ಫೈಜರ್ ಕೊರೊನಾ ಲಸಿಕೆಗೆ ಎಫ್‌ಡಿಎಯಿಂದ ಸಂಪೂರ್ಣ ಅನುಮೋದನೆ
ವಾಷಿಂಗ್ಟನ್, ಆಗಸ್ಟ್ 23: ಬಯೋ ಎನ್‌ಟೆಕ್‌ನ ಫೈಜರ್ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಸಂಪೂರ್ಣ ಅನುಮೋದನೆ ನೀಡಿದೆ.
ಎಫ್‌ಡಿಎಯಿಂದ ಸಂಪೂರ್ಣ ಅನುಮೋದನೆ ಪಡೆದ ಮೊದಲ ಲಸಿಕೆ ಎನ್ನುವ ಹೆಗ್ಗಳಿಕೆಗೆ ಫೈಜರ್ ಪಾತ್ರವಾಗಿದೆ.
ಈ ಲಸಿಕೆ 16 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ತಡೆಗಟ್ಟುವ ಉದ್ದೇಶದಿಂದ ನೀಡಲಾಗುತ್ತಿದ್ದರೂ ಕೂಡ 12 ರಿಂದ 15ವರ್ಷದೊಳಗಿನ ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ನೀಡಲಾಗುತ್ತದೆ.
ಫೈಜರ್ ಮತ್ತು ಬಯೊಎನ್‌ಟೆಕ್ ಕಂಪನಿಗಳು ಅಭಿವೃದ್ಧಿಪಡಿಸಿರುವ ಕೊರೊನಾ ನಿರೋಧಕ ಲಸಿಕೆಯನ್ನು 12 ರಿಂದ 15 ವರ್ಷದ ಮಕ್ಕಳಿಗೆ ನೀಡಲು ಬ್ರಿಟನ್ ಸರಕಾರ ಸಮ್ಮತಿ ನೀಡಿದೆ. ''ಅಮೆರಿಕ, ಐರೋಪ್ಯ ಒಕ್ಕೂಟದಲ್ಲಿ ಬಹಳಷ್ಟು ಪರಿಶೀಲನೆ, ಅಧ್ಯಯನಗಳ ಮೂಲಕ ಮಕ್ಕಳಿಗೆ ಈ ಲಸಿಕೆ ಸುರಕ್ಷಿತ ಎಂಬುದು ಖಾತ್ರಿಯಾಗಿದೆ," ಎಂದು ಬ್ರಿಟನ್ ಸರಕಾರ ಹೇಳಿದೆ.

"ಎರಡು ಡೋಸ್‌ಗಳ ಲಸಿಕೆ ಸುರಕ್ಷತೆ, ಪರಿಣಾಮಕಾರಿ ಗುಣಮಟ್ಟದ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿವೆ. ಯಾವ ದಿನಾಂಕದಿಂದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಬೇಕು ಎನ್ನುವುದನ್ನು ತಜ್ಞರ ಟಾಸ್ಕ್‌ಫೋರ್ಸ್ ನಿರ್ಧರಿಸಲಿದೆ,'' ಎಂದು ಬ್ರಿಟನ್‌ನ ಔಷಧ ನಿಯಂತ್ರಣ ಪ್ರಾಧಿಕಾರ ಎಂಎಚ್‌ಆರ್‌ಎ ಮುಖ್ಯಸ್ಥ ಜೂನ್ ರೈನಿ ಹೇಳಿದ್ದಾರೆ.
ಐರೋಪ್ಯ ಒಕ್ಕೂಟದ ವೈದ್ಯಕೀಯ ಏಜೆನ್ಸಿ ಮತ್ತು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾಲಯ ಕಳೆದ ತಿಂಗಳು, ಫೈಜರ್ ಲಸಿಕೆಯು ಮಕ್ಕಳಿಗೆ ನೀಡಲು ಸುರಕ್ಷಿತವಾಗಿವೆ ಎಂದಿದ್ದವು. ಅಮೆರಿಕದಲ್ಲಿ ಪ್ರೌಢ ಮಕ್ಕಳ ಲಸಿಕಾ ಅಭಿಯಾನವನ್ನು ಈಗಾಗಲೇ ಶುರು ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಪೈಕಿ ಸಾಮೂಹಿಕ ಲಸಿಕಾ ಅಭಿಯಾನವನ್ನು ಆರಂಭಿಸಿದ ಮೊದಲ ದೇಶ ಬ್ರಿಟನ್ ಆಗಿದೆ.
