ಮೋದಿಯನ್ನು ಹಿಟ್ಲರ್‌ ಗೆ ಹೋಲಿಸಿದ ಖ್ಯಾತ ಹಾಲಿವುಡ್ ನಟ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಖ್ಯಾತ ಹಾಲಿವುಡ್ ನಟ ಜಾನ್ ಪಾಲ್ ಕ್ಯುಸಾಕ್ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಗೆ ಹೋಲಿಸಿದ್ದಾರೆ.

ಜನವರಿ 5 ರಂದು ಟ್ವೀಟ್ ಮಾಡಿರುವ ನಟ ಜಾನ್ ಪಾಲ್ ಕ್ಯುಸಾಕ್ ಅಡಾಲ್ಫ್ ಹಿಟ್ಲರ್ ಚಡ್ಡಿ ಧರಿಸಿರುವ ಚಿತ್ರ ಹಾಗೂ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್‌ ಧಿರಿಸು ಧರಿಸಿರುವ ಚಿತ್ರಗಳನ್ನು ಒಟ್ಟಿಗೆ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಪಾಲ್ ಕ್ಯುಸಾಕ್ ಅವರ ಪೋಸ್ಟ್‌ ಪರವಾಗಿದ್ದರೆ, ಇನ್ನು ಕೆಲವರು ವಿರೋಧಿಸಿ ಪ್ರತಿಕ್ರಿಯಿಸಿದ್ದಾರೆ.

Hollywood Actor John Cusack Compared Narendra Modi To Hitler

'ಮನುಷ್ಯರನ್ನು ಅವರು ಧರಿಸುವ ಬಟ್ಟೆಗಳ ಆಧಾರದಲ್ಲಿ ಗುರುತಿಸಬಹುದು' ಎಂದು ಇತ್ತೀಚೆಗಷ್ಟೆ ಮೋದಿ ಹೇಳಿದ್ದರು. ಇದು ಭಾರಿ ವಿವಾದ ಕೆರಳಿಸಿತ್ತು, ಅದಕ್ಕೆ ಅನುಗುಣವಾಗಿ ಈಗ ಹಿಟ್ಲರ್ ಮತ್ತು ಮೋದಿ ಅವರುಗಳು ಚಡ್ಡಿ ಧರಿಸಿ ಇಬ್ಬರೂ ಒಂದೇ ಎಂದು ಹೇಳುವ ಯತ್ನವನ್ನು ಕ್ಯುಸಾಕ್ ಮಾಡಿದ್ದಾರೆ.

ನಟ ಕ್ಯುಸಾಕ್ ಟ್ರಂಪ್ ವಿರುದ್ಧವೂ ಆಗಾಗ್ಗೆ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಈ ಮೊದಲೂ ಸಹ ಬುಶ್, ಒಬಾಮಾ ಇದ್ದಾಗಲೂ ಬೇರೆ ದೇಶಗಳ ಮೇಲಿನ ಅಮೆರಿಕ ನಡೆಸಿದ ದಾಳಿಗಳನ್ನು ಅವರು ಖಂಡಿಸುತ್ತಲೇ ಬಂದಿದ್ದಾರೆ.

ಅಮೆರಿಕದ ಈ ಖ್ಯಾತ ನಟ, ನಿರ್ಮಾಪಕ, ಚಿತ್ರಕತೆ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಜಾನ್ ಪಾಲ್ ಕ್ಯುಸಾಕ್ ಅವರ '2012' ಚಿತ್ರ ಬಹು ಜನಪ್ರಿಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+