ಮನುಷ್ಯತ್ವವನ್ನೇ ಗೆಲ್ಲಿಸಿದ ಈ ಇಬ್ಬರ ವಿಡಿಯೋ ಈಗ ವೈರಲ್

ವಾಷಿಂಗ್ಟನ್, ಅಕ್ಟೋಬರ್ 29: ಇಂಥ ಘಟನೆಗಳು ನೋಡಿದಾಗಲೇ ಮನುಷ್ಯತ್ವದ ಮೇಲೆ ನಂಬಿಕೆ ಮತ್ತೂ ಹೆಚ್ಚಾಗುತ್ತದೆ. ಬೇರೆಲ್ಲ ಭೇದ ಭಾವಗಳು ಎಲ್ಲೋ ಕೆಲವರು ಕಟ್ಟಿದ ಸಡಿಲ ಗೋಡೆ ಎಂದೆನಿಸುತ್ತದೆ. ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಅದರ ವಿಡಿಯೋವನ್ನು 'ಅಮೆರಿಕ ಔಟ್ ಲೌಡ್'ನ ಸಹ ನಿರೂಪಕ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರು ಕಪ್ಪು ವರ್ಣದವರು ಅಮೆರಿಕದಲ್ಲಿ ವಯಸ್ಸಾದ, ಬಿಳಿ ವರ್ಣದ ಮಹಿಳೆಗೆ ನೆರವು ನೀಡಿದ್ದಾರೆ. ಅದು ಎಂಥ ಪರಿಸ್ಥಿತಿ ಎಂಬುದು ಇಲ್ಲಿ ಮನ ಕರಗುವಂಥ ಸಂಗತಿ. ತಮ್ಮ ಕಾರಿಗೆ ಅನಿಲ ತುಂಬಿಸಿಕೊಂಡ ನಂತರ ಅದರ ಬಿಲ್ ಪಾವತಿಸುವಷ್ಟು ಹಣ ಆ ಮಹಿಳೆ ಬಳಿ ಇರಲಿಲ್ಲವಂತೆ. ಈ ಸ್ಥಿತಿಯಲ್ಲಿ ಆ ಮಹಿಳೆ ಕಣ್ಣೀರು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಪ್ಪು ವರ್ಣದ ವ್ಯಕ್ತಿಯೊಬ್ಬ ತೆರಳಿ ಬಿಲ್ ಪಾವತಿಸಿದ್ದಾರೆ.

ಈಚೆಗೆ ತನ್ನ ಪತಿಯನ್ನು ಕಳೆದುಕೊಂಡ ಆ ಹಿರಿಯ ಮಹಿಳೆ ಕಷ್ಟದ ಪರಿಸ್ಥಿತಿಯಲ್ಲಿದ್ದರು. ತಮ್ಮ ಕಾರಿಗೆ ಅನಿಲ ತುಂಬಿಸಿದ ನಂತರ ತಮ್ಮ ಬಳಿಯಿದ್ದ ಪೆನ್ನಿಗಳನ್ನು (ಚಿಲ್ಲರೆ ಕಾಸುಗಳಲ್ಲಿ) ಎಣಿಸಿ, ಪಾವತಿಸುತ್ತಿದ್ದರು. ಆ ವೇಳೆ ಆಕೆ ಕಣ್ಣೀರು ಹಾಕುತ್ತಿರುವುದು ಈ ಇಬ್ಬರಿಗೆ ಗಮನಕ್ಕೆ ಬಂದಿದೆ. ಆಕೆ ಕಷ್ಟ ಮತ್ತಿತರ ವಿಚಾರದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಬಿಲ್ ಪಾವತಿಸಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

How these two men helped elderly woman has deeply touched the Internet

ಈ ವಿಡಿಯೋ ಕನಿಷ್ಠ ಎರಡು ಲಕ್ಷ ಬಾರಿ ರೀಟ್ವೀಟ್ ಮಾಡಲಾಗಿದೆ. ಏಳು ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ಈ ಇಬ್ಬರು ವ್ಯಕ್ತಿಗಳ ನಡವಳಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆ ಇಬ್ಬರ ಪೈಕಿ ಒಬ್ಬಾತ ಕಾಮೆಡಿಯನ್ ಕಾರ್ಲೋಸ್ ಡೇವಿಸ್ ಎಂದು ಗೊತ್ತಾಗಿದೆ.

ಮಹಿಳೆಯು ಕಾರಿಗೆ ಇಂಧನ ಭರ್ತಿ ಮಾಡಿಸಿದ ನಂತರ ಪೆನ್ನಿಗಳಲ್ಲಿ ಹಣ ನೀಡುವುದು ಕಂಡು, ತಮ್ಮ ಕಾರಿನಿಂದ ಕೆಳಗಿಳಿಯುವ ಇಬ್ಬರು ಸ್ವಲ್ಪ ಹಣ ನೀಡುತ್ತಾರೆ. ಆಗ ಆಕೆ ಕುಸಿಯುತ್ತಾರೆ. ಆಕೆಗೆ ಇವರಿಬ್ಬರೂ ಸಾಂತ್ವನ ಹೇಳುತ್ತಾರೆ ಇದು ವಿಡಿಯೋದಲ್ಲಿ ದಾಖಲಾಗಿದೆ.

ಅಮೆರಿಕವೂ ಸೇರಿದಂತೆ ಹಲವು ಕಡೆ ವರ್ಣ ಭೇದ ಈಗಲೂ ಇದೆ. ಮೈ ಚರ್ಮದ ಆಧಾರದಲ್ಲಿ ಮೇಲು-ಕೀಳು ಎಂದು ಭೇದ ಮಾಡುವ ಜನರಿದ್ದಾರೆ. ಕಪ್ಪು ವರ್ಣದವರನ್ನು ತುಂಬ ಕೆಟ್ಟದಾಗಿ ನಡೆಸಿಕೊಳ್ಳುವವರು ಇದ್ದಾರೆ. ಇಂಥ ಸನ್ನಿವೇಶದಲ್ಲಿ ಕಪ್ಪು ವರ್ಣದವರು ಇಬ್ಬರು, ವಯಸ್ಸಾದ-ಕಷ್ಟದಲ್ಲಿರುವ ಬಿಳಿ ವರ್ಣದ ಮಹಿಳೆಗೆ ಸಹಾಯ ಮಾಡಿರುವುದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+