ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದಿದೆ ಮೆದುಳನ್ನೇ ನಿಷ್ಕ್ರಿಯಗೊಳಿಸಬಲ್ಲ ಹೊಸ ವೈರಸ್

|
Google Oneindia Kannada News

ನವದೆಹಲಿ, ನವೆಂಬರ್ 18: ಇಡೀ ವಿಶ್ವವೇ ಕಳೆದ ವರ್ಷದಿಂದ ಕೊರೊನಾ ಆತಂಕದಲ್ಲಿ ಮುಳುಗಿದೆ. ಇದರ ನಡುವೆಯೇ ಹೊಸ ವೈರಸ್‌ 'ಚಾಪರೆ' ಒಂದು ಎಂಟ್ರಿ ಕೊಟ್ಟಿದೆ.

ಈ ವೈರಸ್‌ ಕೂಡ ಮನುಷ್ಯರಿಂದ ಮನುಷ್ಯರಿಗೆ ಹರಡಬಹುದು ಎನ್ನುವ ಅಂಶ ಬೆಳಕಿಗೆ ಬಂದಿದೆ.ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಈ ವೈರಸ್ ಕುರಿತ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಡೆಂಗ್ಯೂ ಮಾದರಿಯ ಲಕ್ಷಣಗಳನ್ನು ಈ ವೈರಸ್ ಹೊಂದಿದೆ. ಇದರಿಂದ ಮೆದುಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಹಾಗೆಯೇ ಇಬೋಲಾದ ಲಕ್ಷಣಗಳನ್ನು ಕೂಡ ಹೊಂದಿದೆ. ಇದನ್ನು ಅತ್ಯಂತ ಕೆಟ್ಟ ವೈರಸ್ ಎಂದು ಪರಿಗಣಿಸಲಾಗಿದೆ.

 Human To Human Transmission Of Rare Chapare Virus In Bolivia Confirmed By Scientists

ವಿಜ್ಞಾನಿಗಳು ನೀಡಿರುವ ಮಾಹಿತಿ ಪ್ರಕಾರ 2019ರಲ್ಲಿ ಬೊಲಿವಿಯಾದ ರಾಜಧಾನಿ ಲಾ ಪಾಜ್‌ನಲ್ಲಿ ಇಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಯ ಇಬ್ಬರು ನರ್ಸ್‌ಗಳು ಈ ವೈರಸ್‌ನಿಂದಲೇ ಮೃತಪಟ್ಟಿದ್ದರು.

2004ರಲ್ಲಿ ಈ ವೈರಸ್‌ನ್ನು ಬೊಲಿವಿಯಾದ ಚಾಪರೆ ಪ್ರದೇಶದಲ್ಲಿ ಕಂಡುಹಿಡಿಯಲಾಗಿತ್ತು. ಈ ವೈರಸ್ ಇಲಿಗಳಿಂದ ಮಾನವನ ಶರೀರವನ್ನು ಪ್ರವೇಶಿಸುತ್ತದೆ. ಇದು ಕೂಡ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.

ಯಾರ್ಯಾರಿಗೆ ಈ ಸೋಂಕು ತಗುಲಿರುತ್ತದೆಯೋ ಅವರಲ್ಲಿ ವಸಡಿನಲ್ಲಿ ರಕ್ತ ಸುರಿಯುವುದು, ಮುಖ ಊದಿಕೊಳ್ಳುವುದು, ಕಣ್ಣಿನೊಳಗೆ ನೋವು ಕಾಣಿಸಿಕೊಳ್ಳುತ್ತದೆ, ಈ ರೋಗಕ್ಕೆ ಯಾವುದೇ ಔಷಧಗಳಿಲ್ಲ. ಒಂದೆರೆಡು ಪ್ರಕಣಗಳಲ್ಲೇ ರೋಗದ ಬಗ್ಗೆ ಅರಿವು ಬಂದಿರುವ ಕಾರಣ ಚಿಕಿತ್ಸೆಯೂ ಕೂಡ ಸುಲಭವಾಗಲಿದೆ. ಈ ವೈರಸ್‌ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

English summary
The US Centers for Disease Control and Prevention recently found a rare virus in Bolivia. The virus in question is capable of human-to-human transmission, and can cause haemorrhagic fevers like Ebola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X