ಶನಿ ಗ್ರಹದಲ್ಲಿ ಒಂದು ದಿನಕ್ಕೆ 10 ಗಂಟೆ 33 ನಿಮಿಷ 38 ಸೆಕೆಂಡ್, ಒಂದು ವರ್ಷಕ್ಕೆಷ್ಟು?
ವಾಷಿಂಗ್ಟನ್ (ಅಮೆರಿಕ), ಜನವರಿ 20: ಕಸ್ಸಿನಿ ಬಾಹ್ಯಾಕಾಶ ನೌಕೆಯು ಮಹತ್ವದ ಸಂಗತಿಯೊಂದನ್ನು ಬಯಲು ಮಾಡಿದೆ. ಶನಿ ಗ್ರಹದಲ್ಲಿ ಒಂದು ದಿನ ಅಂದರೆ 10 ಗಂಟೆ 33 ನಿಮಿಷ ಹಾಗೂ 38 ಸೆಕೆಂಡ್ ಗಳು ಮಾತ್ರ ಎಂಬ ಅಚ್ಚರಿಯ ಸಂಗತಿ ಬಯಲಾಗಿದೆ. ಸೌರಮಂಡಲ ವ್ಯವಸ್ಥೆ ವಿಜ್ಞಾನದಲ್ಲಿ ಇದು ಕುತೂಹಲವಾಗಿ ಉಳಿದಿತ್ತು.
ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದಲ್ಲಿ ಕಸ್ಸಿನಿ ಬಾಹ್ಯಾಕಾಶ ಯೋಜನೆ ಕೈಗೊಂಡಿದ್ದು, ಅದರಿಂದ ಬಂದ ಹೊಸ ಮಾಹಿತಿಯು ಈ ಅಂಶವನ್ನು ಬಯಲು ಮಾಡಿದೆ. ಶನಿ ಗ್ರಹದಲ್ಲಿ ಒಂದು ವರ್ಷ ಅಂದರೆ, ಭೂಮಿ ಮೇಲಿನ 29 ವರ್ಷಗಳು ಎಂಬುದನ್ನು ಸಹ ಇದೇ ವೇಳೆ ಕಂಡುಹಿಡಿಯಲಾಗಿದೆ.
ಉಂಗುರದಲ್ಲಿ ಶನಿ ಗ್ರಹವು ಅವಿತಿಟ್ಟುಕೊಂಡಿರುವುದರಿಂದ ಈ ಅವಧಿಯನ್ನು ನಿರ್ಧರಿಸುವುದು ಸಾಧ್ಯವಾಗಿರಲಿಲ್ಲ. ಶನಿ ಗ್ರಹದ ಉಂಗುರದೊಳಗೆ ಆಗುವ ಕಂಪನಗಳನ್ನು ವಿಶ್ಲೇಷಣೆ ಮಾಡಿದ ಅಸ್ಟ್ರಾನಮಿ ಹಾಗೂ ಅಸ್ಟ್ರೋಫಿಸಿಕ್ಸ ವಿದ್ಯಾರ್ಥಿ ಕ್ರಿಸ್ಟೋಫರ್ ಮನ್ ಕೋವಿಚ್ ಈ ಬಗ್ಗೆ ತಿಳಿಸಿದ್ದಾರೆ.

ಗ್ರಹದೊಳಗೆ ಆಗುವ ಕಂಪನಗಳನ್ನು ಗಮನಿಸಿ, ಸೆಸ್ಮೊಮೀಟರ್ಸ್ ಅನ್ನು ಭೂ ಕಂಪನದಿಂದ ಆದ ವ್ಯತ್ಯಾಸಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಕಸ್ಸಿನಿ ಬಾಹ್ಯಾಕಾಶ ನೌಕೆಯು ಇಂಧನ ಕಡಿಮೆಯಾದಾಗ ಶನಿಗ್ರಹದ ವಾತಾವರಣದಲ್ಲಿ ಸೆಪ್ಟೆಂಬರ್ 15, 2017ರಲ್ಲಿ ಪ್ರವೇಶ ಮಾಡಿದ್ದು, 13 ವರ್ಷಗಳ ಕಾಲ ಶನಿ ಗ್ರಹದ ಮಾಹಿತಿಯನ್ನು ರವಾನೆ ಮಾಡುತ್ತದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications