• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ: ಜೂನ್ 9ರಂದು ಜಾರ್ಜ್ ಫ್ಲಾಯ್ಡ್ ಅಂತ್ಯಕ್ರಿಯೆ

|

ನ್ಯೂಯಾರ್ಕ್, ಜೂನ್ 2: ಅಮೆರಿಕದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದ ಆಫ್ರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರ ಅಂತ್ಯಕ್ರಿಯೆ ಜೂನ್ 9ರಂದು ನಡೆಯಲಿದೆ.

   ಆರೋಗ್ಯವನ್ನೇ ಮರೆತ ಅನಾರೋಗ್ಯ ಸಚಿವ..ಇದೇನ್ ಸನ್ಮಾನ ಮಾಡಿಸಿಕೊಳ್ಳೋ ಟೈಮೆನ್ರೀ | Oneindia Kannada

   ಜಾರ್ಜ್ ಸಾವನ್ನಪ್ಪಿದ ಬೆನ್ನಲ್ಲೇ ಅಮೆರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ.ಐದು ಬಾರಿ ಡಿವಿಶನ್ ವರ್ಲ್ಡ್ ಚಾಂಪಿಯನ್ ಆಗಿರುವ ಅಮೆರಿಕಾದ ಪ್ರೊಫೆಶನಲ್ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಅವರ ಪ್ರಚಾರ ಕಂಪನಿ ಮೇವೆದರ್ ಪ್ರೊಡಕ್ಷನ್ಸ್, ಜಾರ್ಜ್ ಅಂತ್ಯಕ್ರಿಯೆ ವೆಚ್ಚ ಭರಿಸಲಿರುವುದಾಗಿ ಟ್ವಿಟರ್ ಮೂಲಕ ಖಾತರಿಪಡಿಸಿದೆ.

   ಜಾರ್ಜ್ ಫ್ಲಾಯ್ಡ್ ಹತ್ಯೆ: ಜನಾಂಗೀಯ ತಾರತಮ್ಯದ ವಿರುದ್ಧ ದನಿಯೆತ್ತಿದ ಆಪಲ್, ಗೂಗಲ್, ಮೈಕ್ರೋಸಾಫ್ಟ್ಜಾರ್ಜ್ ಫ್ಲಾಯ್ಡ್ ಹತ್ಯೆ: ಜನಾಂಗೀಯ ತಾರತಮ್ಯದ ವಿರುದ್ಧ ದನಿಯೆತ್ತಿದ ಆಪಲ್, ಗೂಗಲ್, ಮೈಕ್ರೋಸಾಫ್ಟ್

   ಮಿನ್ನಿಯಾಪೋಲಿಸ್‌ನ ಪೊಲೀಸ್ ಡೆರೆಕ್ ಚೌವಿನ್, ಜಾರ್ಜ್ ಫ್ಲಾಯ್ಡ್ ತಲೆಯನ್ನು ಕಾಲಿನಿಂದ ಒತ್ತಿ ಹಿಡಿದಿದ್ದರಿಂದ ಜಾರ್ಜ್ ಉಸಿರಾಡಲಾಗದೆ ಸಾವನ್ನಪ್ಪಿದ್ದರು. ಜಾರ್ಜ್ ಸಾವು ಅಮೆರಿಕಾದಾದ್ಯಂತ ಪ್ರತಿಭಟನೆಯ ಕಾವೇರಿದೆ. ವರ್ಣಬೇಧ ನೀತಿಯ ವಿರುದ್ಧ ಎಲ್ಲರೂ ಧ್ವನಿಯೆತ್ತಿದ್ದಾರೆ.

   ಜಾರ್ಜ್ ಫ್ಲಾಯ್ಡ್ ಅವರ ಹುಟ್ಟಿದ ಊರು ಹೌಸ್ಟನ್ ಅಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ಜಾರ್ಜ್ ಮೃತಪಟ್ಟ ದಿನವೇ ಅವರ ಕುಟುಂಬದವರನ್ನು ಸಂಪರ್ಕಿಸಿದ್ದೆವು ಎಂದು ಫೋರ್ಟ್ ಬೆಂಡ್ ಮೆಮೋರಿಯಲ್ ಪ್ಲಾನಿಂಗ್ ಸೆಂಟರ್ ಮಾಲೀಕ ಬಾಬಿ ಸ್ವೇರಿಂಗ್‌ಟನ್ ತಿಳಿಸಿದ್ದಾರೆ.

   ಜೂನ್ 8 ರಂದು ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.ಫ್ಲಾಯ್ಡ್ ಮರಣಾ ನಂತರ ಏನಾದರೂ ಸಹಾಯ ಬೇಕೆ ಎಂದು ಸಾವಿರಾರು ಮಂದಿ ಕರೆ ಮಾಡಿ ವಿಚಾರಿಸಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಕೂಡ ವಿಜೃಂಭಣೆಯಿಂದ ಮಾಡಬೇಕು ಎಂದು ಹೇಳಿದ್ದಾರೆ.

   ಹೌಸ್ಟನ್‌ಅಲ್ಲಿ ಸೋಮವಾರ ಪೊಲೀಸರ ದರ್ಶನಕ್ಕೆ ಮೃತದೇಹವನ್ನು ಇಡಲಾಗುತ್ತದೆ. ಜೂನ್ 9 ರಂದು ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   English summary
   The Fort Bend Memorial Planning Center announced over the weekend that it has been tasked with putting together funeral services for Houston-native George Floyd.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X