• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಸಿವಿನ ನೋವು-1: ವಿಶ್ವಕ್ಕೆ ಅನ್ನ ನೀಡಿದ ಅಮೆರಿಕನ್ನರಿಗಿಲ್ಲ ಆಹಾರ!

|

ವಾಶಿಂಗ್ಟನ್, ಮೇ.14: ಜಗತ್ತಿಗೆ ಆಹಾರ ರಫ್ತು ಮಾಡುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಸಂಪೂರ್ಣ ಚಿತ್ರಣ ಬದಲಾಗಿದೆ. ನೊವೆಲ್ ಕೊರೊನಾ ವೈರಸ್ ಸೋಂಕು ಕೋಟ್ಯಂತರ ಅಮೆರಿಕನ್ನರನ್ನು ಹಸಿವಿನಿಂದ ಕಂಗೆಡುವಂತೆ ಮಾಡಿದೆ.

14,30,348ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಅಮೆರಿಕಾದಲ್ಲಿ ಮಹಾಮಾರಿಗೆ 85,197ಕ್ಕೂ ಅಧಿಕ ಜನ ಪ್ರಾಣ ಬಿಟ್ಟಿದ್ದಾರೆ. ಈವರೆಗೆ 3,10,259ಕ್ಕೂ ಅಧಿಕ ಸೋಂಕಿತರ ಆರೋಗ್ಯದಲ್ಲಿ ಗುಣಮುಖರಾಗಿದ್ದಾರೆ.

ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!

ಅಮೆರಿಕಾ ಕೃಷಿ ಇಲಾಖೆಗೆ ಸಂಬಂಧಿಸಿದ ರಾಷ್ಟ್ರೀಯ ವರದಿ ಆಘಾತಕಾರಿ ಅಂಶವನ್ನು ಹೊರ ಹಾಕಿದೆ. ನೊವೆಲ್ ಕೊರೊನಾ ವೈರಸ್ ಹಾವಳಿ ಮತ್ತು ಲಾಕ್ ಡೌನ್ ಹೊಡೆತದ ನಡುವೆ ತುತ್ತು ಅನ್ನಕ್ಕೂ ಪ್ರಜೆಗಳು ಅಂಗಲಾಚಿ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ. ಜಗತ್ತಿನ ಆಹಾರ ರಫ್ತು ಮಾಡುತ್ತಿದ್ದ ಜನರು ಇಂದು ಆಹಾರ ಸಿಗದೇ ಬ್ರೆಡ್ ತಿಂದು ಬದುಕುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕಾದಲ್ಲಿ ಹಸಿವಿನ ನೋವು ಜನರನ್ನು ಹೇಗೆ ಕಾಡುತ್ತಿದೆ. ಸರ್ಕಾರದ ಸ್ಪಂದನೆ ಹೇಗಿದ. ಕೊರೊನಾ ವಾರಿಯರ್ಸ್ ಕಾರ್ಯವೈಖರಿ ಹಾಗೂ ಅಮೆರಿಕಾದ ಪರಿಸ್ಥಿತಿಯ ಕುರಿತು ವಿಶೇಷ ವರದಿಯ ಸರಣಿಯನ್ನು ಒನ್ ಇಂಡಿಯಾ ಇಡುತ್ತಿದೆ.

ಹೊತ್ತಿನ ತುತ್ತು ಅನ್ನಕ್ಕೂ ಅಮೆರಿಕಾದಲ್ಲಿ ಪರದಾಟ

ಹೊತ್ತಿನ ತುತ್ತು ಅನ್ನಕ್ಕೂ ಅಮೆರಿಕಾದಲ್ಲಿ ಪರದಾಟ

ಅಮೆರಿಕಾದಲ್ಲಿ ಪೈಕಿ ಶೇ.6ರಷ್ಟು ಕುಟುಂಬಗಳಿಗೆ ಅಂದರೆ 180 ಲಕ್ಷ ಕುಟುಂಬಗಳು ಹೊತ್ತಿನ ಊಟಕ್ಕೂ ಪರಿತಪಿಸುತ್ತಿವೆ. ಶೇ.08ರಷ್ಟು ಕುಟುಂಬಗಳು ಅಂದರೆ 3 ಕೋಟಿ ಕುಟುಂಬಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡು ಹಸಿವು ನೀಗಿಸಿಕೊಳ್ಳುತ್ತಿವೆ.

