ಡೊನಾಲ್ಡ್ ಟ್ರಂಪ್‌ಗೆ ಮನೆ ದಾರಿ ತೋರಿಸಲು ಸಿದ್ಧರಾದ ಸಂಸದರು..!
ಟ್ರಂಪ್ ವಿರುದ್ಧ 2ನೇ ಬಾರಿಗೆ ವಾಗ್ದಂಡನೆ ಅಥವಾ ಇಂಪೀಚ್‌ಮೆಂಟ್ (Impeachment) ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಬಗ್ಗೆ ಅಮೆರಿಕದ ಸಂಸತ್ ಸಭೆ ಅಥವಾ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಖಚಿತ ಮಾಹಿತಿ ನೀಡಿದ್ದಾರೆ.
ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಮತ್ತು ಬೆಂಬಲಿಗರು ದಾಳಿ ನಡೆಸಿದ ನಂತರ ಡೆಮಾಕ್ರಟಿಕ್ ಪಕ್ಷದ ಸಂಸದರು ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಸಲು ಯೋಜನೆ ರೂಪಿಸಿದ್ದರು. ಆ ವಾಗ್ದಂಡನೆ ಪ್ರಕ್ರಿಯೆಗೆ ಇದೀಗ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಆದರೆ ಇದಕ್ಕೂ ಮೊದಲು ಟ್ರಂಪ್ ವಿರುದ್ಧ ಸಂವಿಧಾನದ 25ನೇ ತಿದ್ದುಪಡಿ ಅನುಸಾರ ಕ್ರಮ ಕೈಗೊಂಡು ಮನೆಗೆ ಕಳಿಸಲು ಪ್ಲಾನ್ ಸಿದ್ಧವಾಗಿತ್ತು.
ಆದರೆ ಇದಕ್ಕೆ ಮೈಕ್ ಪೆನ್ಸ್ ಸಂಪೂರ್ಣ ಬೆಂಬಲ ಸಿಗುತ್ತಿಲ್ಲ. ಮೈಕ್ ಪೆನ್ಸ್ ಇಂದು ಕೂಡ ತಮ್ಮ ಇಬ್ಬಗೆಯ ನೀತಿ, ಅಥವಾ ಡಬಲ್ ಗೇಮ್ ಮುಂದುವರಿಸಿದ್ದಾರೆ. ಹೀಗಾಗಿ ದಿಟ್ಟ ನಿಲುವು ಕೈಗೊಂಡಿರುವ ನ್ಯಾನ್ಸಿ ಪೆಲೋಸಿ ಮತ್ತು ತಂಡ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ವಾಗ್ದಂಡನೆಗೆ ಹಲವು ವಾರಗಳು ಅಗತ್ಯ
ಅಮೆರಿಕ ಸಂವಿಧಾನದ ಪ್ರಕಾರ ಸಂಸದರು ಒಗ್ಗಟ್ಟು ಪ್ರದರ್ಶಿಸಿ, ಅಧ್ಯಕ್ಷನನ್ನ ಅಧಿಕಾರದಿಂದ ಒದ್ದೋಡಿಸಲು ಸಾಧ್ಯವಿದೆ. ಇದೇ ಪ್ರಕ್ರಿಯೆಯನ್ನ ವಾಗ್ದಂಡನೆ ಅಥವಾ ಇಂಪೀಚ್‌ಮೆಂಟ್ (Impeachment) ಎನ್ನಲಾಗುತ್ತೆ. ಆದರೆ ವಾಗ್ದಂಡನೆ ಎಂಬುದು ಸುಲಭವಾದ ಪ್ರಕ್ರಿಯೆ ಅಲ್ಲ. ಅದು ಸುದೀರ್ಘವಾಗಿರುತ್ತದೆ ಮತ್ತು ವಾಗ್ದಂಡನೆ ಪ್ರಕ್ರಿಯೆ ಪೂರ್ಣಗೊಳಿಸಲು ಹಲವು ವಾರಗಳೇ ಅಗತ್ಯ. ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡನೆಯಾದರೆ ಉಪಯೋಗವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಜನವರಿ 20ರಂದು ಟ್ರಂಪ್ ಅಧ್ಯಕ್ಷಗಿರಿಗೆ ಕಡೇ ದಿನ. ಆ ನಂತರ ಟ್ರಂಪ್ ಪದವಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಸದ್ಯ ವಾಗ್ದಂಡನೆ ಅಗತ್ಯವಿದೆಯಾ ಎಂಬ ಪ್ರಶ್ನೆ ಕೆಲ ಸಂಸದರದ್ದು. ಅದಕ್ಕೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿದಂತೆ ಹಲವರು ಉತ್ತರ ನೀಡಿದ್ದಾರೆ. ವಾಗ್ದಂಡನೆ ಏಕೆ ಅಗತ್ಯ ಎಂಬುದರ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

