ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ರಾಷ್ಟ್ರಪತಿ,ಪಿಎಂ ಟ್ವಿಟ್ಟರ್ ಖಾತೆ ಅನ್ ಫಾಲೋ ಮಾಡಿದ ವೈಟ್ ಹೌಸ್

|
Google Oneindia Kannada News

ವಾಷಿಂಗ್ಟನ್ , ಏಪ್ರಿಲ್ 30:ಅಮೆರಿಕದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ಭಾರತದಲ್ಲಿ ತಯಾರಿಸಲಾಗುತ್ತಿರುವ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಾಗಿ ಭಾರತದ ಜೊತೆ ಅಮೆರಿಕ ಮುನಿಸಿಕೊಂಡಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಯಾಕೆಂದರೆ ಅಮೆರಿಕ ನಡೆ ಹಾಗೆಯೇ ಇದೆ. ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಕ್ಕೆ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಬಳಕೆ ಮಾಡುವ ಹೈಡ್ರಾಕ್ಸಿಕ್ಲೋರೋಕಿನ್ ಮಾತ್ರೆಗಳನ್ನು ರವಾನೆ ಮಾಡುವಂತೆ ಮನವಿ ಮಾಡಿದ್ದ ಅಮೆರಿಕ ಇದೀಗ ಅದೇ ವಿಚಾರವಾಗಿ ಭಾರತದೊಂದಿಗೆ ಮುನಿಸಿಕೊಂಡಿದೆ ಎಂದು ಹೇಳಲಾಗಿದೆ.

Narendra Modi, Donald Trump

ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷರ ಕಚೇರಿ ವೈಟ್ ಹೌಸ್ ಟ್ವೀಟ್ ಖಾತೆ ಭಾರತದ ಪ್ರಧಾನಿಗಳ ಕಚೇರಿ, ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿದೆ.

ಇದೀಗ ಈ ಸಂಖ್ಯೆ 13ಕ್ಕೆ ಇಳಿಕೆಯಾಗಿದೆ. ಈ ಎಲ್ಲ 13 ಖಾತೆಗಳೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಸರ್ಕಾರಕ್ಕೆ ಸೇರಿದ ಖಾತೆಗಳಾಗಿವೆ ಎನ್ನಲಾಗಿದೆ.
ಮೂಲಗಳ ಪ್ರಕಾರ ವೈಟ್ ಹೌಸ್ ಅಧಿಕೃತ ಖಾತೆಯು ಪ್ರಧಾನಿ ನರೇಂದ್ರ ಮೋದಿ, ಪಿಎಂಒ ಆಫ್ ಇಂಡಿಯಾ, ಪ್ರೆಸಿಡೆಂಟ್ ರಾಮನಾಥ್ ಕೋವಿಂದ್ ಕಚೇರಿ ಖಾತೆ.

ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!

ಭಾರತೀಯ ರಾಯಭಾರ ಕಚೇರಿ ಖಾತೆ ಸೇರಿದಂತೆ 13ಕ್ಕೂ ಹೆಚ್ಚು ಭಾರತದ ಅಧಿಕೃತ ಖಾತೆಗಳನ್ನು ಅನ್ ಫಾಲೋ ಮಾಡಿದೆ. ಈ ಹಿಂದೆ ಭಾರತೀಯ ಸರ್ಕಾರದ ಅಧಿಕೃತ ಖಾತೆಗಳೂ ಸೇರಿದಂತೆ ಒಟ್ಟು 19 ಖಾತೆಗಳನ್ನು ವೈಟ್ ಹೌಸ್ ಖಾತೆ ಫಾಲೋ ಮಾಡುತ್ತಿತ್ತು.

English summary
The official Twitter handle of the President of the United States of America, The White House, and the POTUS himself, Donald Trump, have now unfollowed Prime Minister Narendra Modi on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X