ಕೆಲಸದಿಂದ ತೆಗೆಯಲು ಕರೆದಿದ್ದ ಬಾಸ್‌ಗೆ 'ಎಐ' ಐಡಿಯಾ ಕೊಟ್ಟ ಉದ್ಯೋಗಿ: ಫೈರಿಂಗ್ ಬದಲು ಸಿಕ್ತು ಪ್ರಮೋಷನ್, ನೆಟ್ಟಿಗರು ಏನಂದ್ರು?

ಇತ್ತೀಚಿನ ದಿನಗಳಲ್ಲಿ ಟೆಕ್ ಉದ್ಯೋಗಯು ತೀವ್ರ ಅನಿಶ್ಚಿತತೆಯಿಂದ ಕೂಡಿದೆ. ಒಂದು ಕಾಲದಲ್ಲಿ ಸಂಬಳ ಹೆಚ್ಚಳ ಮತ್ತು ಪ್ರಮೋಷನ್ ಸುದ್ದಿಗಳಿಗಾಗಿ ಕಾಯುತ್ತಿದ್ದ ಮೌಲ್ಯಮಾಪನ ಸಭೆಗಳು ಇದೀಗ ಉದ್ಯೋಗ ಕಡಿತ, ಪ್ರಾಜೆಕ್ಟ್‌ಗಳ ಕೊರತೆ ಮತ್ತು ವೆಚ್ಚ ಕಡಿತದ ಚರ್ಚೆಯ ವೇದಿಕೆಗಳಾಗಿ ಬದಲಾಗುತ್ತಿವೆ. ಇನ್ನೊಂದೆಡೆ, ಕಂಪನಿಗಳು ಎಐ ಸಂಬಂಧಿತ ಕೆಲಸಗಳನ್ನು ತಮ್ಮ ವ್ಯವಹಾರ ಯೋಜನೆಗಳಿಗೆ ವೇಗವಾಗಿ ಅಳವಡಿಸಿಕೊಳ್ಳುತ್ತಿವೆ. ಇಂತಹ ಬದಲಾವಣೆಗೆ ಕನ್ನಡಿ ಹಿಡಿಯುವ ಘಟನೆಯೊಂದನ್ನು ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಅಪ್ರೈಸಲ್ ಮೀಟಿಂಗ್ ಅನಿರೀಕ್ಷಿತವಾಗಿ ಫೈರಿಂಗ್ ಮೀಟಿಂಗ್‌ ಬದಲಾಗಿ, ತದನಂತರ ಎಐ ಐಡಿಯಾಗಳಿಂದಾಗಿ ಮತ್ತೆ ಪ್ರಮೋಷನ್ ಆಫರ್ ಆಗಿ ಬದಲಾದ ರೋಚಕ ಕಥೆಯನ್ನು ಅವರು ವಿವರಿಸಿದ್ದಾರೆ.

Employee Fired

ರೆಡ್ಡಿಟ್ ಪೋಸ್ಟ್ ಪ್ರಕಾರ, ಈ ಉದ್ಯೋಗಿಯ ಮೀಟಿಂಗ್ ಅವರು ನಿರೀಕ್ಷಿಸಿದಂತೆ ನಡೆಯಲಿಲ್ಲ. "ಕಂಪನಿಯಲ್ಲಿ ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್‌ಗಳಿಲ್ಲ. ಇದು ನಿಮ್ಮ ಸಾಮರ್ಥ್ಯವನ್ನು ವ್ಯರ್ಥ ಮಾಡಿದಂತೆ, ಹೀಗಾಗಿ ಹೊರಗಡೆ ಬೇರೆ ಉದ್ಯೋಗ ಹುಡುಕುವುದು ಒಳಿತು" ಎಂದು ಅವರ ಮ್ಯಾನೇಜರ್ ನೇರವಾಗಿ ಹೇಳಿದ್ದರು. ಅಲ್ಲದೆ, ಎರಡು ತಿಂಗಳ ನೋಟಿಸ್ ಅವಧಿಯಲ್ಲಿ ಕೆಲಸ ಮಾಡಬಹುದು ಮತ್ತು ಆ ಸಮಯದಲ್ಲಿ ಬೇರೆ ಕೆಲಸ ಸಿಕ್ರೆ ಹೋಗಬಹುದು ಎಂದು ತಿಳಿಸಿದ್ದರು. ಆ ಕ್ಷಣದಲ್ಲಿ ತನ್ನನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂಬುದು ಉದ್ಯೋಗಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು.