ಅಮೆರಿಕ ಮೇ 10 ರಂದು 12 ವರ್ಷ ಮೇಲ್ಪಟ್ಟವರಿಗೂ ಫೈಜರ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಇದಕ್ಕೂ ಮೊದಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ 16 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಫೈಜರ್ ಲಸಿಕೆ ತುರ್ತು ಬಳಕೆ ಮಾಡಲು ಅನುಮತಿ ನೀಡಿತ್ತು.
ಅಮೆರಿಕದ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಫೈಜರ್ ಮೂರನೇ ಡೋಸ್ ಲಸಿಕೆಗೆ ಮುಂದಾಗಿದ್ದು, ಈ ಸಂಬಂಧ ಅಮೆರಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಅಮೆರಿಕದ ಫೈಜರ್ ಸಂಸ್ಥೆ ಹಾಗೂ ಜರ್ಮನಿಯ ಬಯೋಟೆಕ್ ಸಂಸ್ಥೆಗಳು ಕೋವಿಡ್-19 ಲಸಿಕೆಯ ಮೂರನೇ ಡೋಸ್ ನೀಡಿಕೆ ಆರಂಭಿಸುವ ಕುರಿತು ಅಮೆರಿಕ ಔಷಧ ನಿಯಂತ್ರಕ ಸಂಸ್ಥೆಯ ಅನುಮತಿಯನ್ನು ಪಡೆಯುವುದಾಗಿ ಘೋಷಿಸಿವೆ.
ಕೋವಿಡ್-19 ಲಸಿಕೆಯನ್ನು 'ಕೊಮಿರ್ನಾಟಿ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುವ ಕಂಪನಿಗಳು, ಡೆಲ್ಟಾ ರೂಪಾಂತರವನ್ನು ಗುರಿಯಾಗಿಸುವ ಉದ್ದೇಶದಿಂದ ಬೂಸ್ಟರ್ ಶಾಟ್ ಅನ್ನು ಅಭಿವೃದ್ಧಿಪಡಿಸುತ್ತಿವೆ ಎನ್ನಲಾಗಿದೆ.
ಎಮ್ಆರ್ಎನ್ಎ ಲಸಿಕೆಯ ಮೂರನೇ ಡೋಸ್ ಡೆಲ್ಟಾ ಸೇರಿದಂತೆ ಪ್ರಸ್ತುತ ತಿಳಿದಿರುವ ಎಲ್ಲಾ ರೂಪಾಂತರಗಳ ವಿರುದ್ಧ ಹೆಚ್ಚಿನ ಮಟ್ಟದ ರಕ್ಷಣಾತ್ಮಕ ಪರಿಣಾಮಕಾರಿತ್ವವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಗಳು ತಿಳಿಸಿವೆ.
ಆದರೆ ಲಸಿಕೆ ತಯಾರಿಕಾ ಸಂಸ್ಥೆಗಳ ನಿಲುವಿಗೆ ಅಮೆರಿಕ ತಣ್ಣೀರೆರಚಿದ್ದು, ಪ್ರಸ್ತುತ ಅಮೆರಿಕನ್ನರಿಗೆ ಬೂಸ್ಟರ್ ಡೋಸ್ ಲಸಿಕೆಯ ಅಗತ್ಯವಿಲ್ಲ. 3ನೇ ಡೋಸ್ ಯಾವಾಗ ಬೇಕಾಗಬಹುದು ಎಂಬುದನ್ನು ನಿರ್ಧರಿಸುವುದು ಕಂಪೆನಿಗಳು ಅಲ್ಲ ಎಂದು ಹೇಳಿವೆ.
