ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧ: ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 28: ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Recommended Video

BMRCL ಕಳೆದ ವರ್ಷ ₹598 ಕೋಟಿ ರೂ ನಷ್ಟ | Oneindia Kannada

ಶ್ವೇತಭವನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕಾ ಸೇರಿದಂತೆ ಇಡೀ ವಿಶ್ವ ಕಣ್ಣಿಗೆ ಕಾಣದ ಹೊಸ ಶತ್ರುವಿನಿಂದ ನಲುಗಿದ್ದು, ಧೈರ್ಯಶಾಲಿ ಅಮೆರಿಕಾ ಜನತೆ ಈ ಸವಾಲನ್ನು ದಿಟ್ಟತೆಯಿಂದ ಎದುರಿಸುತ್ತೇವೆ ಎಂದರು.

ಕೊರೊನಾವೈರಸ್ ಚಿಕಿತ್ಸೆ ಕುರಿತಂತೆ ಮಹತ್ವದ ಘೋಷಣೆ ಕೊರೊನಾವೈರಸ್ ಚಿಕಿತ್ಸೆ ಕುರಿತಂತೆ ಮಹತ್ವದ ಘೋಷಣೆ

ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ. ಅವುಗಳನ್ನು ನಾವು ಮುಂಚಿತವಾಗಿ ಉತ್ಪಾದಿಸುತ್ತಿರುವುದರಿಂದ ಅನೇಕ ಡೋಸ್ ಗಳ ದೊರೆಯಲಿವೆ. ಈ ವರ್ಷ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಹೊಂದುತ್ತೇವೆ. ಒಟ್ಟಾಗಿ ಕೊವಿಡ್ ನ್ನು ತೊಲಗಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.

Donald Trump Says Will Produce Covid Vaccine By This Year End Or Sooner

ಈ ವರ್ಷಾಂತ್ಯ ಅಥವಾ ಅದಕ್ಕೂ ಮುಂಚಿತವಾಗಿ ಲಸಿಕೆಯನ್ನು ತಯಾರಿಸಲಿದ್ದೇವೆ. ಕೊರೋನಾ ವೈರಸ್ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಯಶಸ್ವಿಯಾಗಿ ಹೋರಾಡಿ ಹಿಂದೆದಿಗಿಂತಲೂ ಬಲವಾಗಿ ಹೊರಹೊಮ್ಮುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಭಾರತದಲ್ಲಿ ರಷ್ಯಾ ತಯಾರಿಸಿರುವ ಕೊರೊನಾ ವೈರಸ್‌ ಲಸಿಕೆ ಸ್ಪುಟ್ನಿಕ್‌ - V ಸಂಬಂಧ ಆ ದೇಶದ ಸರಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಸ್ಪುಟ್ನಿಕ್‌ - V ಲಸಿಕೆಗೆ ಸಂಬಂಧಿಸಿದಂತೆ, "ಎರಡೂ ದೇಶಗಳು (ಭಾರತ ಮತ್ತು ರಷ್ಯಾ) ಸಂಪರ್ಕದಲ್ಲಿವೆ. ಪ್ರಾಥಮಿಕ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದ್ದು, ವಿಸ್ತೃತ ಮಾಹಿತಿಯನ್ನು ಎದುರು ನೀಡಲಾಗುತ್ತಿದೆ," ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ವಾರಗಳ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೊರೊನಾ ವೈರಸ್‌ಗೆ ರಷ್ಯಾ ಲಸಿಕೆ ತಯಾರಿಸಿರುವುದಾಗಿ ಘೋಷಿಸಿದ್ದರು. ಜೊತೆಗೆ ಲಸಿಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರ ರಷ್ಯಾ ಎಂದು ಬಹಿರಂಗವಾಗಿ ಘೋಷಿಸಿದ್ದರು.

English summary
Terming COVID-19 as a new and powerful invisible enemy US President Donald Trump on Thursday (local time) said that the US would produce a coronavirus vaccine by the end of this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X