ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 'ನೆಗೆಟಿವ್'!
ವಾಷಿಂಗ್ಟನ್, ಮೇ 8: ಅಮೇರಿಕಾದಲ್ಲಂತೂ ಮಾರಣಾಂತಿಕ ಕೊರೊನಾ ವೈರಸ್ ರುದ್ರತಾಂಡವವಾಡುತ್ತಿದೆ. ಇಲ್ಲಿಯವರೆಗೂ ಯುಎಸ್ಎನಲ್ಲಿ 12,92,623 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, 76,928 ಮಂದಿ ಜೀವ ಕಳೆದುಕೊಂಡಿದ್ದಾರೆ.
ದಿನೇ ದಿನೇ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ವೈಟ್ ಹೌಸ್ ಕ್ಯಾಂಪಸ್ ನಲ್ಲಿ ಕಾರ್ಯನಿರ್ವಹಿಸುವ ಯುಎಸ್ ಮಿಲಿಟರಿ ಪಡೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಇದಾದ ಬೆನ್ನಲ್ಲೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಇಬ್ಬರಿಗೂ 'ನೆಗೆಟಿವ್' ಕಂಡುಬಂದಿದೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ವೈಟ್ ಹೌಸ್ ವಕ್ತಾರ ಸ್ಪಷ್ಟಪಡಿಸಿದ್ದಾರೆ.
* ವಿಶ್ವದ ಅಂಕಿ-ಅಂಶ
ಕೊರೊನಾ ವೈರಸ್ ಸೋಂಕಿತರು - 39,16,338
ಕೊರೊನಾ ವೈರಸ್ ನಿಂದ ಮೃತಪಟ್ಟವರು - 270,711
ಸಂಪೂರ್ಣವಾಗಿ ಗುಣಮುಖರಾದವರು - 13,43,054
ಚಿಂತಾಜನಕ ಸ್ಥಿತಿಯಲ್ಲಿ ಇರುವವರು - 48,958












Click it and Unblock the Notifications