• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾತ್ರಿಯಿಡೀ ಸುರಿಯಲಿದೆ ಉಲ್ಕೆಗಳ 'ಮಳೆ', ಭಾರತದಲ್ಲಿ ನೋಡುವುದು ಹೇಗೆ?

|

ವಾಷಿಂಗ್ಟನ್, ಡಿಸೆಂಬರ್ 13: ಗುರುವಾರ ಬೆಳಿಗ್ಗೆಯಿಂದಲೂ ಸರಿಯಾಗಿ ಸೂರ್ಯನ ದರ್ಶನವಿಲ್ಲ. ಮೋಡ ಮುಸುಕಿದ ವಾತಾವರಣ ಹೆಚ್ಚಿನ ಕಡೆ ಇದೆ. ಆಗಸವನ್ನು ಮುಚ್ಚಿರುವ ಮೋಡ ಕೃಪೆ ತೋರಿದರೆ, ವಿಶೇಷ ಅದ್ಭುತವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ನಿಮ್ಮದಾಗಬಹುದು.

ಅಮೆರಿಕದಲ್ಲಿ ಇಂದು ರಾತ್ರಿಯಿಂದ ಮುಂಜಾನೆವರೆಗೆ ಉಲ್ಕೆಗಳ 'ಮಳೆ' ಸುರಿಯಲಿದೆ. ಆಗಸವೆಲ್ಲ ಪಟಾಕಿಯ ಚಿತ್ತಾರದಂತೆ ಬೆಳಕು ತುಂಬಿಕೊಳ್ಳಲಿದೆ.

ವಿಜ್ಞಾನ ಲೋಕದಲ್ಲಿ ಮಹತ್ತರ ಸಾಧನೆ: ಮಂಗಳ ಗ್ರಹಕ್ಕೆ ಕಾಲಿಟ್ಟ ನಾಸಾದ ರೋಬೋಟ್

ಜೆಮಿನಿಡ್ ಉಲ್ಕಾಪಾತಕ್ಕೆ ಡಿ. 13ರ ರಾತ್ರಿ ಸಾಕ್ಷಿಯಾಗಲಿದೆ. ಬೆಳಗಿನವರೆಗೂ ಪ್ರತಿ ಗಂಟೆಗೂ 120-160 ಉಲ್ಕೆಗಳು ಭೂಮಿಯತ್ತ ಜಿಗಿಲಿವೆ ಎನ್ನುತ್ತಾರೆ ನಾಸಾ ಉಲ್ಕಾ ಅಧ್ಯಯನದ ಬಿಲ್ ಕುಕ್.

ಒಂದು ವೇಳೆ ಮೋಡ ಅಥವಾ ಇಬ್ಬನಿ ಕವಿದಿದ್ದರೂ ನಿಮಿಷಕ್ಕೆ ಎರಡು ಬಾರಿ ಪ್ರಖರವಾಗಿ ಮಿನುಗುವ ಜೆಮಿನಿಡ್ ಉಲ್ಕೆಗಳನ್ನು ಕಾಣುವ ಅವಕಾಶವಿದೆ.

ಅಮೆರಿಕದ ಕಾಲಮಾನದ ಪ್ರಕಾರ ಗುರುವಾರ ರಾತ್ರಿ 9 ಗಂಟೆಯಿಂದ ಈ ಉಲ್ಕೆಗಳ ಮಳೆ ಆರಂಭವಾಗಲಿದೆ. ಆದರೆ, ಶುಕ್ರವಾರದ ನಸುಕಿನ 2 ಗಂಟೆ ಬಳಿಕವೇ ಇವು ಸ್ಪಷ್ಟವಾಗಿ ಕಾಣಿಸಬಲ್ಲವು. ಏಕೆಂದರೆ ಭೂಮಿಯಲ್ಲಿ ಬೆಳಕಿನ ಪ್ರಮಾಣ ಹೆಚ್ಚಿರುವುದರಿಂದ ಆ ವಾತಾವರಣದಲ್ಲಿ ಮತ್ತು ಚಂದ್ರನ ಬೆಳಕಿನಲ್ಲಿ ಉಲ್ಕೆಗಳು ಗೋಚರಿಸುವುದು ಸುಲಭವಲ್ಲ.