‘ಟ್ರಂಪ್ ತೊಲಗದಿದ್ದರೆ ಓಡಿಸಬಹುದು..!’
ಇದು ಅಮೆರಿಕದ ಅಳಿವು, ಉಳಿವಿನ ಪ್ರಶ್ನೆ. ಹೀಗಾಗಿ ಅಮೆರಿಕದ ಸಂಸದರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಗ್ದಂಡನೆ ಅತ್ಯಗತ್ಯ ಎಂದು ಡೆಮಾಕ್ರಟಿಕ್ ಸಂಸದರು ಹೇಳುತ್ತಿದ್ದಾರೆ. ಜನವರಿ 20ರ ನಂತರ ಕೂಡ ಟ್ರಂಪ್ ಅಧಿಕಾರ ಬಿಡದೇ ಇದ್ದರೆ, ವಾಗ್ದಂಡನೆ ಮೂಲಕ ಹೊರಗೆ ಕಳುಹಿಸಬಹುದು. ಈಗ ಪ್ರಕ್ರಿಯೆ ಶುರು ಮಾಡಿದರೆ, ವಾಗ್ದಂಡನೆ ಪ್ರಕ್ರಿಯೆ ಪೂರ್ಣಗೊಳ್ಳಲು ವಾರಗಳಷ್ಟು ಸಮಯ ಬೇಕು. ಹೀಗಾಗಿ ಜನವರಿ 20ರ ನಂತರ ಟ್ರಂಪ್ ಕಿರಿಕ್ ಮಾಡಿದರೆ ವೈಟ್‌ಹೌಸ್ ಖಾಲಿ ಮಾಡಿಸಲು ವಾಗ್ದಂಡನೆಯ ಬಲ ಸಿಗುತ್ತದೆ ಎಂಬುದು ಡೆಮಾಕ್ರಟಿಕ್ ಪಕ್ಷದ ಸಂಸದರು ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಾದ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಬೇಡ ಎಂದು ಪೆಲೋಸಿ ಹೇಳುತ್ತಿದ್ದಾರೆ.

180 ಸಂಸದರ ಬಲ ಸಿಕ್ಕಿದೆ..!
ಅಂದಹಾಗೆ ಡೆಮಾಕ್ರಟಿಕ್ ಸಂಸದ ಟೆಡ್ ಲಿಯು ತಿಳಿಸುವಂತೆ ಅಮೆರಿಕ ಕಾಂಗ್ರೆಸ್‌ನ ಕನಿಷ್ಠ 180 ಸದಸ್ಯರು ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಟ್ರಂಪ್ ವಿರುದ್ಧ ಆರೋಪ ಹೊರಿಸಿ ಈಗಾಗಲೇ ಅಮೆರಿಕ ಕಾಂಗ್ರೆಸ್‌ನ 180 ಸದಸ್ಯರು ವಾಗ್ದಂಡನೆ ಪ್ರಸ್ತಾವಕ್ಕೂ ಸಹಿ ಹಾಕಿದ್ದಾರೆ. ಇದು ಡೆಮಾಕ್ರಟಿಕ್ ಹುರಿಯಾಳುಗಳಿಗೆ ಬಲವನ್ನ ನೀಡಿದೆ. ಟ್ರಂಪ್ ವಿರುದ್ಧ ತೊಡೆತಟ್ಟಿರುವ ಸಂಸದರು, ಅಮೆರಿಕದ ಅತ್ಯಂತ ವಿವಾದಾತ್ಮಕ ಅಧ್ಯಕ್ಷನನ್ನ ಮನೆಗೆ ಕಳುಹಿಸುವ ತಯಾರಿಯಲ್ಲಿದ್ದಾರೆ.

ಮತ್ತೊಂದು ಅಸ್ತ್ರವೂ ಸಿದ್ಧವಿದೆ..!
ಟ್ರಂಪ್ ವಿರುದ್ಧ ಕೇವಲ ವಾಗ್ದಂಡನೆ ಅಸ್ತ್ರ ಮಾತ್ರವಲ್ಲ, ಮತ್ತೊಂದು ಪ್ರಬಲ ವೆಪನ್ ಕೂಡ ಸಿದ್ಧವಿದೆ. ಅದೇ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ. ಆದರೆ ಇದನ್ನ ಜಾರಿಗೆ ತರಲು ಉಪಾಧ್ಯಕ್ಷರ ಬೆಂಬಲ ಬೇಕಾಗಿದೆ. ಈ ಸಂದರ್ಭದಲ್ಲಿ ಮೈಕ್ ಪೆನ್ಸ್ ಡಬಲ್ ಗೇಮ್ ಆಡ್ತಿದ್ದಾರೆ ಎಂದು ಖುದ್ದು ಅಮೆರಿಕ ಸಂಸದರು ಗಂಭೀರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ 25ನೇ ತಿದ್ದುಪಡಿ ಅನ್ವಯ ಆಗದಿದ್ದರೂ, ಟ್ರಂಪ್ ಓಡಿಸಲು ವಾಗ್ದಂಡನೆ ಸಹಕಾರಿಯಾಗಲಿದೆ. ಅಕಸ್ಮಾತ್ ಮೈಕ್ ಪೆನ್ಸ್ ಮನಸ್ಸು ಬದಲಾಯಿಸಿದರೆ ಸಂವಿಧಾನದ 25ನೇ ತಿದ್ದುಪಡಿ ಹೇರಿ, ಟ್ರಂಪ್‌ಗೆ ಮನೆಯ ದಾರಿ ತೋರಿಸಬಹುದು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications