ಭಯೋತ್ಪಾದಕ ರಾಷ್ಟ್ರ ಪಟ್ಟಿಯಿಂದ ಸುಡಾನ್ ಹೊರಕ್ಕೆ: ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 20: ಭಯೋತ್ಪಾದಕ ರಾಷ್ಟ್ರದ ಪಟ್ಟಿಯಿಂದ ಸುಡಾನ್ ಅನ್ನು ಹೊರಗಿಡಲು ಅಮೆರಿಕ ಮುಂದಾಗಿದೆ.

ಅಮೆರಿಕ ಭಯೋತ್ಪಾದನಾ ಸಂತ್ರಸ್ತರ ಕುಟುಂಬಗಳಿಗೆ 335 ಮಿಲಿಯನ್ ಡಾಲರ್ ಪರಿಹಾರ ನೀಡಲು ಸುಡಾನ್ ಒಪ್ಪಿಗೆ ನೀಡಿದ ಬಳಿಕ ಅಮೆರಿಕ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಪರಿಹಾರ ಹಣವನ್ನು ವರ್ಗಾವಣೆ ಮಾಡಿದ ಕೂಡಲೇಪಟ್ಟಿಯಿಂದ ಹೊರಕ್ಕೆ ತೆಗೆಯಲಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.ಈ ಕ್ರಮದಿಂದ ಆಫ್ರಿಕಾ ದೇಶಗಳ ಆರ್ಥಿಕ ಸುಧಾರಣೆಗೆ ಕದ ತೆರೆದಂತಾಗಿದೆ. ಹಾಗೆಯೇ ಆಫ್ರಿಕನ್ ದೇಶಗಳು ಅಂತಾರಾಷ್ಟ್ರೀಯ ಸಾಲ ಪಡೆಯಲು ಕೂಡ ಈ ಕ್ರಮದಿಂದ ನೆರವಾಗಲಿದೆ.

Donald Trump Says Sudan Will Be Removed From Terrorism List

ಹಾಗೆಯೇ ಇಸ್ರೇಲ್‌ಗೆ ಗಲ್ಫ್‌ ರಾಷ್ಟ್ರಗಳ ಮಾಹಿತಿ ನೀಡಲು ಕೂಡ ಸುಡಾನ್ ಒಪ್ಪಿಕೊಂಡಿದೆ. ಇಸ್ರೇಲ್ ಜತೆ ಬಾಂಧವ್ಯಕ್ಕೆ ಒಪ್ಪಿರುವುದು ಕೂಡ ಆಶ್ಚರ್ಯದ ಸಂಗತಿಯಾಗಿದೆ.
ಗಲ್ಫ್ ರಾಷ್ಟ್ರಗಳ ವಿವಾದಕ್ಕೆ ತೆರೆ ಎಳೆಯಲು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಪ್ರಯತ್ನಿಸುತ್ತಿವೆ.

ಇತ್ತೀಚೆಗೆ ಸೌದಿ ಅರೇಬಿಯಾ ಸೇರಿ ಇತರೆ ಗಲ್ಫ್ ರಾಷ್ಟ್ರಗಳೊಂದಿಗೆ ಇಸ್ರೇಲ್ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ಸ್ಪರಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+