ಅಮೆರಿಕಾದಲ್ಲಿ ಏಳರಲ್ಲಿ ಒಬ್ಬರಿಗೆ ಊಟ ಸಿಗುವುದೇ ಕಷ್ಟ

ಅಮೆರಿಕಾದಲ್ಲಿ ಏಳರಲ್ಲಿ ಒಬ್ಬರಿಗೆ ಊಟ ಸಿಗುವುದೇ ಕಷ್ಟ

ನೊವೆಲ್ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿನಿಂದಲ ಅಮೆರಿಕಾದಲ್ಲಿ ಆಹಾರ ಪೂರೈಕೆ ಕೊರತೆ ಎದ್ದು ಕಾಣುತ್ತಿದೆ. ದೇಶದಲ್ಲಿ 48 ಮಿಲಿಯನ್ ಅಂದರೆ 4 ಕೋಟಿ 80 ಲಕ್ಷ ಜನರು ಹಸಿವಿನಿಂದ ನಿತ್ಯ ನರಳುತ್ತಿದ್ದಾರೆ. ಅಂದರೆ ಏಳು ಮಂದಿ ಅಮೆರಿಕನ್ನರ ಪೈಕಿ ಒಬ್ಬರಿಗೆ ಉಪವಾಸ ನಿಶ್ಚಿತವಾಗಿದೆ. ದೇಹದ ತೂಕ ಇಳಿಸಿಕೊಳ್ಳುವ ಉದ್ದೇಶದಿಂದ ಹೀಗೆ ಅಮೆರಿಕನ್ನರು ಉಪವಾಸ ಮಾಡುತ್ತಿಲ್ಲ. ಬದಲಿಗೆ ಹಸಿವು ನೀಗಿಸಿಕೊಳ್ಳಲು ಆಗದಂತಾ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಶತ್ರುವಿನ ಶತ್ರು ಮಿತ್ರ: ಅಮೆರಿಕಾ ಕಂಪನಿಗಳಿಂದ ಬದಲಾಗುತ್ತಾ ಭಾರತ?

ಅಧ್ಯಕ್ಷೀಯ ಸದಸ್ಯರು ರೌಂಡ್ ಟೇಬಲ್ ಮೀಟಿಂಗ್ ನಲ್ಲಿ ಬ್ಯೂಸಿ!

ಅಧ್ಯಕ್ಷೀಯ ಸದಸ್ಯರು ರೌಂಡ್ ಟೇಬಲ್ ಮೀಟಿಂಗ್ ನಲ್ಲಿ ಬ್ಯೂಸಿ!

ಅಮೆರಿಕಾದಲ್ಲಿ ಪ್ರಜೆಗಳು ತುತ್ತು ಅನ್ನಕ್ಕೆ ಪರಿತಪಿಸುತ್ತಿದ್ದರೆ ಅಧ್ಯಕ್ಷೀಯ ಸದಸ್ಯರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಹಾಗೂ ಲಂಚ್ ರೌಂಡ್ ಟೇಬಲ್ ಮೀಟಿಂಗ್ ಗಳಲ್ಲಿ ಬ್ಯೂಸಿ ಆಗಿದ್ದಾರೆ. ಅವರಿಗೆ ಆಹಾರ ಪೂರೈಸುವ ಬಗ್ಗೆ ಆಲೋಚನೆಯೇ ಇಲ್ಲ. ಏಕೆಂದರೆ ತಮ್ಮ ಸುತ್ತಲೂ ಬಗೆಬಗೆಯ ಆಹಾರವನ್ನು ಇಟ್ಟುಕೊಂಡು ಕುಳಿತವರಿಗೆ ಬಡವರ ಹಸಿವಿನ ನೋವು ಅರ್ಥವಾಗುವುದಿಲ್ಲ ಎಂದು ಪ್ರಜೆಗಳು ದೂಷಿಸುತ್ತಿದ್ದಾರೆ.

