Breaking news: ಟೆಸ್ಲಾ ಷೇರು 4 ಬಿಲಿಯನ್ USD ಮೌಲ್ಯಕ್ಕೆ ಮಾರಾಟ ಮಾಡಿದ ಮಸ್ಕ್

ನ್ಯೂಯಾರ್ಕ್, ಏಪ್ರಿಲ್ 29: ಜನಪ್ರಿಯ ಅಂತಾರಾಷ್ಟ್ರೀಯ ಸಂಸ್ಥೆ ಟೆಸ್ಲಾದ ಷೇರುಗಳ ಮಾರಾಟವಾಗಿದೆ. ಟೆಸ್ಲಾ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಅವರು ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಗೆ ಸೇರಿದ 4.4 ಮಿಲಿಯನ್ ಷೇರುಗಳನ್ನು ಸುಮಾರು $3.99 ಬಿಲಿಯನ್ ಮೌಲ್ಯದ ಮಾರಾಟ ಮಾಡಿದ್ದಾರೆ.

ಈ ಕುರಿತಂತೆ ಯುಎಸ್ಎ ಷೇರುಪೇಟೆಗೆ ಗುರುವಾರದಂದು ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ನಂತರ ಈ ಬಗ್ಗೆ ಟ್ವೀಟ್ ವೊಂದಕ್ಕೆ ಮಸ್ಕ್ ಪ್ರತಿಕ್ರಿಯಿಸಿ, "ಇದಾದ ನಂತರ ಯಾವುದೇ TSLA ಮಾರಾಟವನ್ನು ಯೋಜಿಸಲಾಗಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಖರೀದಿಸಿದ ಬಳಿಕ ಮಸ್ಕ್ ಮುಂದಿನ ನಡೆ ಬಗ್ಗೆ ಭಾರಿ ಕುತೂಹಲ ಮೂಡಿಸಿತ್ತು. ಟ್ವಿಟ್ಟರ್ ಮಾರಾಟ ಅಂತಿಮಗೊಳ್ಳುತ್ತಿದ್ದಂತೆಯೇ ಅಮೆರಿಕದ ಷೇರುಪೇಟೆಯಲ್ಲಿ ಟೆಸ್ಲಾದ ಷೇರುಮೌಲ್ಯ ಶೇ. 12.2ರಷ್ಟು ಕುಸಿದಿದೆ. ಅಂದರೆ, ಕಂಪನಿ 126 ಬಿಲಿಯನ್ ಡಾಲರ್, ಅಂದರೆ ಹತ್ತಿರಹತ್ತಿರ 10 ಲಕ್ಷಕೋಟಿ ರೂಪಾಯಿ ಹಣ ಕಳೆದುಕೊಂಡಿತ್ತು.

Elon Musk Sells $4 Billion Tesla Shares, Says No More Sales Planned

ಈ ಸಮಯಕ್ಕೆ(8 ಗಂಟೆ IST) ನ್ಯೂಯಾರ್ಕ್ ಷೇರುಪೇಟೆಯಲ್ಲಿ ಟೆಸ್ಲಾ ಷೇರುಗಳು 877.51ರು ನಂತೆ ವ್ಯವಹರಿಸುತ್ತಿದ್ದು,ಶೇ 0.45 ರಷ್ಟು ಆರಂಭಿಕ ಕುಸಿತ ಕಂಡಿದೆ.

ಟ್ವಿಟ್ಟರ್ ಅನ್ನು ಮಸ್ಕ್ ವೈಯಕ್ತಿಕವಾಗಿಯೇ ಖರೀದಿ ಮಾಡಿದ್ದಾರೆ. ಅದಕ್ಕಾಗಿ 44 ಬಿಲಿಯನ್ ಡಾಲರ್, ಅಂದರೆ ಸರಿಸುಮಾರು 3.36 ಲಕ್ಷಕೋಟಿ ರೂ ಹಣಕ್ಕೆ ಈ ವ್ಯವಹಾರ ನಡೆದಿತ್ತು. ಆದರೆ, ಸಾಲ ಮಾಡಿ ಟ್ವಿಟ್ಟರ್ ಖರೀದಿ ಮಾಡಿರುವ ಮಸ್ಕ್ ಬಾಕಿ ಮೊತ್ತವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂಬುದರ ಬಗ್ಗೆ ಟೆಸ್ಲಾ ಕಂಪನಿ ಹೂಡಿಕೆದಾರರು ಗಮನಿಸುತ್ತಿದ್ದರು.

Elon Musk Sells $4 Billion Tesla Shares, Says No More Sales Planned

ಟ್ವಿಟ್ಟರ್ ಖರೀದಿಗೆ ಅವರು ಮಾಡಲಿರುವ 21 ಬಿಲಿಯನ್ ಡಾಲರ್ ಹಣವನ್ನು ಹೇಗೆ ವ್ಯವಸ್ಥೆ ಮಾಡುತ್ತಾರೆ ಎಂಬುದರ ಬಗ್ಗೆ ಹೂಡಿಕೆದಾರರ ಆತಂಕ ಸಹಜವಾಗಿತ್ತು. ಇದರ ಬೆನ್ನಲ್ಲೇ ಟೆಸ್ಲಾ ಸಂಸ್ಥೆ ಷೇರುಗಳ ಮಾರಾಟ ಮಾಡಿದ್ದಾರೆ.

ಷೇರುಪೇಟೆಯಲ್ಲಿ ಟೆಸ್ಲಾ ಷೇರುಗಳು 126 ಬಿಲಿಯನ್ ಡಾಲರ್‌ನಷ್ಟು ಮೌಲ್ಯ ಕುಸಿತ ಕಂಡಿವೆ. ಇದರಲ್ಲಿ ಎಲಾನ್ ಮಸ್ಕ್ ಅವರಿಗೆ ಸೇರಿದ ಷೇರುಗಳನ್ನ ಗಣಿಸಿದರೆ ಅವರಿಗೆ 21 ಬಿಲಿಯನ್ ಡಾಲರ್ ನಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+