ಭಾರತದಲ್ಲಿ ಶನಿವಾರ ಉಲ್ಕೆಗಳನ್ನು ಕಾಣುವ ಅದೃಷ್ಟ ಲಭಿಸಬಹುದು. ಆದರೆ, ಈ ಅವಧಿಯ ಬೆಳಗಿನ ಜಾವ 4 ರಿಂದ 9 ಗಂಟೆವರೆಗೆ ಮಾತ್ರ ಇರಲಿದೆ.

ಕೆಂಪು ಗ್ರಹಕ್ಕೆ ಗಗನಯಾತ್ರಿಕರ ರವಾನೆಗೆ ನೆರವಾಗಲಿದೆ 'ಇನ್‌ಸೈಟ್'

ಮಧ್ಯರಾತ್ರಿ ಬಳಿಕ ಚಂದ್ರ ನಿರ್ಗಮಿಸುವುದರಿಂದ ಕಗ್ಗತ್ತಲು ಆವರಿಸುತ್ತದೆ. ಹೀಗಾಗಿ ಈ ವರ್ಷ ಜೆಮಿನಿಡ್‌ಗಳನ್ನು ನೋಡಲು ಚಂದಿರ ಅಡ್ಡಿಪಡಿಸುವುದಿಲ್ಲ ಎಂದು ನಾಸಾ ತಿಳಿಸಿದೆ.

ಅಂದಹಾಗೆ ಈ ಉಲ್ಕೆಗಳು ಸ್ಪಷ್ಟವಾಗಿ ಕಾಣಿಸಬೇಕು ಎಂದರೆ ಕಗ್ಗತ್ತಲು ತುಂಬಿದ ಆಕಾಶದತ್ತ ಕಣ್ಣು ನೆಡಬೇಕು. ಮಾಲಿನ್ಯ ಇರುವ ನಗರಗಳಲ್ಲಿ ಇವು ಕಾಣಿಸುವುದು ಕಷ್ಟ. ಉಲ್ಕೆಗಳ ಪಥವನ್ನು ಕಂಡುಕೊಳ್ಳಲು ಕನಿಷ್ಠ ಅರ್ಧ ಗಂಟೆಯಾದರೂ ಆಕಾಶದ ಕತ್ತಲಿಗೆ ಕಣ್ಣನ್ನು ಹೊಂದಿಸಿಕೊಳ್ಳಬೇಕು.

ಭೂಮಿಯ ಚಂದಿರ ಒಂಟಿಯಲ್ಲ; ಆತನಿಗೆ ಇನ್ನೂ ಇಬ್ಬರು ಜತೆಗಾರರಿದ್ದಾರೆ!

ಇನ್ನು ಮೋಡದ ವಾತಾವರಣವಿದ್ದರೆ, ಸುತ್ತಮುತ್ತ ಮರಗಳಿದ್ದರೆ ಉಲ್ಕೆಗಳ ದರ್ಶನ ಸಿಗಲಾರದು. ಈ ಬಾರಿ ಅವಕಾಶ ತಪ್ಪಿದರೂ ಡಿ. 21ರ ಶುಕ್ರವಾರ ರಾತ್ರಿಯಿಂದ ಮರುದಿನ ಬೆಳಿಗಿನ ಜಾವದವರೆಗೂ ಇದ ರೀತಿ ಜೆಮಿನಿಡ್‌ಗಳನ್ನು ನೋಡಬಹುದು.

English summary
Nasa's Meteroid Environment Office informed that people can see the Geminid meteor Showers on Thursday (Dec 13) night through the morning of Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X