ಹಸಿವಿಗೆ ನಿಜವಾಗಿಯೂ ಡೆಫನೇಷನ್ ಏನು?

ಹಸಿವಿಗೆ ನಿಜವಾಗಿಯೂ ಡೆಫನೇಷನ್ ಏನು?

ಜನರು ಸಹಜವಾಗಿ ಹೊಟ್ಟೆ ಹಸಿದಾಗ ತಮಗೆ ಹಸಿವಾಗಿದೆ ಎಂಬ ಬಗ್ಗೆ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ತಿನ್ನುವುದಕ್ಕೆ ಆಹಾರವಿಲ್ಲದ ಸಂದರ್ಭದಲ್ಲಿ ನಿಜವಾಗಿ ಹಸಿವಿನ ನೋವು ಅರ್ಥವಾಗುತ್ತದೆ. ಬೆಳಗ್ಗಿನ ಬ್ರೇಕ್ ಫಾಸ್ಟ್ ಅಥವಾ ಮಧ್ಯಾಹ್ನದ ಊಟ ಮಾಡುವುದನ್ನು ಮರೆತಾಗಿ ಆಗುವುದು ನಿಜವಾದ ಹಸಿವಲ್ಲ. ಎರಡು ಹೊತ್ತು ಊಟ ಮರೆತರೆ ಮೂರನೇ ಹೊತ್ತಿನಲ್ಲಿ ಮತ್ತೆ ಊಟ ಸಿಗುತ್ತದೆ. ಅದು ತಾತ್ಕಾಲಿಕ ಹಸಿವಷ್ಟೇ.

ಹಸಿವಿನಿಂದ ನರಳುತ್ತಿರುವ 4.8 ಕೋಟಿ ಅಮೆರಿಕನ್ನರು

ಹಸಿವಿನಿಂದ ನರಳುತ್ತಿರುವ 4.8 ಕೋಟಿ ಅಮೆರಿಕನ್ನರು

ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಸಂದರ್ಭದಲ್ಲಿ ಅಮೆರಿಕನ್ನರಿಗೆ ಕಾಡುತ್ತಿರುವುದು ತಾತ್ಕಾಲಿಕ ಹಸಿವಲ್ಲ. ಬದಲಿಗೆ 4.8 ಕೋಟಿ ಜನರು ಆಹಾರ ಪೂರೈಕೆ ಆಗದೇ ಇಡೀ ದೇಶಾದ್ಯಂತ ತುತ್ತು ಅನ್ನಕ್ಕಾಗಿ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನ ಶಿಕ್ಷಣದ ಕೊರತೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳ ಅಭಾವ ಜನರನ್ನು ಕಂಗೆಡುವಂತೆ ಮಾಡಿದೆ. ಅದರಲ್ಲೂ ದಕ್ಷಿಣ ಅಮೆರಿಕಾದ ಮಿಸ್ಸಿಸ್ಸಿಪ್ಪಿ, ಅರ್ಕನ್ಸಸ್, ಟೆಕ್ಸಾಸ್, ಅಲಬಮಾ, ನಾರ್ತ್ ಕ್ಯಾರೋಲಿನಾ, ಮತ್ತು ಕೆಂಟುಕಿಯಲ್ಲಿ ಆಹಾರ ಭದ್ರತೆ ಕೊರತೆ ಜನರನ್ನು ಬಾಧಿಸುತ್ತಿದೆ.

English summary
How America Is Struggling For Food Supply To Citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X