Bengaluru Weather: ನಗರದ 22 ಬಡಾವಣೆಗಳಿಗೆ ತಂಪೆರೆದ ಮಳೆ, ಮೇ 28ರವರೆಗಿನ ಹವಾಮಾನ ಮುನ್ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಅಲ್ಲಲ್ಲಿ ಹಗುರ ಮಳೆ ಆಗಿದೆ. ಒಟ್ಟು ಸುಮಾರು 25 ವಾರ್ಡ್‌ಗಳಲ್ಲಿ ಮಳೆ ಸುರಿದಿದ್ದು, ವಾತಾವರಣ ರಾತ್ರಿ ತಂಪಿನಿಂದ ಕೂಡಿತ್ತು. ಗ್ರೇಟರ್‍ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ದಕ್ಷಿಣ ವಲಯ ಹಾಗೂ ಮಹಾದೇವಪುರ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆ ತಂಪೆರೆಯಿತು. ಮುಂದಿನ ನಾಲ್ಕು ದಿನ (ಮೇ 28) ನಗರದಲ್ಲಿ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಡೀ ದಿನ ನಗರದ ವಾತಾವರಣ ಸಹಜವಾಗಿತ್ತು. ಸಂಜೆ ನಂತರ ಮಬ್ಬು ಕವಿಯಿತು, ತಂಪು ವಾತಾವರಣ ಕಂಡು ಬಂತು. ರಾತ್ರಿ 10 ಗಂಟೆ ನಂತರ ದೊಡ್ಡಾನೆಕುಂದಿ, ಮಾರತ್ತಹಳ್ಳಿ, ವೆಂಕಟಾಪುರ ರಸ್ತೆ, ಕೋರಮಂಗಲ, ಜಕ್ಕಸಂದ್ರ, ಆಗರ, ವಿವಿ ಪುರಂ, ಹೊಂಗಸಂದ್ರ, ಪುಟ್ಟೇನಹಳ್ಳಿ, ಬೆಳ್ಳಂದೂರು, ಎಚ್‌ಎಸ್‌ಆರ್ ಬಡಾವಣೆ, ಆಗರ, ವಿದ್ಯಾಪೀಠ, ನಾಯಂಡಹಳ್ಳಿ ಸೇರಿ ಹಲವು ಕಡೆಗಳಲ್ಲಿ ಮಳೆ ಅಯಿತು.

Bengaluru Weather

ಬೆಂಗಳೂರಿನ ತಾಪಮಾನ ಸ್ಥಿತಿಗತಿ ಹೇಗಿದೆ?

ಭಾನುವಾರ ಸಂಜೆ ಬೆಂಗಳೂರು ನಗರದಲ್ಲಿ ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 32.5 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್‌ ವ್ಯಾಪ್ತಿಯಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್ಎಎಲ್‌ನಲ್ಲಿ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ವಾರ 35 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ತಾಪಮಾನ ಭಾನುವಾರಕ್ಕೆ ಸುಮಾರು 2 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನದಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ.

IMD Weather Forecast: ಚಂಡಮಾರುತ ಪ್ರಸರಣ, ಮುಂದಿನ 5 ದಿನ ಈ ಭಾಗಗಳಲ್ಲಿ ಧಾರಾಕಾರ ಮಳೆ: ಹವಾಮಾನ ವರದಿ
IMD Weather Forecast: ಚಂಡಮಾರುತ ಪ್ರಸರಣ, ಮುಂದಿನ 5 ದಿನ ಈ ಭಾಗಗಳಲ್ಲಿ ಧಾರಾಕಾರ ಮಳೆ: ಹವಾಮಾನ ವರದಿ

ಬೆಂಗಳೂರು ಮಳೆ ಮುನ್ಸೂಚನೆ

ನಗರಾದ್ಯಂತ ಮುಂದಿನ ನಾಲ್ಕು ದಿನ ಹಗಲು ಕೊಂಚ ಬಿಸಿಲು, ಸೆಖೆ ಕಂಡು ಬರಬಹುದು. ಇದರೊಂದಿಗೆ ವಿವಿಧ ಪ್ರದೇಶಗಳಲ್ಲಿ ತಂಪು ಗಾಳಿ, ಮಬ್ಬು ಕವಿದ ವಾತಾವರಣ ನಿರ್ಮಾಣವಾಗಲಿದೆ. ಸಂಜೆ ಅಥವಾ ರಾತ್ರಿ ಇದೇ ರೀತಿಯ ಮಳೆ ಸುರಿಯುವ ಲಕ್ಷಣಗಳು ಇವೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದ ಭಾಗದಲ್ಲಿ ಉಂಟಾಗಿರುವ ವಾಯು ಚಂಡಮಾರುತ ಪ್ರಭಾವದಿಂದಾಗಿ ತಮಿಳುನಾಡು, ಚೆನ್ನೈ, ಕೆರಳ ಹಾಗೂ ಕರ್ನಾಟಕದ ವಿವಿಧೆಡೆ ಮಳೆ ಆಗುತ್ತಿದೆ. ಅದೇ ರೀತಿ ಬೆಂಗಳೂರಿಗೂ ಹೆಚ್ಚಿನ ಮಳೆ ಆಗಬಹುದೆಂದು ಭಾನುವಾರ 'ಯೆಲ್ಲೋ ಅಲರ್ಟ್' ನೀಡಲಾಗಿತ್ತು. ಆದರೆ ಬದಲಾದ ಹವಾಮಾನ ಕಾರಣಂದ ಭಾರೀ ಮಳೆ ಆಗದೆ ಕೆಲವೆಡೆ ಮಾತ್ರವೇ ಹಗುರ ಮಳೆ ಸುರಿದಿದೆ.

ಇದೇ ವಾರ ಮುಂಗಾರು ಮಳೆ ಆಗಮನ

ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಒಂದೆರಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಇದೇ ವಾರ ಮುಂಗಾರು ಮಳೆ ಸುರಿಸುವ ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+