'ಎಐ' ಐಡಿಯಾದಿಂದ ಬದಲಾದ ಇಡೀ ಚಿತ್ರಣ

ಆದರೆ, ಉದ್ಯೋಗಿಯು ಎಐ ಅಳವಡಿಕೆ ಮತ್ತು ವ್ಯವಹಾರದ ಬೆಳವಣಿಗೆಯ ಕುರಿತು ತನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದಾಗ ಇಡೀ ಸಭೆಯ ದಿಕ್ಕೇ ಬದಲಾಯಿತು. ಕಂಪನಿಯ ವೆಬ್‌ಸೈಟ್‌ಗೆ ಎಐ ಪರಿಕರಗಳನ್ನು ಅಳವಡಿಸುವ ಯೋಜನೆಗಳು ಮತ್ತು ಎಐ ಬಳಸಿ ಕಾರ್ಯಾಚರಣೆಗಳನ್ನು ವಿಸ್ತರಿಸುವ ಇತರ ಸಾಧ್ಯತೆಗಳನ್ನು ಅವರು ಮ್ಯಾನೇಜರ್ ಮುಂದಿಟ್ಟರು. "ನಮ್ಮ ವ್ಯವಹಾರವನ್ನು ಎಐ ಬಳಸಿ ಹೇಗೆ ಅಭಿವೃದ್ಧಿಪಡಿಸಬಹುದು ಮತ್ತು ವೆಬ್‌ಸೈಟ್‌ಗೆ ಎಐ ಹೇಗೆ ಸಂಯೋಜಿಸಬಹುದು ಎಂಬ ಬಗ್ಗೆ ನನ್ನ ಬಳಿ ಐಡಿಯಾಗಳಿವೆ ಎಂದು ನಾನು ಅವರಿಗೆ ವಿವರಿಸಿದೆ" ಎಂದು ಉದ್ಯೋಗಿ ಬರೆದುಕೊಂಡಿದ್ದಾರೆ.

ಈ ಐಡಿಯಾಗಳನ್ನು ಕೇಳಿದ ಮ್ಯಾನೇಜರ್ ಅಚ್ಚರಿಗೊಂಡು, ಸ್ವಲ್ಪ ಹೊತ್ತು ಕಾಯುವಂತೆ ಹೇಳಿ ಮತ್ತೆ ಕರೆದಿದ್ದಾರೆ. "ಮುಂದಿನ ಎರಡು ತಿಂಗಳುಗಳಲ್ಲಿ ನೀನು ಈ ಐಡಿಯಾಗಳನ್ನು ಹೇಗೆ ಕಾರ್ಯಗತಗೊಳಿಸುತ್ತೀಯ ಎಂಬುದನ್ನು ನಾವು ಗಮನಿಸುತ್ತೇವೆ. ನಿನ್ನ ಯೋಜನೆಗಳು ಯಶಸ್ವಿಯಾದರೆ, ನಿನಗೆ ಬಡ್ತಿ ಮತ್ತು ವೇತನ ಹೆಚ್ಚಿಗೆ ನೀಡುತ್ತೇವೆ" ಎಂದು ಮ್ಯಾನೇಜರ್ ಭರವಸೆ ನೀಡಿದ್ದಾಗಿ ಉದ್ಯೋಗಿ ಹೇಳಿಕೊಂಡಿದ್ದಾರೆ. ಕಠಿಣ ಮಾರುಕಟ್ಟೆ ಪರಿಸ್ಥಿತಿಯಿಂದಾಗಿ ತಾನು ಕಳೆದೆರಡು ತಿಂಗಳುಗಳಿಂದ ಬೇರೆ ಉದ್ಯೋಗ ಹುಡುಕುತ್ತಿದ್ದರೂ ಯಾವುದೇ ಆಫರ್ ಬಂದಿರಲಿಲ್ಲ, ಹೀಗಾಗಿ ಕೆಲಸ ಉಳಿಸಿಕೊಳ್ಳಲು ಈ ಎಐ ಐಡಿಯಾಗಳನ್ನು ಗಂಭೀರವಾಗಿ ಮಂಡಿಸಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

ಎಚ್ಚರಿಕೆಯಿಂದ ಇರುವಂತೆ ನೆಟ್ಟಿಗರ ಸಲಹೆ

ಈ ಪೋಸ್ಟ್ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದ್ದು, ಕಂಪನಿಯನ್ನು ಸುಲಭವಾಗಿ ನಂಬದಂತೆ ಅನೇಕ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ. "ನಿಮ್ಮ ಎಐ ಐಡಿಯಾಗಳನ್ನು ಜಾರಿಗೊಳಿಸಿದ ನಂತರ ಅವರು ನಿಮ್ಮನ್ನು ಹೇಗೂ ಕೆಲಸದಿಂದ ತೆಗೆಯುತ್ತಾರೆ, ಆದಷ್ಟು ಬೇಗ ಬೇರೆ ಕೆಲಸ ಹುಡುಕಿಕೊಳ್ಳಿ" ಎಂದು ಹಲವರು ಸಲಹೆ ನೀಡಿದ್ದಾರೆ. "ನಿಮ್ಮ ಟರ್ಮಿನೇಶನ್ ಹಿಂಪಡೆದ ಬಗ್ಗೆ ಮತ್ತು ನೀವು ನೋಟಿಸ್ ಅವಧಿಯಲ್ಲಿ ಇಲ್ಲ ಎಂಬುದರ ಬಗ್ಗೆ ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳಿ" ಎಂದು ಇನ್ನೊಬ್ಬ ಬಳಕೆದಾರರು ಸೂಚಿಸಿದ್ದಾರೆ. ಮತ್ತೊಬ್ಬರು, "ಈ ಉದ್ಯೋಗ ಮಾರುಕಟ್ಟೆ ಎಷ್ಟೊಂದು ವಿಚಿತ್ರವಾಗಿದೆಯೆಂದರೆ, ಕಂಪನಿಗಳು ಈಗ ಅಪ್ರೈಸಲ್ ಮೀಟಿಂಗ್‌ಗಳಲ್ಲಿ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋ ನಡೆಸುತ್ತಿವೆ" ಎಂದು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+