ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು ಸತ್ಯ: ಡಚ್ ನ್ಯಾಯವಾದಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 17: ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು ಸತ್ಯ ಎಂದು ಡಚ್ ನ್ಯಾಯವಾದಿಗಳು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು, ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದ್ದಾರೆ.

ಬೈಡನ್ ಗೆಲುವಿನ ಅಧಿಕೃತ ಘೋಷಣೆ ಮಾಡಿದ ಎಲೆಕ್ಟೊರಲ್ ಕಾಲೇಜ್ಬೈಡನ್ ಗೆಲುವಿನ ಅಧಿಕೃತ ಘೋಷಣೆ ಮಾಡಿದ ಎಲೆಕ್ಟೊರಲ್ ಕಾಲೇಜ್

ಡಚ್ ಭದ್ರತಾ ಸಂಶೋಧಕರಾದ ವಿಕ್ಟರ್ ಗೇವರ್ಸ್ ಎಂಬುವವರು ಟ್ರಂಪ್ ಅವರ ಟ್ವಿಟ್ಟರ್ ಖಾತೆಗೆ ಲಾಗ್‌ಇನ್ ಆಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.

Donald Trump Twitter Account Hacked, No Charges: Dutch Prosecutors

ಟ್ರಂಪ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿಲ್ಲವೆಂದು ವೈಟ್‌ಹೌಸ್ ಮತ್ತು ಟ್ವಿಟ್ಟರ್‌ನ ಆಡಳಿತ ವರ್ಗ ಸ್ಪಷ್ಟನೆ ನೀಡಿತ್ತು.@realDonaldTrump' ಖಾತೆಯ ಪಾಸ್‌ವರ್ಡ್ ಊಹೆ ಮೂಲಕ ವಿಕ್ಟರ್ ಗೇವರ್ಸ್ ಡೊನಾಲ್ಡ್ ಟ್ರಂಪ್ ಅಧಿಕೃತ ಖಾತೆಗೆ ಲಾಕ್‌ಇನ್ ಆಗಿದ್ದರು ಎನ್ನಲಾಗಿದೆ.

ವಿಕ್ಟರ್ ಗೇವರ್ಸ್ ಅವರು ಯಾವುದೇ ದುರುದ್ದೇಶ ಇಟ್ಟುಕೊಂಡು ಟ್ರಂಪ್ ಖಾತೆಗೆ ಲಾಗ್‌ಇನ್ ಆಗಿಲ್ಲ. ಹೀಗಾಗಿ ಅವರಿಗೆ ಯಾವುದೇ ಶಿಕ್ಷೆ ವಿಧಿಸಲಾಗುವುದಿಲ್ಲ ಅವರೊಬ್ಬ ಎಥಿಕಲ್ ಹ್ಯಾಕರ್ ಎಂದು ಹೇಳಿದ್ದಾರೆ.

ವಿಕ್ಟರ್ ಗೇವರ್ಸ್ ಅವರು ಟ್ರಂಪ್ ಖಾತೆಗೆ ಲಾಗ್‌ಇನ್ ಆಗಲು ಹಲವು ಬಾರಿ ಪ್ರಯತ್ನಿಸಿದ ಬಳಿಕ maga2020 ಎಂಬ ಪಾಸ್‌ವರ್ಡ್ ಅನ್ನು ಟೈಪ್ ಮಾಡಿದ್ದರು. ಆಗ ಟ್ರಂಪ್ ಅವರ ಖಾತೆ ತೆರೆದುಕೊಂಡಿತ್ತು. maga2020 ಎಂದರೆ ಮೇಕ್ ಅಮೆರಿಕ ಗ್ರೇಟ್ ಅಗೈನ್ ಎಂದು ಅರ್ಥ. ಈ ಹೇಳಿಕೆಯು ಟ್ರಂಪ್ ಭಾಷಣದಲ್ಲಿ ಪದೇಪದೇ ಉಲ್ಲೇಖವಾಗಿದೆ.

English summary
Dutch prosecutors Wednesday said a man had cracked US President Donald Trump's Twitter account in October despite denials from Washington and the company, but added that the so-called "ethical hacker" would not face charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X