ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವಾರಗಳಲ್ಲಿ ಜಾಗತಿಕವಾಗಿ ಕೊರೊನಾ ಸೋಂಕು ಹೆಚ್ಚಳ,WHO ಆತಂಕ

|
Google Oneindia Kannada News

ವಾಷಿಂಗ್ಟನ್,ಮಾರ್ಚ್ 2:ಕಳೆದ ಏಳು ವಾರಗಳಲ್ಲಿ ಇದೇ ಮೊದಲ ಬಾರಿಗೆ ಜಾಗತಿಕ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು,ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ.

ಒಂದು ವೇಳೆ ದೇಶಗಳು ಕೇವಲ ಲಸಿಕೆ ಮೇಲೆ ಅವಲಂಬಿಸಿದರೆ ತಪ್ಪು ಮಾಡಿದಂತಾಗುತ್ತದೆ. ಮೂಲಭೂತ ಸಾರ್ವಜನಿಕ ಆರೋಗ್ಯ ಕ್ರಮಗಳು ಸೋಂಕು ನಿರೋಧಕವಾಗಿ ಉಳಿಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥಟೆಡ್ರೊಸ್ ಹೇಳಿದ್ದಾರೆ.

ಭಾರತ,ಮೋದಿಯನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆಭಾರತ,ಮೋದಿಯನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆ

ಈ ಪ್ರಕರಣಗಳ ಏರಿಕೆ ನಿರಾಸೆ ತಂದಿದೆ. ಆದರೆ, ಆಶ್ಚರ್ಯವಲ್ಲ ಎಂದಿರುವ ಟೆಡ್ರೊಸ್, ಸೋಂಕು ಹರಡದಂತೆ ರೋಗ ಹರಡುವಿಕೆ ವಿರುದ್ಧದ ಕ್ರಮಗಳನ್ನು ಸಡಿಲಗೊಳಿಸದಂತೆ ರಾಷ್ಟ್ರಗಳನ್ನು ಅವರನ್ನು ಒತ್ತಾಯಿಸಿದ್ದಾರೆ.

Coronavirus

ಕೋವಿಡ್-19 ಸಾಂಕ್ರಾಮಿಕವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸದಂತೆ ಅವರು ಸಲಹೆ ನೀಡಿದ್ದಾರೆ.

ಮೊದಲಿನ ರೀತಿಯೇ ಕೊರೊನಾ ಸೋಂಕು ಪತ್ತೆಯಾದ ಮೇಲೆ ಸೋಂಕು ಹರಡಿರುವುದು ಎಲ್ಲಿಂದ ಎಂದು ಪತ್ತೆ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು,ಮಾಸ್ಕ್ ಧರಿಸಬೇಕು.

ಕೊರೊನಾ ವೈರಸ್ ವಿಶ್ವವ್ಯಾಪಿಯಾಗುವುದರ ಜತೆಗೆ ಬೇರೆ ಬೇರೆ ರೂಪವನ್ನು ತಾಳಿದೆ, ಇಂತಹ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡುವುದು ಸಮಂಜಸವಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಆರೋಗ್ಯ ಸಂಸ್ಥೆ ಹೇಳಿತ್ತು.

ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಬೇಜಾವಾಬ್ದಾರಿಯಿಂದ ವರ್ತಿಸಬಾರದು, ಈ ರೀತಿ ಮನೋಭಾವ ಇಡೀ ದೇಶದ ಜನರನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

English summary
he number of new coronavirus infections globally rose last week for the first time in seven weeks, WHO Director-General Tedros Adhanom Ghebreyesus said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X