತು. ಆದರೆ ಈಗ ಮತ್ತೆ ಅದೇ ಮಾತನ್ನು ಟ್ರಂಪ್ ಪುನರ್‌ ಉಚ್ಛರಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+