ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ಬಳಕೆ ಕುರಿತು ಅಮೆರಿಕ ಎಫ್‌ಡಿಎ ಎಚ್ಚರಿಕೆ
ವಾಷಿಂಗ್ಟನ್, ಏಪ್ರಿಲ್ 25: ಕೊರೊನಾ ಸೋಂಕಿನ ಚಿಕಿತ್ಸೆಗೆ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಉತ್ತಮವಲ್ಲ ಎಂದು ಅಮರಿಕ ಆಹಾರ ಮತ್ತು ಔಷಧ ಇಲಾಖೆ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಸೋಂಕಿಗೆ ಮಲೇರಿಯಾ ನಿರೋಧ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಉತ್ತಮ ಎಂದು ಹೇಳಿದ್ದರು. ಬಳಿಕ ವಿಶ್ವದಾದ್ಯಂತ ಆ ಔಷಧದ ಬೇಡಿಕೆಯೂ ಹೆಚ್ಚಾಗುತ್ತಿದೆ. ಟ್ರಂಪ್ ಹೇಳಿಕೆ ಹಿಂದೆ ವಾಣಿಜ್ಯ ಉದ್ದೇಶವೇನಾದರೂ ಇದೆಯೇ ಎಂದು ಕೂಡ ಚರ್ಚೆ ಮಡಲಾಗಿತ್ತು.
ಈ ಹೈಡ್ರಾಕ್ಸಿಕ್ಲೋರೊಕ್ವಿನ್ ಯಾವುದೇ ಗೇಮ್ ಚೇಂಜರ್ ಅಲ್ಲ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.
1955ರಲ್ಲಿ ಈ ಔಷಧಕ್ಕೆ ಮಾನ್ಯತೆ ದೊರೆತಿತ್ತು. ಅಮರಿಕದ ಆಸ್ಪತ್ರೆಗಳಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು ಆದರೆ ಈ ಔಷಧದಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ನಾನೇನು ವೈದ್ಯ ಅಲ್ಲ ಎಂದ ಟ್ರಂಪ್
ಎಫ್‌ಡಿಎ ಮಾಹಿತಿ ನೀಡಿದ ಬಳಿಕ ಟ್ರಂಪ್ ಮಾತನಾಡಿ, ನಾನೇನು ವೈದ್ಯ ಅಲ್ಲ , ಇದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದರಿಂದ ಸಹಾಯವಾದರೆ ಉತ್ತಮ, ಒಂದೊಮ್ಮೆ ಯಾವುದೇ ಪ್ರಯೋಜನವಿಲ್ಲವೆಂದರೆ ಬಿಟ್ಟುಬಿಡಿ ಅಷ್ಟೇ ಎಂದು ಹೇಳಿದ್ದಾರೆ.

ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ
ಹೈಡ್ರಾಕ್ಸಿಕ್ಲೋರೊಕ್ವಿನ ಅಥವಾ ಕ್ಲೋರೊಕ್ವಿನ್ ಇಂದ ಹೃದಯ ಸಂಬಂಧಿ ಕಾಯಿಲೆಗಳು ಆರಂಭವಾಗುವ ಸಾಧ್ಯತೆಗಳಿವೆ, ಇದು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ.
ಕೊವಿಡ್ 19 ರೋಗಕ್ಕೆ ಯಾವುದೇ ನಿರ್ದಿಷ್ಟ ಔಷಧಗಳಿಲ್ಲ. ಹಾಗಾಗಿ ಮಲೇರಿಯಾ ನಿರೋಧಕ ಔಷಧವನ್ನು ಮೊದಲ ಹಂತದಲ್ಲಿ ನೀಡಲಾಗುತ್ತಿದೆ.
ಹೈಡ್ರಾಕ್ಸಿಕ್ಲೋರೊಕ್ವಿನ್ ಕುರಿತು ಅಧ್ಯಯನ
ಅಮೆರಿಕ ಸೇರಿದಂತೆ ಇತರೆ ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಕುರಿತು ಅಧ್ಯಯನಗಳು ನಡೆಯುತ್ತಿವೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಕಳೆದ ವಾರ ಅಧ್ಯಯನವನ್ನು ಆರಂಭಿಸಿದೆ.

ಕೊರೊನಾಗೆ ನಿರ್ದಿಷ್ಟ ಔಷಧಿಗಳಿಲ್ಲ
ಕೊರೊನಾ ವೈರಸ್‌ಗೆ ನಿರ್ದಿಷ್ಟ ಔಷಧಿಗಳನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಹಾಗೆಯೇ ಕೆಲವು ಕಡೆ ಹೈಡ್ರಾಕ್ಸಿಕ್ಲೋರೊಕ್ವಿನ್ ಇಂದಲೇ ಕೊವಿಡ್ 19 ರೋಗ ಗುಣವಾಗಿರುವ ನಿದರ್ಶನಗಳಿರುವ ಕಾರಣ ಇದನ್ನು ಅಮೆರಿಕದಲ್ಲೂ ಬಳಕೆ ಮಾಡಲಾಗುತ್ತಿದೆ.












Click it and Unblock the Notifications