ಸಂಪೂರ್ಣವಾಗಿ ಲಸಿಕೆ ಪಡೆದ ಅಮೆರಿಕನ್ನರಿಗೆ ಇನ್ನೂ ಬೂಸ್ಟರ್ ಶಾಟ್‌ಗಳ ಅಗತ್ಯವಿಲ್ಲ ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಅಂಡ್ ಕಂಟ್ರೋಲ್ (ಸಿಡಿಸಿ) ಜಂಟಿ ಹೇಳಿಕೆ ನೀಡಿದ್ದು, ಫೈಜರ್ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ ನಂತರ ಈ ಜಂಟಿ ಹೇಳಿಕೆ ಯಾಗಿದೆ. ಅಮೆರಿಕ ಸರ್ಕಾರದ ಅಧಿಕಾರಿಗಳು ಡೆಲ್ಟಾ ಅಥವಾ ಬಿ .1.617.2 ರೂಪಾಂತರದಿಂದಲೂ ಸಹ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರಿಗೆ ಸೋಂಕಿನ ಅಪಾಯ ಕಡಿಮೆ ಇದೆ. ಆದರೆ ಈ ಡೆಲ್ಟಾ ರೂಪಾಂತರ ಕೋವಿಡ್ ವೈರಸ್‌ನ ಹಿಂದಿನ ವಂಶಾವಳಿಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ,
ಜಂಟಿ ಹೇಳಿಕೆಯಲ್ಲಿ, ಫೈಜರ್ ಮತ್ತು ಅದರ ಪಾಲುದಾರ ಬಯೋಟೆಕ್ ಸಂಸ್ಥೆಗಳು ಹೇಳಿರುವಂತೆ ತಮ್ಮ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಮೂಲ ಕೊರೊನಾವೈರಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಕೊಂಡ ಬೀಟಾ ರೂಪಾಂತರಕ್ಕಿಂತ ಪ್ರತಿಕಾಯದ ಮಟ್ಟ ಐದರಿಂದ ಹತ್ತು ಪಟ್ಟು ಹೆಚ್ಚು ತೋರಿಸಿದ ಪುರಾವೆಗಳಿವೆ ಎಂದು ಹೇಳಿಕೊಂಡಿವೆ.
'"ಪ್ರಸ್ತುತ ಬಿಎನ್‌ಟಿ 162 ಬಿ 2 ಲಸಿಕೆಯ ಮೂರನೇ ಡೋಸ್‌ನ ಬೂಸ್ಟರ್ ಪ್ರಯೋಗದಲ್ಲಿ ಫೈಜರ್ ಮತ್ತು ಬಯೋಟೆಕ್ ಪ್ರೋತ್ಸಾಹದಾಯಕ ದತ್ತಾಂಶವನ್ನು ಕಂಡಿದೆ. ಅಧ್ಯಯನದ ಆರಂಭಿಕ ಮಾಹಿತಿಯು ಎರಡನೇ ಡೋಸ್ ನಂತರ 6 ತಿಂಗಳ ನಂತರ ನೀಡಲಾದ ಬೂಸ್ಟರ್ ಡೋಸ್ ಸ್ಥಿರವಾದ ಸಹಿಷ್ಣುತೆಯನ್ನು ಹೊಂದಿದೆ ಮತ್ತು ಹೆಚ್ಚಿನ ತಟಸ್ಥಗೊಳಿಸುವಿಕೆ ಶೀರ್ಷಿಕೆಗಳನ್ನು ಹೊರಹೊಮ್ಮಿಸುತ್ತದೆ. ಕಾಡು ಪ್ರಕಾರ ಮತ್ತು ಬೀಟಾ ರೂಪಾಂತರದ ವಿರುದ್ಧ, ಇದು ಎರಡು ಪ್ರಾಥಮಿಕ ಪ್ರಮಾಣಗಳಿಗಿಂತ 5 ರಿಂದ 10 ಪಟ್ಟು ಹೆಚ್ಚಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.












Click it and Unblock the Notifications